For Quick Alerts
ALLOW NOTIFICATIONS  
For Daily Alerts

ವಿಶ್ವದ ಅತಿ ದೊಡ್ಡ ತೈಲ ರಫ್ತುದಾರ ಕಂಪೆನಿ ಸೌದಿ ಅರಾಮ್ಕೋ ಲಾಭ 73% ಇಳಿಕೆ

|

ಈ ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸೌದಿಯ ಸರ್ಕಾರಿ ತೈಲ ಸಮೂಹ ಅರಾಮ್ಕೋ ಲಾಭ 73% ಕುಗ್ಗಿದೆ. ಕೊರೊನಾದ ಕಾರಣಕ್ಕೆ ವಿಶ್ವದ ಅತಿದೊಡ್ಡ ತೈಲ ರಫ್ತುದಾರ ಕಂಪೆನಿ ಅರಾಮ್ಕೋದ ಮಾರಾಟದಲ್ಲಿ ಭಾರೀ ಇಳಿಕೆಯಾಗಿದೆ. ಲಾಕ್ ಡೌನ್ ನಿಂದಾಗಿ ಎಲ್ಲ ಪ್ರಮುಖ ತೈಲ ಕಂಪೆನಿಗಳಿಗೆ ಎರಡನೇ ತ್ರೈಮಾಸಿಕದಲ್ಲಿ ಭಾರೀ ಪೆಟ್ಟು ಬಿದ್ದಿದೆ.

ಎರಡು ದಶಕಗಳಲ್ಲೇ ತೈಲ ಬೆಲೆ ಈ ಕನಿಷ್ಠ ಮಟ್ಟವನ್ನು ತಲುಪಿಲ್ಲ. ಅರಾಮ್ಕೋದಿಂದ 29,400 ಕೋಟಿ ಅಮೆರಿಕನ್ ಡಾಲರ್ ಸಂಗ್ರಹಿಸಿ, ಕಳೆದ ವರ್ಷ ರಿಯಾದ್ ನಲ್ಲಿ ಲಿಸ್ಟ್ ಆಗಿತ್ತು. ಜಾಗತಿಕವಾಗಿ ಕೊರೊನಾ ವ್ಯಾಪಿಸಿದ ಮೇಲೆ ಕಚ್ಚಾ ತೈಲ, ನೈಸರ್ಗಿಕ ಅನಿಲ ಮತ್ತು ಪೆಟ್ರೋಲಿಯಂ ಉತ್ಪನ್ನಗಳಿಗೆ ಬೇಡಿಕೆ ಕಡಿಮೆ ಆಗಿದೆ.

ವಿಶ್ವದ ಅತಿದೊಡ್ಡ ಸಾರ್ವಜನಿಕ ಲಿಸ್ಟೆಡ್ ಕಂಪೆನಿಯ ಲಾಭ 20.6ರಷ್ಟು ಡೌನ್

 

ಇತ್ತೀಚಿನ ಇತಿಹಾಸದ ಘಟನೆಗಳಲ್ಲಿ ವಿಶ್ವ ಕಂಡರಿಯದ ಸವಾಲನ್ನು ಕೊರೊನಾ ತಂದಿಟ್ಟಿದೆ. ತುಂಬ ಸಂಕೀರ್ಣವಾದ ಹಾಗೂ ಬದಲಾಗುವ ವ್ಯವಹಾರ ವಾತಾವರಣಕ್ಕೆ ಹೊಂದಿಕೊಳ್ಳಬೇಕಾಗಿದೆ ಎದು ಸೌದಿ ಅರಾಮ್ಕೋದ ಸಿಇಒ ಅಮಿನ್ ನಸೀರ್ ಭಾನುವಾರ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿಶ್ವದ ದೊಡ್ಡ ತೈಲ ರಫ್ತುದಾರ ಕಂಪೆನಿ ಸೌದಿಅರಾಮ್ಕೋ ಲಾಭ 73% ಇಳಿಕೆ

ವಿಶ್ವದ ಹಲವು ರಾಷ್ಟ್ರಗಳು ನಿರ್ಬಂಧ ತೆರವು ಮಾಡುತ್ತಿದ್ದು, ಆರ್ಥಿಕತೆಗೆ ಮತ್ತೆ ಚೈತನ್ಯ ತುಂಬುತ್ತಿರುವುದರಿಂದ ಭಾಗಶಃ ಚೇತರಿಕೆ ಕಾಣುತ್ತಿದ್ದೇವೆ. ಅರಾಮ್ಕೋ ಕಂಪೆನಿ ನಿವ್ವಳ ಲಾಭವು 2460 ಕೋಟಿ ರಿಯಾಲ್ ಗೆ ಕುಸಿದಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿಯು 9260 ಕೋಟಿ ರಿಯಾಲ್ ಲಾಭ ಮಾಡಿತ್ತು.

ಈ ವರ್ಷದ ಎರಡನೇ ತ್ರೈ ಮಾಸಿಕದಲ್ಲಿ 1875 ಕೋಟಿ ಅಮೆರಿಕನ್ ಡಾಲರ್ ಲಾಭಾಂಶವನ್ನು ವಿತರಿಸುವುದಾಗಿ ಕಂಪೆನಿ ತಿಳಿಸಿದೆ. ಅಂದಹಾಗೆ ಸೌದಿ ಸರ್ಕಾರದ ವಿತ್ತೀಯ ಕೊರತೆಯನ್ನು ತುಂಬಿಕೊಳ್ಳಲು ಕಂಪೆನಿಯ ಡಿವಿಡೆಂಡ್ ನಿಂದ ಸಹಾಯ ಆಗುತ್ತದೆ.

English summary

World's Number 1 Oil Exporter Company Saudi Aramco's Net Profit Plunges 73 Percent In June Quarter

Saudi Aramco's year second quarter net profit plunges 73% due to corona virus impact.
Company Search
COVID-19