ವಿಶ್ವದ ಟಾಪ್ 10 ಶ್ರೀಮಂತರು ವಾರದಲ್ಲಿ ಒಟ್ಟಾಗಿ 4,400 ಕೋಟಿ ಅಮೆರಿಕನ್ ಡಾಲರ್ (3,21,732.4 ಕೋಟಿ ರುಪಾಯಿ) ನಷ್ಟವನ್ನು ಅನುಭವಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನ ಮಧ್ಯೆ ಈಕ್ವಿಟಿ ಷೇರುಗಳ ಮೌಲ್ಯ ಕುಸಿತವಾದ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ. ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಆಸ್ತಿ 900 ಕೋಟಿ ಅಮೆರಿಕನ್ ಡಾಲರ್ (65,808 ಕೋಟಿ ರುಪಾಯಿ) ಕಡಿಮೆ ಆಗಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.
ಬೆಜೋಸ್ ನಂತರ ಎಲಾನ್ ಮಸ್ಕ್ ಆಸ್ತಿ 850 ಕೋಟಿ ಅಮೆರಿಕನ್ ಡಾಲರ್ ಕಡಿಮೆ ಆಗಿದೆ. ಕಳೆದ ಮೂರು ದಿನದಲ್ಲಿ ಟೆಸ್ಲಾ ಕಂಪೆನಿ ಷೇರು ಇಳಿಕೆ ಆದ ಹಿನ್ನೆಲೆಯಲ್ಲಿ ಎಲಾನ್ ಮಸ್ಕ್ ಆಸ್ತಿಯಲ್ಲಿ ಭಾರೀ ನಷ್ಟ ಆಗಿದೆ. ಫೇಸ್ ಬುಕ್ ಮಾರ್ಕ್ ಝುಕರ್ ಬರ್ಗ್ 420 ಕೋಟಿ USD, ಬಿಲ್ ಗೇಟ್ಸ್ 290 ಕೋಟಿ ಡಾಲರ್ ಆಸ್ತಿ ಕಡಿಮೆ ಆಗಿದೆ.
ಸ್ಟೀವ್ ಬಾಲ್ಮರ್ 480 ಕೋಟಿ ಡಾಲರ್, ಲಾರಿ ಪೇಜ್ 360 ಕೋಟಿ, ಸೆರ್ಗಿ ಬ್ರಿನ್ 350 ಕೋಟಿ. ಮ್ಯಾಕ್ ಕೆಂಜಿ ಸ್ಕಾಟ್ 320 ಕೋಟಿ, ಲ್ಯಾರಿ ಎಲಿಸನ್ 240 ಕೋಟಿ ಮತ್ತು ಜಾಕ್ ಮಾ 160 ಕೋಟಿ ಯುಎಸ್ ಡಿ ನಷ್ಟವನ್ನು ಅನುಭವಿಸಿದ್ದಾರೆ.

ಸೆಪ್ಟೆಂಬರ್ 4ನೇ ತಾರೀಕು ಸಂಪತ್ತು ವಾಪಸಾಗಿದೆ. ಮಸ್ಕ್ ಹಾಗೂ ಝುಕರ್ ಬರ್ಗ್ ಆಸ್ತಿ 400 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಬೆಜೋಸ್ ವಿಶ್ವದ ಅತ್ಯಂತ ಸಿರಿವಂತ ಪುರುಷರಾದರೆ, ಬೆಜೋಸ್ ವಿಚ್ಛೇದಿತ ಪತ್ನಿ ಮ್ಯಾಕ್ ಕೆಂಜಿ ವಿಶ್ವದ ಅತ್ಯಂತ ಶ್ರೀಮಂತ ಮಹಿಳೆ ಎನಿಸಿಕೊಂಡಿದ್ದಾರೆ.
ಇದರ ಹೊರತಾಗಿಯೂ ವಿಶ್ವದ ಅತ್ಯಂತ ಶ್ರೀಮಂತರ ಆಸ್ತಿಯಲ್ಲಿ ಈ ವರ್ಷ 83,000 ಕೋಟಿ ಅಮೆರಿಕನ್ ಡಾಲರ್ ಹೆಚ್ಚಾಗಿದೆ. ಈ ವರ್ಷ ಬೆಜೋಸ್ ಆಸ್ತಿಯಲ್ಲಿ 8300 ಕೋಟಿ ಅಮೆರಿಕನ್ ಡಾಲರ್ ಮತ್ತು ಮಸ್ಕ್ ಆಸ್ತಿಯಲ್ಲಿ 6900 ಕೋಟಿ ಅಮೆರಿಕನ್ ಡಾಲರ್ ಜಾಸ್ತಿ ಆಗಿದೆ.


Click it and Unblock the Notifications