ಇದು ವಿಶ್ವದ ಅತ್ಯಂತ ದುಬಾರಿ ಕೊರೊನಾ ಮಾಸ್ಕ್; ಬೆಲೆ ಜಸ್ಟ್ 11 ಕೋಟಿ ರು.

ಅಯ್ಯೋ, ಹಣಕಾಸಿಗೆ ಬಲೇ ಕಷ್ಟ ಆಗಿದೆ. ಇಡೀ ಜಗತ್ತಿಗೆ ಆ ಸಮಸ್ಯೆ ಬಂದಿದೆ. ಕೊರೊನಾ ಬಂದ ಮೇಲೆ ಶ್ರೀಮಂತರು ಅನ್ನೋರೇ ಇಲ್ಲ ಬಿಡಿ ಅಂತ ಅಂದುಕೊಳ್ಳುವವರು ಇದ್ದರೆ ಹೃದಯವನ್ನು ಗಟ್ಟಿ ಮಾಡಿಕೊಂಡು ಈ ಸುದ್ದಿಯನ್ನು ಓದಿ. ಏಕೆಂದರೆ ಕೊರೊನಾದಂಥ ಕೊರೊನಾದ ಮಾಸ್ಕ್ ಅನ್ನು ಇಸ್ರೇಲಿ ಜ್ಯುವೆಲ್ಲರಿಯೊಂದು ಚಿನ್ನದಲ್ಲಿ ಅದಕ್ಕೆ ವಜ್ರಗಳನ್ನು ಕೂಡಿಸಿ, 15 ಲಕ್ಷ ಅಮೆರಿಕನ್ ಡಾಲರ್ ಅಥವಾ ಭಾರತದ ರುಪಾಯಿಗಳ ಹೇಳಬೇಕೆಂದರೆ, 11 ಕೋಟಿ ರುಪಾಯಿಯಲ್ಲಿ ಸಿದ್ಧಪಡಿಸುತ್ತಿದೆ.

ಆ ಕಂಪೆನಿಯೇ ಹೇಳಿಕೊಳ್ಳುವಂತೆ, ವಿಶ್ವದ ಅತ್ಯಂತ ದುಬಾರಿ ಕೊರೊನಾ ಮಾಸ್ಕ್ ಇದೇ. ಹೌದು, ಇದು ಮುಖಕ್ಕೆ ಬಳಸುವ ಮಾಸ್ಕ್ ಬೆಲೆಯೇ. 18 ಕ್ಯಾರೆಟ್ ಬಿಳಿ ಚಿನ್ನಕ್ಕೆ (ವೈಟ್ ಗೋಲ್ಡ್) 3600 ಬಿಳಿ ಮತ್ತು ಕಪ್ಪು ವಜ್ರಗಳನ್ನು ಸಿಂಗರಿಸಲಾಗಿದೆ. ಅತ್ಯುತ್ಕೃಷ್ಟವಾದ N99 ಫಿಲ್ಟರ್ಸ್ ಬಳಸಲಾಗಿದೆ. ಇವೆಲ್ಲ ಖರೀದಿದಾರರು ಹೇಳಿ ಮಾಡಿಸಿಕೊಂಡಿರುವುದು. ಇನ್ನು ಡಿಸೈನ್ ಮಾಡಿರುವವರು ಐಸಾಕ್ ಲೆವಿ.

ಯೆಲ್ ಕಂಪೆನಿಯ ಮಾಲೀಕರಾಗಿರುವ ಲೆವಿ ಹೇಳುವಂತೆ, ಖರೀದಿದಾರರದು ಇನ್ನೆರಡು ಬೇಡಿಕೆ ಇದ್ದವಂತೆ. ಅದು ಈ ವರ್ಷದ ಕೊನೆ ಹೊತ್ತಿಗೆ ಪೂರೈಸುತ್ತೇವೆ ಎನ್ನುತ್ತಾರೆ. ವಿಶ್ವದಲ್ಲೇ ಅತ್ಯಂತ ದುಬಾರಿ ಆಗಿರಬೇಕು ಎಂದಿದ್ದರಂತೆ. ಕೊನೆ ಷರತ್ತು, ಬಹಳ ಸುಲಭವಾಗಿ ನೆರವೇರಿಸಬಹುದು ಎನ್ನುತ್ತಾರೆ ಲೆವಿ.

ಆದರೆ, ಖರೀದಿ ಮಾಡುತ್ತಿರುವವರು ಯಾರು ಎಂಬುದನ್ನು ಮಾತ್ರ ಬಹಿರಂಗ ಮಾಡಿಲ್ಲ. ಯುನೈಟೆಡ್ ಸ್ಟೇಟ್ಸ್ ನಲ್ಲಿ ವಾಸವಿರುವ ಚೀನಾ ಮೂಲದ ಉದ್ಯಮಿ ಎಂದಷ್ಟೇ ಹೇಳಿದ್ದಾರೆ. ಬಹುತೇಕ ದೇಶಗಳಲ್ಲಿ ಸಾರ್ವಜನಿಕವಾಗಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಆದರೆ ಈಗ ಸಿದ್ಧಪಡಿಸುತ್ತಿರುವ ಮಾಸ್ಕ್ ತೂಕ 270 ಗ್ರಾಮ್ ಗಳಂತೆ. ಅಂದರೆ ಸಾಮಾನ್ಯ ಸರ್ಜಿಕಲ್ ಮಾಸ್ಕ್ ಗಿಂತ ನೂರು ಪಟ್ಟು ಹೆಚ್ಚು ತೂಕ. ವಾಸ್ತವವಾಗಿ ನೋಡಿದರೆ ಧರಿಸುವುದು ಬಹಳ ಕಷ್ಟ.

ಇದು ವಿಶ್ವದ ಅತ್ಯಂತ ದುಬಾರಿ ಕೊರೊನಾ ಮಾಸ್ಕ್; ಬೆಲೆ ಜಸ್ಟ್ 11 ಕೋಟಿ

ಜೆರುಸಲೇಂನಲ್ಲಿ ಇರುವ ತಮ್ಮ ಕಾರ್ಖಾನೆಯಲ್ಲಿ ನಡೆದ ಸಂದರ್ಶನದ ವೇಳೆ ಲೆವಿ ಮಾಸ್ಕ್ ನ ಹಲವು ತುಂಡುಗಳನ್ನು ಪ್ರದರ್ಶಿಸಿದ್ದಾರೆ. ವಜ್ರಗಳಿಂದ ಕವರ್ ಆದ, ಹಾಗೂ ಅದರಲ್ಲಿ ಒಂದು ರಂಧ್ರ ಇರುವಂಥ ಗೋಲ್ಡ್ ಪ್ಲೇಟ್ ಫಿಲ್ಟರ್ ಸಹ ತೋರಿಸಿದ್ದಾರೆ. "ಹಣದಿಂದ ಎಲ್ಲವನ್ನೂ ಖರೀದಿಸಲು ಆಗಲ್ಲ. ಆದರೆ ಅತ್ಯಂತ ದುಬಾರಿ ಕೊರೊನಾ ಮಾಸ್ಕ್ ಖರೀದಿಸಿದ ವ್ಯಕ್ತಿ ಅದನ್ನು ಧರಿಸಿ, ಓಡಾಡಿದರೆ ಇತರ ಗಮನ ಸೆಳೆಯುತ್ತಾರೆ. ಅದರಿಂದ ತೃಪ್ತಿ ಸಿಗಬಹುದು" ಎನ್ನುತ್ತಾರೆ ಲೆವಿ.

ಇಡೀ ವಿಶ್ವದಲ್ಲಿ ಆರ್ಥಿಕ ಸಮಸ್ಯೆ ತಲೆದೋರಿರುವ ಸಂದರ್ಭದಲ್ಲಿ ಇಂಥ ದುಬಾರಿ ಮಾಸ್ಕ್ ಏಕೆ ಎಂದು ಕೇಳಿದರೆ, ಇದು ನನಗಾಗಿ ಸಿದ್ಧಪಡಿಸಿರುವುದಲ್ಲ. ಇಂಥ ಮಾಸ್ಕ್ ತಯಾರಿಸುವುದಕ್ಕೆ ನನಗೆ ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು ಎನ್ನುತ್ತಾರೆ ಲೆವಿ. "ಇಂಥ ಸಂಕಷ್ಟದ ಸಮಯದಲ್ಲಿ ನಮ್ಮ ಸಿಬ್ಬಂದಿಗೆ ಕೆಲಸ ದೊರಕಿದಂತಾಯಿತು. ಇದರಿಂದ ಬಹಳ ಸಂತೋಷವಾಗಿದೆ" ಎಂದು ಹೇಳುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+