ಜಗತ್ತಿನ ಬಹುತೇಕ ಎಲ್ಲಾ ದೇಶಗಳು ಚಿನ್ನ ಸಂಗ್ರಹಿಸುವಲ್ಲಿ ಪೈಪೋಟಿ ನೀಡುತ್ತಿವೆ. ಜಗತ್ತಿನ ಪ್ರತಿಯೊಬ್ಬರೂ ಅತಿ ಹೆಚ್ಚು ಇಷ್ಟಪಡುವ ವಸ್ತುಗಳಲ್ಲಿ ಬಂಗಾರಕ್ಕೆ ಅಗ್ರಸ್ಥಾನ ಎಂದರೆ ತಪ್ಪಾಗಲಾರದು! ಜಾಗತಿಕ ಆರ್ಥಿಕತೆ ಕುಸಿಯುತ್ತಿದ್ದರೂ ಉದಯೋನ್ಮುಖ ಮಾರುಕಟ್ಟೆಗಳು ಹಳದಿ ಲೋಹ ಸಂಗ್ರಹಿಸುವತ್ತ ಚಿತ್ತ ಹರಿಸಿವೆ. ಭಾರತವೂ ಕೂಡ ಪ್ರತಿ ವರ್ಷ ಚಿನ್ನದ ಸಂಗ್ರಹವನ್ನು ನಿಯಮಿತವಾಗಿ ಹೆಚ್ಚಿಸುತ್ತಾ ಸಾಗಿದೆ.
ವರ್ಲ್ಡ್ ಗೋಲ್ಡ್ ಕೌನ್ಸಿಲ್ (WGC) ಪ್ರಕಾರ, ಭಾರತವು ಅತೀ ಹೆಚ್ಚು ಬಂಗಾರ ಹೊಂದಿರುವ ಅಗ್ರ ಹತ್ತು ದೇಶಗಳಲ್ಲಿ ಒಂದಾಗಿದೆ. ಒಟ್ಟು ಚಿನ್ನದ ಸಂಗ್ರಹದ ದೃಷ್ಟಿಯಿಂದ(ಡಿಸೆಂಬರ್, 2019) ಟಾಪ್ 10 ಸ್ಥಾನಗಳಲ್ಲಿರುವ ರಾಷ್ಟ್ರಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ.
10. ನೆದರ್ಲೆಂಡ್ಸ್
ಟನ್: 612.5
ವಿದೇಶಿ ವಿನಿಮಯ ಮೀಸಲು: 68.3
ಪ್ರಸ್ತುತ ತನ್ನ ಚಿನ್ನವನ್ನು ಸಂಗ್ರಹಿಸಿಡಲು ಡಚ್ ಸೆಂಟ್ರಲ್ ಬ್ಯಾಂಕ್ ಸೂಕ್ತ ಸ್ಥಳವನ್ನು ಕೋರಿದೆ. ಅತಿ ಹೆಚ್ಚು ಚಿನ್ನವನ್ನು ಸಂಗ್ರಹಿಸಿರುವ ದೇಶಗಳ ಪೈಕಿ ನೆದರ್ಲೆಂಡ್ಸ್ ಜಾಗತಿಕವಾಗಿ 10ನೇ ಸ್ಥಾನದಲ್ಲಿದೆ. ಈ ರಾಷ್ಟ್ರ ಒಟ್ಟಾರೆ 612.5 ಟನ್‌ನಷ್ಟು ಬಂಗಾರವನ್ನು ಹೊಂದಿದೆ.
9. ಭಾರತ
ಟನ್: 618.2
ವಿದೇಶಿ ವಿನಿಮಯ ಮೀಸಲು: 7 ಪರ್ಸೆಂಟ್
ವಿಶ್ವದಲ್ಲಿ ಹೆಚ್ಚು ಚಿನ್ನ ಹೊಂದಿರುವ ದೊಡ್ಡ ಮಳಿಗೆಗಳಲ್ಲಿ ಬ್ಯಾಂಕ್ ಆಫ್ ಇಂಡಿಯ ಕೂಡ ಒಂದು ಎನ್ನುವುದು ಅಚ್ಚರಿಯೇನಲ್ಲ. 130 ಕೋಟಿಗೂ ಅಧಿಕ ಜನಸಂಖ್ಯೆ ಹೊಂದಿರುವ ಭಾರತೀಯರು ಚಿನ್ನಾಭರಣ ಪ್ರಿಯರು. ಭಾರತ ದಕ್ಷಿಣ ಏಷ್ಯಾದ ದೇಶಗಳಲ್ಲಿ ಮೊದಲ ಸಾಲಿನಲ್ಲಿ ನಿಲ್ಲುತ್ತದೆ. ಅಕ್ಟೋಬರ್ ಮತ್ತು ಡಿಸೆಂಬರ್ ಅವಧಿಯ ಹಬ್ಬ ಮತ್ತು ಮದುವೆ ಸಮಾರಂಭಗಳ ಸೀಸನ್ ನಲ್ಲಿ ಚಿನ್ನಾಭರಣಗಳಿಗೆ ಐತಿಹಾಸಿಕ ಬೇಡಿಕೆ ಇದ್ದು, ದೊಡ್ಡ ಮಟ್ಟದ ವ್ಯಾಪಾರ ನಡೆಯುತ್ತದೆ. ಸದ್ಯ ವಿಶ್ವದಲ್ಲಿ ಅತಿ ಹೆಚ್ಚು ಬಂಗಾರ ಹೊಂದಿರುವ ರಾಷ್ಟ್ರಗಳಲ್ಲಿ ಭಾರತಕ್ಕೆ 9ನೇ ಸ್ಥಾನವಿದ್ದು ಒಟ್ಟಾರೆ 618.2 ಟನ್ ಚಿನ್ನವನ್ನು ಹೊಂದಿದೆ.
8. ಜಪಾನ್
ಟನ್: 765.2
ವಿದೇಶಿ ವಿನಿಮಯ ಮೀಸಲು: 2.8 ಪರ್ಸೆಂಟ್
ಜಪಾನ್ ಜಗತ್ತಿನ ನಾಲ್ಕನೇ ದೊಡ್ಡ ಆರ್ಥಿಕತೆ ಹಾಗೂ ಹಳದಿ ಲೋಹ ಹೊಂದಿರುವ 8ನೇ ಅತಿದೊಡ್ಡ ದೇಶ. ಜಪಾನ್ ಸತತವಾಗಿ ಬಂಗಾರದ ದಾಸ್ತಾನು ಹೆಚ್ಚಿಸುತ್ತಾ ಬಂದಿದೆ ಎಂದು ಐಎಂಎಫ್ ಹೇಳಿದೆ. ಜಪಾನಿನ ಸೆಂಟ್ರಲ್ ಬ್ಯಾಂಕ್ ಚಿನ್ನದ ಮಳಿಗೆಯಾಗಿದ್ದು, ವಿಶ್ವದಾದ್ಯಂತ ಚಿನ್ನದ ಬೇಡಿಕೆಯನ್ನು ಹೊಂದಿದೆ. ಐಎಂಎಫ್ ಅಂಕಿ ಅಂಶಗಳ ಪ್ರಕಾರ 2019 ಡಿಸೆಂಬರ್‌ನಲ್ಲಿ ಜಪಾನ್ ಒಟ್ಟಾರೆ 765.2 ಟನ್ ಚಿನ್ನವನ್ನು ಹೊಂದಿದೆ.
7. ಸ್ವಿಟ್ಜರ್ಲೆಂಡ್
ಟನ್: 1,040.0
ವಿದೇಶಿ ವಿನಿಮಯ ಮೀಸಲು: 6 ಪರ್ಸೆಂಟ್
ವಿಶ್ವದಲ್ಲಿ ಅತಿ ಹೆಚ್ಚು ಚಿನ್ನ ಹೊಂದಿರುವ ರಾಷ್ಟ್ರಗಳ ಪೈಕಿ ಸ್ವಿಟ್ಜರ್ಲೆಂಡ್ 7ನೇ ಅತಿದೊಡ್ಡ ದೇಶವಾಗಿದೆ. ಹಾಂಕಾಂಗ್ ಮತ್ತು ಚೀನಾ ನಡುವೆ ಅತಿ ಹೆಚ್ಚು ಚಿನ್ನದ ವ್ಯಾಪಾರವನ್ನು ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಸ್ವಿಟ್ಜರ್ಲೆಂಡ್‌ಗಿದೆ. ಈ ರಾಷ್ಟ್ರವು ಒಟ್ಟಾರೆ 1,040.0 ಟನ್‌ಗಳಷ್ಟು ಚಿನ್ನವನ್ನು ಹೊಂದಿದ್ದು, ಇದರಲ್ಲಿ ವಿದೇಶಿ ವಿನಿಮಯ ಮೀಸಲು 6 ಪರ್ಸೆಂಟ್ ನಷ್ಟಿದೆ.
6. ಚೀನಾ
ಟನ್: 1,948.3
ವಿದೇಶಿ ವಿನಿಮಯ ಮೀಸಲು: 2.9 ಪರ್ಸೆಂಟ್
ಚೀನಾದ ಆರ್ಥಿಕತೆ ಹಾಗು ಯುಎಸ್-ಚೀನಾ ವಾಣಿಜ್ಯ ಸಮರದ ಹಿನ್ನೆಲೆಯಲ್ಲಿ ಚೀನಾ ಐದನೇ ಸ್ಥಾನದಿಂದ ಆರನೇ ಸ್ಥಾನಕ್ಕೆ ಕುಸಿದಿದೆ. 1,948.3 ಟನ್‌ಗಳಷ್ಟು ಬಂಗಾರ ಹೊಂದಿರುವ ಚೀನಾದ ವಿದೇಶಿ ಮೀಸಲು ಕೇವಲ 2.9ರಷ್ಟಿದೆ. ಮುಂದಿನ ದಿನಗಳಲ್ಲಿ ಮೀಸಲು ಪ್ರಮಾಣ ಹೆಚ್ಚಿಸುವ ನಿರೀಕ್ಷೆಯನ್ನು ಹೊಂದಿದೆ.
5. ರಷ್ಯಾ
ಟನ್ :2,252.1
ವಿದೇಶಿ ವಿನಿಮಯ ಮೀಸಲು: 20.2 ಪರ್ಸೆಂಟ್
ರಷ್ಯಾ ಕಳೆದ ಹಲವಾರು ವರ್ಷಗಳಿಂದ ಚಿನ್ನ ರಾಶಿ ಹಾಕುವ ಕಾರ್ಯದಲ್ಲಿ ತೊಡಗಿದ್ದು, ಕಳೆದ ಒಂದು ವರ್ಷದ ಅವಧಿಯಲ್ಲಿ ಇದರ ಪ್ರಮಾಣವನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ. 2015ರಲ್ಲಿ ಇದು ಉನ್ನತ ಖರೀದಿದಾರರ ದೇಶವಾಗಿದ್ದು, ಚಿನ್ನದ ವಹಿವಾಟಿನಲ್ಲಿ ತನ್ನದೇ ಛಾಪನ್ನು ಹೊಂದಿದೆ. ಸದ್ಯ ಡಿಸೆಂಬರ್ 2019ರಲ್ಲಿ ರಷ್ಯಾ 2,252.1 ಟನ್‌ಗಳಷ್ಟು ಬಂಗಾರ ಹೊಂದಿದ್ದು, ಇದರಲ್ಲಿ ವಿದೇಶಿ ವಿನಿಮಯ ಮೀಸಲು 20.2 ಪರ್ಸೆಂಟ್ ನಷ್ಟಿದೆ.
4. ಫ್ರಾನ್ಸ್
ಟನ್ :2,436
ವಿದೇಶಿ ವಿನಿಮಯ ಮೀಸಲು: 62.8 ಪರ್ಸೆಂಟ್
ಫ್ರಾನ್ಸಿನ ಸೆಂಟ್ರಲ್ ಬ್ಯಾಂಕ್ ಕಳೆದ ಹಲವು ವರ್ಷಗಳಲ್ಲಿ ಕಡಿಮೆ ಪ್ರಮಾಣದಲ್ಲಿ ತನ್ನ ಚಿನ್ನವನ್ನು ಮಾರಾಟ ಮಾಡಿದೆ. ಮುಂದಿನ ದಿನಗಳಲ್ಲಿ ಮಾರಾಟ ತಗ್ಗಿಸಿ ಮೀಸಲು ಪ್ರಮಾಣ ಹೆಚ್ಚಿಸುವ ಸಾಧ್ಯತೆ ಇದೆ. ಈಗಾಗಲೇ 2,436 ಟನ್‌ಗಳಷ್ಟು ಬಂಗಾರ ಹೊಂದಿರುವ ಫ್ರಾನ್ಸ್ ವಿದೇಶಿ ವಿನಿಮಯ ಮೀಸಲಿನ ಪ್ರಮಾಣ ಬರೋಬ್ಬರಿ 62.8 ಪರ್ಸೆಂಟ್‌ನಷ್ಟಿದೆ.
3. ಇಟಲಿ
ಟನ್ :2,451.8
ವಿದೇಶಿ ವಿನಿಮಯ ಮೀಸಲು: 68.4 ಪರ್ಸೆಂಟ್
ಇಟಲಿ ಕಳೆದ ಕೆಲ ವರ್ಷಗಳಿಂದ ಚಿನ್ನದ ಮೀಸಲು ಗಾತ್ರವನ್ನು ಕಾಪಾಡಿಕೊಂಡು ಬಂದಿದೆ. ಈಗಾಗಲೇ 2,451.8 ಟನ್‌ಗಳಷ್ಟು ಚಿನ್ನವನ್ನು ಹೊಂದಿರುವ ಇಟಲಿಯು ಶ್ರೀಮಂತ ರಾಷ್ಟ್ರವಾಗಿದ್ದು, ಇದರ ವಿದೇಶಿ ವಿನಿಮಯ ಮೀಸಲಿನ ಪ್ರಮಾಣ ಒಟ್ಟಾರೆ ಚಿನ್ನದಲ್ಲಿ 68.4 ಪರ್ಸೆಂಟ್ ನಷ್ಟಿದೆ.
2. ಜರ್ಮನಿ
ಟನ್ : 3,366.5
ವಿದೇಶಿ ವಿನಿಮಯ ಮೀಸಲು: 73.2 ಪರ್ಸೆಂಟ್
ಜರ್ಮನಿ ದೇಶವು ವಿಶ್ವದಲ್ಲಿ ಅತಿ ಹೆಚ್ಚು ಚಿನ್ನವನ್ನು ಸಂಗ್ರಹಿಸುವ ರಾಷ್ಟ್ರಗಳಲ್ಲಿ 2ನೇ ಸ್ಥಾನವನ್ನು ಅಲಂಕರಿಸಿದೆ. ಜರ್ಮನಿಯ ಒಟ್ಟು ಚಿನ್ನದ ಸಂಗ್ರಹವು 3,366.5 ಟನ್‌ಗಳಷ್ಟಿದ್ದು, ಈ ರಾಷ್ಟ್ರದ ವಿದೇಶಿ ವಿನಿಮಯ ಮೀಸಲಿನ ಪ್ರಮಾಣ ಭರ್ಜರಿ 73.2 ಪರ್ಸೆಂಟ್ ನಷ್ಟಿದೆ.
1. ಅಮೆರಿಕಾ
ಟನ್ : 8,133.5
ವಿದೇಶಿ ವಿನಿಮಯ ಮೀಸಲು: 77 ಪರ್ಸೆಂಟ್
ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕಾ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ಮೊದಲಿನ ಸ್ಥಾನದಲ್ಲಿದೆ. ವಿಶ್ವದ ದೊಡ್ಡ ಆರ್ಥಿಕತೆಯಾಗಿರುವ ಅಮೆರಿಕಾ ಬಂಗಾರ ಸಂಗ್ರಹಣೆಯಲ್ಲಿಯು ಮೊದಲ ಸ್ಥಾನವನ್ನು ಹೊಂದಿದೆ. ಅಮೆರಿಕಾ ಒಟ್ಟಾರೆ 8,133.5 ಟನ್‌ಗಳಷ್ಟು ಬಂಗಾರವನ್ನು ಹೊಂದಿದ್ದು, ಇದರಲ್ಲಿ 77 ಪರ್ಸೆಂಟ್‌ನಷ್ಟು ಚಿನ್ನವನ್ನು ವಿದೇಶಿ ವಿನಿಮಯಕ್ಕಾಗಿ ಮೀಸಲಿರಿಸಿದೆ.
More From GoodReturns

Silver Rate: ಭಾರತದಲ್ಲಿ ನಿಂತಲ್ಲೇ ನಿಂತ ಬೆಳ್ಳಿ ದರ! ಎಷ್ಟಿದೆ ಗೊತ್ತಾ ಬೆಲೆ?

Gold Rate Today: ವಾರದ ಆರಂಭದಲ್ಲಿ ಚಿನ್ನದ ಬೆಲೆ ಭಾರೀ ಇಳಿಕೆ; ದಿಢೀರ್ 1,960 ರೂ. ಕುಸಿತ

Silver Price Today: ಭಾನುವಾರ ನಿಂತಲ್ಲೇ ನಿಂತ ಬೆಳ್ಳಿ ದರ! ಅತ್ತ ಏರಿಕೆಯೂ ಇಲ್ಲ, ಇಳಿಕೆಯೂ ಇಲ್ಲ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Gold Rate Today: ಶುಕ್ರವಾರ ಚಿನ್ನ ಪ್ರಿಯರಿಗೆ ಒಲಿದ ಲಕ್ಷ್ಮಿ! 7,000 ರೂ. ಇಳಿಕೆ

Gold Rate Today: ಭಾರತದಲ್ಲಿ ಚಿನ್ನದ ಬೆಲೆ ಭರ್ಜರಿ ಕುಸಿತ! ದಿಢೀರ್ 9,800 ರೂ. ಇಳಿಕೆ

Bengaluru Gold Rate: ಜಾಗತಿಕ ಉದ್ವಿಗ್ನತೆ ಪರಿಣಾಮ ಚಿನ್ನದ ಬೆಲೆಯಲ್ಲಿ ಏರಿಕೆ-ನಿನ್ನೆಗಿಂತ 9,300 ಕುಸಿತ

Gold Rate Today: ಚಿನ್ನದ ಬೆಲೆ ದಿಢೀರ್ ಏರಿಕೆ; ಒಂದೇ ದಿನ 7,000 ರೂ. ಹೆಚ್ಚಳ

Gold Prices: ತೈಲ ಬೆಲೆ ಏರಿಕೆ ನಡುವೆಯೂ ಚಿನ್ನದ ಬೆಲೆ ಕುಸಿತ...ಭಾರತದಲ್ಲಿ ಹೂಡಿಕೆದಾರರನ್ನು ಆಘಾತ ನೀಡಿದ ಬೆಳವಣಿಗೆ

Gold Price India: ದಿಢೀರ್ ಏರಿಕೆ ಹಾದಿಯನ್ನೇ ಅನುಸರಿಸಿದ ಚಿನ್ನದ ಬೆಲೆ…25,100 ರೂ. ಏರಿಕೆ!

Gold Rate: ಚಿನ್ನ ಕೊಳ್ಳುವವರಿಗೆ ‘ಗುರುದೆಸೆ’…ಬೆಂಗಳೂರಿನಲ್ಲಿ ಚಿನ್ನದ ಬೆಲೆಯಲ್ಲಿ 9,800 ರೂ. ಕುಸಿತ!



Click it and Unblock the Notifications