ವಿಶ್ವದ ಅತ್ಯಂತ ಶ್ರೀಮಂತ ಉಕ್ಕಿನ ಉದ್ಯಮಿ ಲಕ್ಷ್ಮೀ ಮಿತ್ತಲ್ ಅವರ ಸೋದರ ಪ್ರಮೋದ್ ಮಿತ್ತಲ್ 250 ಕೋಟಿ ಪೌಂಡ್ಸ್ ಸಾಲದಲ್ಲಿದ್ದು, ಯುನೈಟೆಡ್ ಕಿಂಗ್ ಡಮ್ ನಲ್ಲಿ "ಅತ್ಯಂತ ದಿವಾಳಿ" ವ್ಯಕ್ತಿಯನ್ನಾಗಿಸಿದೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
64 ವರ್ಷದ ಪ್ರಮೋದ್ ಹೇಳುವಂತೆ, ಅವರ ತಂದೆಗೆ 170 ಮಿಲಿಯನ್ ಪೌಂಡ್ಸ್ ಹಾಗೂ ಮಗ ದಿವ್ಯೇಶ್ ಗೆ 2.4 ಮಿಲಿಯನ್ ಪೌಂಡ್ಸ್, ಪತ್ನಿ ಸಂಗೀತಾಗೆ 1.1 ಮಿಲಿಯನ್ ಪೌಂಡ್ಸ್, ಸಂಬಂಧಿ ಅಮಿತ್ ಲೋಹಿಯಾಗೆ 1.1 ಮಿಲಿಯನ್ ಪೌಂಡ್ಸ್ ಸಾಲ ಪಾವತಿ ಮಾಡಬೇಕಿದೆ.
ಈಗ ಪ್ರಮೋದ್ ಅವರಿಗೆ ಯಾವುದೇ ಆದಾಯ ಇಲ್ಲ. ಆದರೆ 66,669 ಪೌಂಡ್ಸ್ ಮೌಲ್ಯದ ಷೇರುಗಳು, 7000 ಪೌಂಡ್ಸ್ ಮೌಲ್ಯದ ಆಭರಣ ಹಾಗೂ ಭಾರತದಲ್ಲಿ 45 ಮಿಲಿಯಮ್ ಪೌಂಡ್ಸ್ ಮೌಲ್ಯದ ಆಸ್ತಿ ಇದೆ. ಇನ್ನು ಕುಟುಂಬದ ಮನೆಯು ಕಂಪೆನಿಯೊಂದರ ಸುಪರ್ದಿಯಲ್ಲಿದ್ದು, ಅದರಲ್ಲಿ ಹಣಕಾಸಿನ ಬಾಬ್ತು ತಮಗೆ ಯಾವುದೂ ಬರುವುದಿಲ್ಲ ಎಂದಿದ್ದಾರೆ.
ಈ ಪ್ರಮೋದ್ ಶ್ರೀಮಂತಿಕೆ ಹೇಗಿತ್ತು ಅಂದರೆ, 2013ನೇ ಇಸವಿಯಲ್ಲಿ ತಮ್ಮ ಮಗಳು ಸೃಷ್ಟಿಯ ಮದುವೆಗಾಗಿ 50 ಮಿಲಿಯನ್ ಪೌಂಡ್ಸ್ ಖರ್ಚು ಮಾಡಿದ್ದರು ಈತ. ಅದು ಇವರ ಸೋದರ ಲಕ್ಷ್ಮೀ ಮಿತ್ತಲ್ ತಮ್ಮ ಮಗಳು ವನಿಶಾಗೆ 2004ರಲ್ಲಿ ಮದುವೆ ಮಾಡಿದಾಗ ಆಗಿದ್ದ ಖರ್ಚಿಗಿಂತ 10 ಮಿಲಿಯನ್ ಪೌಂಡ್ಸ್ ಹೆಚ್ಚು ಖರ್ಚು ಮಾಡಿದ್ದರು.

ಲಕ್ಷ್ಮೀ ಮಿತ್ತಲ್ ಅವರು ಈ ಸಲ ತಮ್ಮ ಸೋದರನ ನೆರವಿಗೆ ಬರುತ್ತಿಲ್ಲ ಎಂದು ವರದಿ ಆಗಿದೆ. 2006ನೇ ಇಸವಿಯಲ್ಲಿ ಒಂದು ಹೋಲ್ಡಿಂಗ್ಸ್ ಸಾಲಕ್ಕೆ ಗ್ಯಾರಂಟರ್ ಆಗಿ ನಿಂತಾಗಿನಿಂದ ಪ್ರಮೋದ್ ಅವರ ಆರ್ಥಿಕ ಕುಸಿತ ಆರಂಭವಾಯಿತು. ಈಗ ಪ್ರಮೋದ್ ವಿರುದ್ಧ ದಿವಾಳಿ ಪ್ರಕ್ರಿಯೆ ನಡೆಯುತ್ತಿದೆ.


Click it and Unblock the Notifications