ವಿಶ್ವದ ಅತೀ ಶ್ರೀಮಂತ ನಗರವೆಂಬ ಹೆಗ್ಗಳಿಕೆಯನ್ನು ನ್ಯೂಯಾರ್ಕ್ ಪಡೆದುಕೊಂಡಿದೆ. ಹಾಗೆಯೇ 2023ರಲ್ಲಿ ವಿಶ್ವದಲ್ಲೇ ಅಧಿಕ ಮಿಲಿಯನೇರ್‌ಗಳನ್ನು ಹೊಂದಿರುವ ನಗರವು ಕೂಡಾ ನ್ಯೂಯಾರ್ಕ್ ಆಗಿದೆ ಎಂದು ವರದಿಯು ಹೇಳಿದೆ. ಈ ನಗರದಲ್ಲಿ ಒಟ್ಟಾಗಿ ಸುಮಾರು 3,40,000 ಬಿಲಿಯನೇರ್‌ಗಳು ಇದ್ದಾರೆ ಎಂದು ಗ್ಲೋಬಲ್ ವೆಲ್ತ್ ಟ್ರಾಕರ್ ಹೆನ್ಲಿ & ಪಾರ್ಟ್‌ನರ್ಸ್ ಹೇಳಿದೆ.
ನ್ಯೂಯಾರ್ಕ್ ಬಳಿಕ ಟೋಕಿಯೋ ಹಾಗೂ ಸ್ಯಾನ್ ಫ್ರಾನ್ಸಿಸ್ಕೋ ಬೇ ಏರಿಯಾದಲ್ಲಿ ಅತೀ ಹೆಚ್ಚು ಮಿಲಿಯನೇರ್‌ಗಳು ಇದ್ದಾರೆ. ಅಂದರೆ ಎರಡನೇ ಸ್ಥಾನದಲ್ಲಿ ಟೋಕಿಯೋ ಮತ್ತು ಮೂರನೇ ಸ್ಥಾನದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಬೇ ಇದೆ. ಈ ಎರಡು ನಗರಗಳಲ್ಲಿ ಕ್ರಮವಾಗಿ 290,300 ಮತ್ತು 285,000 ಬಿಲಿಯನೇರ್‌ಗಳು ಇದ್ದಾರೆ.

ವಿಶ್ವದ ಸಂಪದ್ಬರಿತ ನಗರಗಳ ವರದಿ 2023ರ ವರದಿಯಲ್ಲಿ ಒಟ್ಟಾಗಿ 97 ನಗರಗಳು ಒಳಗೊಳ್ಳುತ್ತದೆ. ಇದು ವಿಶ್ವದ 9 ರಾಷ್ಟ್ರಗಳಲ್ಲಿರುವ ನಗರಗಳು ಆಗಿದೆ. ಆಫ್ರಿಕಾ, ಆಸ್ಟ್ರೇಲಿಯಾ, ಸಿಐಎಸ್, ಪೂರ್ವ ಏಷ್ಯಾ, ಯುರೋಪ್, ಮಧ್ಯ ಏಷ್ಯಾ, ಉತ್ತರ ಅಮೇರಿಕಾ, ದಕ್ಷಿಣ ಅಮೇರಿಕಾ, ಆಗ್ನೇಯ ಏಷ್ಯಾದಲ್ಲಿ ಈ 97 ಶ್ರಿಮಂತ ನಗರಗಳು ಇದೆ. ಈ ಪೈಕಿ ವಿಶ್ವದ ಟಾಪ್ ಹಬ್‌ಗಳು ಇದೆ.
ವಿಶ್ವದ ಶ್ರೀಮಂತ ನಗರದಲ್ಲಿ ಯುಎಸ್ ಟಾಪ್ ಸ್ಥಾನದಲ್ಲಿದೆ. ಏಕೆಂದರೆ ಯುಎಸ್‌ನ ನಾಲ್ಕು ನಗರಗಳು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಅದುವೇ ನ್ಯೂಯಾರ್ಕ್, ದಿ ಬೇ ಏರಿಯಾ, ಲಾಸ್ ಏಂಜಲೀಸ್, ಚಿಕಾಗೋ. ಚೀನಾದ ಎರಡು ನಗರಗಳಾದ ಬೇಜಿಂಗ್, ಶಾಂಘೈ ವಿಶ್ವದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದೆ. ಇನ್ನು ವಿಶ್ವದ ಶ್ರೀಮಂತ ನಗರಗಳ ಪಟ್ಟಿಯಲ್ಲಿ ಲಂಡನ್ ನಾಲ್ಕನೇ ಸ್ಥಾನಕ್ಕೆ ಇಳಿದಿದೆ. ಲಂಡನ್‌ನಲ್ಲಿ ಪ್ರಸ್ತುತ 258,000 ಬಿಲಿಯನೇರ್‌ಗಳು ಇದ್ದಾರೆ.
ಅದರ ನಂತರದ ಸ್ಥಾನದಲ್ಲಿರುವ ಸಿಂಗಾಪುರದಲ್ಲಿ 240,100 ಬಿಲಿಯನೇರ್‌ಗಳು ಇದ್ದಾರೆ. 2000ರಲ್ಲಿ ಲಂಡನ್ ವಿಶ್ವದಲ್ಲೇ ಅತೀ ಹೆಚ್ಚು ಬಿಲಿಯನೇರ್‌ಗಳನ್ನು ಹೊಂದಿರುವ ನಗರವಾಗಿತ್ತು. ಆದರೆ ಕಳೆದ 20 ವರ್ಷಗಳಲ್ಲಿ ಲಂಡನ್ ತನ್ನ ಸ್ಥಾನವನ್ನು ಕಳೆದುಕೊಳ್ಳುತ್ತಾ ಪ್ರಸ್ತುತ ನಾಲ್ಕನೇ ಸ್ಥಾನದಲ್ಲಿದೆ.
ನ್ಯೂಯಾರ್ಕ್ ಬಗ್ಗೆ ತಿಳಿಯಿರಿ
ನ್ಯೂಯಾರ್ಕ್‌ಗೆ ಬಿಗ್ ಆಪಲ್ ಎಂದೇ ಕರೆಯಲಾಗುತ್ತದೆ. ಇಲ್ಲಿ ಸುಮಾರು 3,40,000 ಮಿಲಿಯನೇರ್‌ಗಳು ಇದ್ದಾರೆ. ಹಾಗೆಯೇ 724 ಮಿಲಿಯನ್‌ನ ಅರ್ಧ ಭಾಗದಷ್ಟು ಸಂಪತ್ತನ್ನು ಹೊಂದಿರುವವರು ಇದ್ದಾರೆ. 58 ಬಿಲಿಯನೇರ್‌ಗಳು ಇದ್ದಾರೆ. ಇದು ವಿಶ್ವದ ಅತೀ ದೊಡ್ಡ ಸ್ಟಾಕ್ ಎಕ್ಸ್‌ಚೇಂಜ್‌ಗಳಾದ ಎನ್‌ವೈಎಸ್‌ಇ ಮತ್ತು ನಾಸ್‌ದಕ್ ಇರುವ ನಗರವಾಗಿದೆ.
ನಗರವು ಬ್ರಾಂಕ್ಸ್, ಬ್ರೂಕ್ಲಿನ್, ಮ್ಯಾನ್‌ಹ್ಯಾಟನ್, ಕ್ವೀನ್ಸ್ ಮತ್ತು ಸ್ಟೇಟನ್ ಐಲ್ಯಾಂಡ್‌ನ ಐದು ಬರೋಗಳನ್ನು ಒಳಗೊಂಡಿದೆ. ಮ್ಯಾನ್‌ಹ್ಯಾಟನ್‌ನ 5 ನೇ ಅವೆನ್ಯೂ ಸೇರಿದಂತೆ ವಿಶ್ವದ ಕೆಲವು ವಿಶೇಷ ವಸತಿ ಬೀದಿಗಳು ಕೂಡಾ ಇಲ್ಲಿದೆ. ಈ ನಗರದಲ್ಲಿ ಪ್ರಧಾನ ಅಪಾರ್ಟ್‌ಮೆಂಟ್‌ಗಳ ಬೆಲೆಗಳು ಪ್ರತಿ ಚದರ ಮೀಟರ್‌ಗೆ 27,000 ಡಾಲರ್‌ಗೂ ಮೀರಬಹುದು ಎಂದು ವರದಿಯಾಗಿದೆ.ಟಾಪ್ 10 ನಗರಗಳು, ಭಾರತದ ನಗರಗಳು
1. ನ್ಯೂಯಾರ್ಕ್
2. ಟೊಕಿಯೋ
3. ದಿ ಬೇ ಏರಿಯಾ
4. ಲಂಡನ್
5. ಸಿಂಗಾಪುರ
6. ಲಾಸ್ ಏಂಜಲೀಸ್
7. ಹಾಂಗ್ ಕಾಂಗ್
8. ಬೇಜಿಂಗ್
9. ಶಾಂಘೈ
10. ಸಿಂಡ್ನಿ
21. ಮುಂಬೈ
36. ದೆಹಲಿ
60. ಬೆಂಗಳೂರು
63. ಕೋಲ್ಕತ್ತಾ
65. ಹೈದರಾಬಾದ್
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications