ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಹಲವಾರು ಬ್ರಾಂಡ್‌ಗಳ ಮೂಲ ಕಂಪನಿ ಆಗಿರುವ ಎಲ್‌ವಿಎಂಎಚ್‌ನ ಸಿಇಒ ಮತ್ತು ಚೇರ್‌ಮನ್ ಆದ, ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಬರ್ನಾರ್ಡ್ ಅರ್ನಾಲ್ಟ್ ಒಂದು ದಿನದಲ್ಲೇ ಭಾರೀ ನಷ್ಟವನ್ನು ಕಂಡಿದ್ದಾರೆ. ಸ್ಟಾಕ್ ಮಾರುಕಟ್ಟೆಯಲ್ಲಿ ನಷ್ಟ ಉಂಟಾದ ಬಳಿಕ ಬರ್ನಾರ್ಡ್ ಅರ್ನಾಲ್ಟ್ 11.2 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದ್ದಾರೆ.
ಪ್ರಮುಖವಾಗಿ ಯುಎಸ್‌ನಲ್ಲಿ ಐಷಾರಾಮಿ ಸರಕುಗಳ ಬೇಡಿಕೆಯು ಕಡಿಮೆಯಾಗುತ್ತಿದೆ. ಇದರ ಪರಿಣಾಮವು ಬರ್ನಾರ್ಡ್ ಅರ್ನಾಲ್ಟ್ ಆದಾಯದ ಮೇಲೆ ಪ್ರಭಾವ ಉಂಟು ಮಾಡಿದೆ. ಈ ಎಲ್‌ವಿಎಂಎಚ್ ಸಂಸ್ಥೆಯಲ್ಲಿನ ಲೂಯಿ ವಿಟಾನ್ ಬ್ಯಾಗ್, ಮೊಯೆಟ್ & ಚಾಂಡನ್ ಶಾಂಪೇನ್, ಕ್ರಿಶ್ಚಿಯನ್ ಡಿಯರ್ ಗೌನ್‌ಗಳಿಗೆ ಬರ್ನಾರ್ಡ್ ಅರ್ನಾಲ್ಟ್ ಕೊಡುಗೆ ಅಪಾರವಾಗಿದೆ.

ಬ್ಲೂಮ್‌ಬರ್ಗ್ ವರದಿ ಪ್ರಕಾರ ಯುರೋಪಿಯನ್ ಐಷಾರಾಮಿ ಕಂಪನಿಗಳ ಷೇರುಗಳ ಬೆಲೆಗಳು ಹೆಚ್ಚಾದ ಕಾರಣ 2023ರ ಬಹುತೇಕ ಸಂದರ್ಭದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಆದಾಯವು ಏರಿಕೆಯಾಗಿದೆ. ಆದರೆ ಮಂಗಳವಾರ ಸ್ಟಾಕ್ ಮಾರುಕಟ್ಟೆಯಲ್ಲಿ ಷೇರುಗಳು ಕುಸಿತ ಕಂಡು ಬರ್ನಾರ್ಡ್ ಅರ್ನಾಲ್ಟ್ ಒಂದು ದಿನದಲ್ಲೇ 11 ಬಿಲಿಯನ್ ಡಾಲರ್ ಕಳೆದುಕೊಂಡಿದ್ದಾರೆ.
ಮಂಗಳವಾರ ಸ್ಟಾಕ್ ಮಾರುಕಟ್ಟೆಯಲ್ಲಿ ಆದ ಬದಲಾವಣೆ
ಮಂಗಳವಾರ ಬರ್ನಾರ್ಡ್ ಅರ್ನಾಲ್ಟ್ ಸ್ಟಾಕ್ ಮಾರುಕಟ್ಟೆಯಲ್ಲಿ ಯಾವುದೆ ಲಾಭವನ್ನು ಕಂಡಿಲ್ಲ. ಪ್ಯಾರಿಸ್‌ನಲ್ಲಿ ಎಲ್‌ವಿಎಂಎಚ್ ಷೇರು ಮಂಗಳವಾರ ಶೇಕಡ 5ರಷ್ಟು ಕುಸಿತ ಕಂಡಿದೆ. ವರ್ಷದಲ್ಲೇ ಇದು ಭಾರೀ ಪ್ರಮಾಣದ ಕುಸಿತವಾಗಿದೆ. ಇದರಿಂದಾಗಿ ಯುರೋಪಿಯನ್ ಐಷಾರಾಮಿ ವಸ್ತುಗಳ ವಲಯದಲ್ಲಿ ಸುಮಾರು 30 ಬಿಲಿಯನ್ ಡಾಲರ್ ನಷ್ಟವನ್ನು ಕಂಡಿದೆ.
ಇನ್ನು ಒಂದು ದಿನದಲ್ಲೇ 11 ಬಿಲಿಯನ್ ಡಾಲರ್ ಕಳೆದುಕೊಂಡರೂ ಕೂಡಾ ಈ ಫ್ರೆಂಚ್ ಬಿಲಿಯನೇರ್ ಬರ್ನಾರ್ಡ್ ಅರ್ನಾಲ್ಟ್ ಆದಾಯವು 191.6 ಬಿಲಿಯನ್ ಡಾಲರ್ ಇದೆ ಎಂದು ಬ್ಲೂಮ್‌ಬರ್ಗ್ ಬಿಲಿಯನೇರ್ ಇಂಡೆಕ್ಸ್ ಹೇಳಿದೆ. ಇನ್ನು ಈ ವರ್ಷದಲ್ಲಿ ಈವರೆಗೆ ಈ ವಿಶ್ವದ ಶ್ರೀಮಂತ ವ್ಯಕ್ತಿಯ ಆದಾಯಕ್ಕೆ 29.5 ಬಿಲಿಯನ್ ಡಾಲರ್ ಸೇರ್ಪಡೆಯಾಗಿದೆ.
ಇನ್ನು ಬರ್ನಾರ್ಡ್ ಅರ್ನಾಲ್ಟ್ ವಿಶ್ವದ ಶ್ರೀಮಂತ ವ್ಯಕ್ತಿಯಾದ ಬಳಿಕ ಎರಡನೇ ಸ್ಥಾನಕ್ಕೆ ಇಳಿದ ಟೆಸ್ಲಾ ಮತ್ತು ಟ್ವಿಟ್ಟರ್‌ನ ಮುಖ್ಯಸ್ಥ ಎಲಾನ್ ಮಸ್ಕ್ ಆದಾಯ ಹಾಗೂ ಬರ್ನಾರ್ಡ್ ಅರ್ನಾಲ್ಟ್ ಆದಾಯದ ನಡುವೆ ಈಗ 11.4 ಬಿಲಿಯನ್ ಡಾಲರ್‌ನ ಅಂತರವಿದೆ ಎಂದು ವರದಿಯು ಉಲ್ಲೇಖ ಮಾಡಿದೆ.
ಮಂಗಳವಾರು ಎಲ್‌ವಿಎಂಎಚ್ ಷೇರು ಮಾರುಕಟ್ಟೆಯಲ್ಲಿ ಭಾರೀ ನಷ್ಟವನ್ನು ಕಂಡಿದ್ದರೂ ಕೂಡಾ ವರ್ಷದಿಂದ ವರ್ಷಕ್ಕೆ ನೋಡಿದಾಗ ಈ ಸ್ಟಾಕ್ ಸುಮಾರು ಶೇಕಡ 23ರಷ್ಟು ಏರಿಕೆಯನ್ನು ಕಂಡಿದೆ. ಇನ್ನು ಎಂಎಸ್‌ಸಿಐ ಯುರೋಪ್ ಟೆಕ್ಸ್‌ಟೈಲ್ಸ್ ಅಪ್ಪೇರಲ್ & ಲಕ್ಜೂರಿ ಗೂಡ್ಸ್ ಇಂಡೆಕ್ಸ್ ಸುಮಾರು ಶೇಕಡ 27ರಷ್ಟು ಏರಿಕೆಯಾಗಿದೆ ಎಂದು ಬ್ಲೂಬರ್ಗ್ ವರದಿ ಹೇಳುತ್ತದೆ.
ತನ್ನ ಮಕ್ಕಳನ್ನೇ ಆಡಿಷನ್ ಮಾಡಿ ಸುದ್ದಿಯಾದ ಬರ್ನಾರ್ಡ್ ಅರ್ನಾಲ್ಟ್
ಇತ್ತೀಚೆಗೆ ಬರ್ನಾರ್ಡ್ ಅರ್ನಾಲ್ಟ್ ತನ್ನ ಮಕ್ಕಳನೇ ಆಡಿಷನ್ ಮಾಡುವ ಮೂಲಕ ಸುದ್ದಿಯಾಗಿದ್ದಾರೆ. ಶ್ರೀಮಂತ ವ್ಯಕ್ತಿಗಳ ಮಕ್ಕಳು ತಮ್ಮ ತಂದೆ ಅಥವಾ ತಾಯಿಯ ಆಸ್ತಿ/ ವಹಿವಾಟಿಗೆ ಉಸ್ತುವಾರಿ ವಹಿಸಿಕೊಳ್ಳವ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಈ ಎಲ್ಲ ಬೆಳವಣಿಗೆಗಳ ನಡುವೆ ವಿಶ್ವದ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್ ತನ್ನ ಉದ್ಯಮಕ್ಕೆ ಮಕ್ಕಳು ಎಂಟ್ರಿ ನೀಡುವುದಕ್ಕೂ ಮುನ್ನ ಅವರ ಆಡಿಷನ್ ನಡೆಸಿದ್ದಾರೆ!
ಬರ್ನಾರ್ಡ್ ಅರ್ನಾಲ್ಟ್ ಬಗ್ಗೆ ಮಾಹಿತಿ
ಬರ್ನಾರ್ಡ್ ಅರ್ನಾಲ್ಟ್ ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಹಲವಾರು ಬ್ರಾಂಡ್‌ಗಳ ಮೂಲ ಕಂಪನಿ ಆಗಿರುವ ಎಲ್‌ವಿಎಂಎಚ್‌ನ ಸಿಇಒ ಆಗಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್ ಎರಡು ವಿವಾಹವಾಗಿದ್ದು, ಒಟ್ಟು ಐವರು ಮಕ್ಕಳಿದ್ದಾರೆ. ಎಲ್ಲ ಮಕ್ಕಳು ಎಲ್‌ವಿಎಂಎಚ್‌ಯ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್‌ನ ಎರಡನೇ ಪುತ್ರನಾದ ಆಂಟನಿ ಅರ್ನಾಲ್ಟ್ ಕ್ರಿಶ್ಚಿಯನ್ ಡಿಯಾರ್ ಎಸ್‌ಇ ಎಂಬ ಸಂಸ್ಥೆಯನ್ನು ಆರಂಭ ಮಾಡಿದ್ದಾರೆ.


Click it and Unblock the Notifications