ಶ್ರೀಮಂತ ವ್ಯಕ್ತಿಗಳ ಮಕ್ಕಳು ತಮ್ಮ ತಂದೆ ಅಥವಾ ತಾಯಿಯ ಆಸ್ತಿ/ ವಹಿವಾಟಿಗೆ ಉಸ್ತುವಾರಿ ವಹಿಸಿಕೊಳ್ಳವ ಅದೆಷ್ಟೋ ನಿದರ್ಶನಗಳು ನಮ್ಮ ಕಣ್ಣ ಮುಂದಿದೆ. ಪ್ರಮುಖವಾಗಿ ಮುಕೇಶ್ ಅಂಬಾನಿ ಕುಟುಂಬದಲ್ಲಿ ಅಂಬಾನಿ ಮಕ್ಕಳು ರಿಲಯನ್ಸ್ ಸಂಸ್ಥೆಯ ಬೇರೆ ಬೇರೆ ಉದ್ಯಮದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ವಿಶ್ವದ ಶ್ರೀಮಂತ ವ್ಯಕ್ತಿಯಾದ ಬರ್ನಾರ್ಡ್ ಅರ್ನಾಲ್ಟ್ ತನ್ನ ಉದ್ಯಮಕ್ಕೆ ಮಕ್ಕಳು ಎಂಟ್ರಿ ನೀಡುವುದಕ್ಕೂ ಮುನ್ನ ಅವರ ಆಡಿಷನ್ ನಡೆಸಿದ್ದಾರೆ!
ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಹಲವಾರು ಬ್ರಾಂಡ್‌ಗಳ ಮೂಲ ಕಂಪನಿ ಆಗಿರುವ ಎಲ್‌ವಿಎಂಎಚ್‌ನ ಸಿಇಒ ಮತ್ತು ಚೇರ್‌ಮನ್ ಆದ, ವಿಶ್ವದ ಅತೀ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿರುವ ಬರ್ನಾರ್ಡ್ ಅರ್ನಾಲ್ಟ್ ತನ್ನ ವಹಿವಾಟನ್ನು, ಉದ್ಯಮವನ್ನು ತನ್ನ ಮಕ್ಕಳಿಗೆ ವಹಿಸಿಕೊಡುತ್ತಿದ್ದಾರೆ. ಆದರೆ ತನ್ನ ಉದ್ಯಮವನ್ನು ನೇರವಾಗಿ ತನ್ನ ಮಕ್ಕಳಿಗೆ ವಹಿಸಿಕೊಡದ ಬರ್ನಾರ್ಡ್ ಐದು ಮಕ್ಕಳಿಗೂ ಸಂದರ್ಶನ ನಡೆಸಿದ್ದಾರೆ.

ಎಲ್‌ವಿಎಂಎಚ್ ಮೊಯೆಟ್ ಹೆನ್ನೆಸ್ಸಿ ಲೂಯಿಸ್ ವಿಟಾನ್ ಎಸ್‌ಇ ಪ್ರಧಾನ ಕಛೇರಿಯಲ್ಲಿ ಖಾಸಗಿ ಡೈನಿಂಗ್ ಏರಿಯಾದಲ್ಲಿ (ಖಾಸಗಿ ಊಟದ ಪ್ರದೇಶ) ತನ್ನ ಮಕ್ಕಳೊಂದಿಗೆ ಅರ್ನಾಲ್ಟ್ ಬರ್ನಾರ್ಡ್ ಊಟ ಮಾಡಿದರು. ಒಟ್ಟು ಸುಮಾರು 90 ನಿಮಿಷಗಳ ಕಾಲ ತನ್ನ ಮಕ್ಕಳೊಂದಿಗೆ ಊಟ ಮಾಡಿದ ಅರ್ನಾಲ್ಟ್ ಆ 90 ನಿಮಿಷಗಳು ಕೂಡಾ ತನ್ನ ಕಂಪನಿ ಸಂಬಂಧಿತ ವಿಚಾರಗಳ ಬಗ್ಗೆ ಮತ್ತು ಕಾರ್ಯತಂತ್ರಗಳ ಬಗ್ಗೆ ಮಾತನಾಡಿಕೊಂಡಿದ್ದಾರೆ.
ಬಿಲಿಯನೇರ್ ತನ್ನ ಮಕ್ಕಳಲ್ಲಿ ಎಲ್‌ವಿಎಂಎಚ್‌ನ ಹಲವಾರು ವ್ಯವಹಾರಗಳ ಪೈಕಿ ಒಂದರಲ್ಲಿ ದಿಡೀರ್ ಬದಲಾವಣೆಯನ್ನು ತರಲು ಸಾಧ್ಯವಾಗಲಿದೆಯೇ, ಅದಕ್ಕೆ ಈ ಸಮಯ ಉತ್ತಮವೇ, ಕಂಪನಿಯಲ್ಲಿನ ನಿರ್ದಿಷ್ಟ ವ್ಯವಸ್ಥಾಪಕರ ಬಗ್ಗೆ ಪ್ರತಿಕ್ರಿಯೆ ಪಡೆಯಬಹುದೇ ಎಂಬುವುದನ್ನು ಸೇರಿದಂತೆ ತನ್ನ ಮಕ್ಕಳಲ್ಲಿ ಸಂಸ್ಥೆಗೆ ಸಂಬಂಧಿತ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾರೆ. ಆಡಿಷನ್ ಕೂಡಾ ನಡೆಸಲಾಗಿದೆ.
ತನ್ನ ಮಕ್ಕಳ ಸಂದರ್ಶನ, ಆಡಿಷನ್ ನಡೆಸಿದ ವಿಶ್ವದ ಶ್ರೀಮಂತ ವ್ಯಕ್ತಿ
ಈ ಊಟದ ಸಂದರ್ಭದಲ್ಲಿ ಬರ್ನಾರ್ಡ್ ಅರ್ನಾಲ್ಟ್ ಮಕ್ಕಳು ಅವರಿಗೆ ಆಡಿಷನ್ ನೀಡಿದ್ದಾರೆ. ಈ ಆಡಿಷನ್ ಆಧಾರದಲ್ಲಿ ಅಂತಿಮವಾಗಿ ಒಬ್ಬರನ್ನು ಬರ್ನಾರ್ಡ್ ಆಯ್ಕೆ ಮಾಡಲಿದ್ದಾರೆ. ಆಯ್ಕೆಯಾದವರಿಗೆ ಐಷಾರಾಮಿ ಉದ್ಯಮವನ್ನು ಸ್ವಾಧೀನಕ್ಕೆ ನೀಡಲಿದ್ದಾರೆ. ಬಿಲಿಯನೇರ್ ಕೇವಲ ಅರ್ಹತೆಯ ಆಧಾರದ ಮೇಲೆ ತನ್ನ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಲು ಮುಂದಾಗಿದ್ದಾರೆ. ಈ ಆಡಿಷನ್ ಬಳಿಕ ಬರ್ನಾರ್ಡ್ ನಂತರದ ಉತ್ತಾರಾಧಿಕಾರವನ್ನು ಯಾರು ವಹಿಸಿಕೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.
ದಿ ವಾಲ್ ಸ್ಟ್ರೀಟ್ ಜರ್ನಲ್ ಪ್ರಕಾರ ಬರ್ನಾರ್ಡ್ ಅರ್ನಾಲ್ಟ್ ತನ್ನ ಮರಣದ ನಂತರ ತನ್ನ ವಹಿವಾಟು, ಉದ್ಯಮವನ್ನು ನಡೆಸುಕೊಂಡು ಹೋಗಲು ಈಗಲೇ ತನ್ನ ಕುಟುಂಬದವರನ್ನು ಸಿದ್ಧಪಡಿಸುತ್ತಿದ್ದಾರೆ. ಇದು ಒಂದು ದೀರ್ಘಾವಧಿಯ ಕಾರ್ಯತಂತ್ರದ ಭಾಗವಾಗಿದೆ ಎಂದು ಹೇಳಿಕೊಂಡಿದೆ. ಬ್ಲ್ಯೂಬರ್ಗ್‌ನ ಬಿಲಿಯನೇರ್ ಸೂಚ್ಯಂಕ ಪ್ರಕಾರ ಈ ಹಿಂದೆ ಎಲಾನ್ ಮಸ್ಕ್ ಅನ್ನು ಹಿಂದಿಕ್ಕಿ ಅರ್ನಾಲ್ಟ್ ವಿಶ್ವದ ಶ್ರೀಮಂತ ವ್ಯಕ್ತಿ ಎನಿಸಿಕೊಂಡಿದ್ದಾರೆ.
ಬರ್ನಾರ್ಡ್ ಅರ್ನಾಲ್ಟ್ ಬಗ್ಗೆ ತಿಳಿಯಿರಿ
ಬರ್ನಾರ್ಡ್ ಅರ್ನಾಲ್ಟ್ ಲೂಯಿ ವಿಟಾನ್, ಗಿವೆಂಚಿ ಮತ್ತು ಕೆಂಜೊ ಸೇರಿದಂತೆ ಹಲವಾರು ಬ್ರಾಂಡ್‌ಗಳ ಮೂಲ ಕಂಪನಿ ಆಗಿರುವ ಎಲ್‌ವಿಎಂಎಚ್‌ನ ಸಿಇಒ ಆಗಿದ್ದಾರೆ. ಲೂಯಿ ವಿಟಾನ್ ಐಷಾರಾಮಿ ವಸ್ತುಗಳ ಕಂಪನಿಯಾಗಿದೆ. ಪೋರ್ಬ್ಸ್ ಪ್ರಕಾರ ಡಿಸೆಂಬರ್ 2022ರ ಲೆಕ್ಕಾಚಾರದಂತೆ ಬರ್ನಾರ್ಡ್ ಅರ್ನಾಲ್ಟ್ ಹಾಗೂ ಅವರ ಕುಟುಂಬದ ನಿವ್ವಳ ಆದಾಯವು 188.6 ಬಿಲಿಯನ್ ಯುಎಸ್ ಡಾಲರ್ ಆಗಿದೆ.
ಬರ್ನಾರ್ಡ್ ಅರ್ನಾಲ್ಟ್ ಎರಡು ವಿವಾಹವಾಗಿದ್ದು, ಒಟ್ಟು ಐವರು ಮಕ್ಕಳಿದ್ದಾರೆ. ಎಲ್ಲ ಮಕ್ಕಳು ಎಲ್‌ವಿಎಂಎಚ್‌ಯ ಅಂಗ ಸಂಸ್ಥೆಗಳಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. ಬರ್ನಾರ್ಡ್ ಅರ್ನಾಲ್ಟ್‌ನ ಎರಡನೇ ಪುತ್ರನಾದ ಆಂಟನಿ ಅರ್ನಾಲ್ಟ್ ಕ್ರಿಶ್ಚಿಯನ್ ಡಿಯಾರ್ ಎಸ್‌ಇ ಎಂಬ ಸಂಸ್ಥೆಯನ್ನು ಆರಂಭ ಮಾಡಿದೆ. ಬರ್ನಾರ್ಡ್ ಅರ್ನಾಲ್ಟ್ 1949ರಲ್ಲಿ ಫ್ರಾನ್ಸ್‌ನ ರೌಬೆಕ್ಸ್‌ನಲ್ಲಿ ಜನಿಸಿದ್ದಾರೆ. ಇಕೋಲ್ ಪಾಲಿಟೆಕ್ನಿಕ್‌ನ ಎಲೈಟ್ ಇಂಜಿನಿಯರಿಂಗ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದಿದ್ದಾರೆ. ತನ್ನ ಕುಟುಂಬದ ಉದ್ಯಮದಲ್ಲಿ ಕಾರ್ಯನಿರ್ವಹಣೆ ಮಾಡಿದ್ದಾರೆ. ಬಳಿಕ 1981ರಲ್ಲಿ ಯುಎಸ್‌ಗೆ ತಲುಪಿದ್ದಾರೆ.
More From GoodReturns

ಓಮ್ ಪವರ್ ಟ್ರಾನ್ಸ್ಮಿಷನ್ ಐಪಿಒ: ಸೋಮವಾರ ಹೂಡಿಕೆದಾರರಿಗೆ ಅಗ್ನಿಪರೀಕ್ಷೆ?

ಷೇರು ಮಾರುಕಟ್ಟೆ ಏರಿಕೆ: ಹೂಡಿಕೆದಾರರಿಗೆ ಸಿಕ್ಕಿತು ಭರ್ಜರಿ ಲಾಭದ ಅವಕಾಶ

ಆರ್ಬಿಐ ರೆಪೋ ದರ ಸ್ಥಿರ: ನಿಮ್ಮ ಹಣದ ಭವಿಷ್ಯ ಬದಲಾಗುತ್ತಾ?

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಷೇರು ಮಾರುಕಟ್ಟೆ ಶನಿವಾರದ ವಿಶೇಷ ವಹಿವಾಟು: ಹೂಡಿಕೆದಾರರೇ ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಟಿಸಿಎಸ್ ಫಲಿತಾಂಶದ ಬಳಿಕ ಮಾರುಕಟ್ಟೆಯಲ್ಲಿ ಅನಿರೀಕ್ಷಿತ ಏರಿಳಿತದ ಭೀತಿ!

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಓಂ ಪವರ್ ಟ್ರಾನ್ಸ್ಮಿಷನ್ ಐಪಿಒ: ಹೂಡಿಕೆದಾರರ ಪಾಲಿಗೆ ಲಾಭದಾಯಕವೇ?



Click it and Unblock the Notifications