ಕಳೆದ ಹಲವಾರು ವರ್ಷಗಳಲ್ಲಿ ದೇಶ ಸ್ಟಾಕ್ ಮಾರುಕಟ್ಟೆ, ಬಂಡವಾಳ ಮಾರುಕಟ್ಟೆಯಲ್ಲಿ ಸಾಕಷ್ಟು ಬದಲಾವಣೆಗಳು ಆಗಿದೆ. ಹಲವಾರು ಸಂಸ್ಥೆಗಳು ಖಾಸಗೀಕರಣಕ್ಕೆ ತನ್ನನ್ನು ತಾನು ಒಗ್ಗಿಸಿಕೊಂಡರೆ ಇನ್ನು ಕೆಲವು ಸಂಸ್ಥೆಗಳು ಐಪಿಒಗಳ ಮೂಲಕ ಸಾರ್ವಜನಿಕ ಹೂಡಿಕೆಗೆ ತೆರೆದುಕೊಂಡಿದೆ. ಅದರಲ್ಲೂ 2022ರಲ್ಲಿ ಹಲವಾರು ಐಪಿಒಗಳು ಆರಂಭವಾಗಿದೆ.
ಅತೀ ದೊಡ್ಡ ಐಪಿಒದಿಂದ ಹಿಡಿದು ಸಣ್ಣ ಐಪಿಒವರೆಗೂ 2022ರ ವರ್ಷದಲ್ಲೇ ನಾವು ಕಾಣಬಹುದು. ಹಲವಾರು ಹೂಡಿಕೆದಾದರು ಐಪಿಒ ಮೇಲೆ ಹೂಡಿಕೆಯಲ್ಲಿ ಹೆಚ್ಚು ಆಸಕ್ತಿಯನ್ನು ತೋರಿಸುತ್ತಿದ್ದಾರೆ. ಅದರಲ್ಲೂ ಉತ್ತಮ ರಿಟರ್ನ್ ಅನ್ನು ಪಡೆಯಲು ಎಲ್ಲಿ ಸಾಧ್ಯ ಎಂದು ಹೂಡಿಕೆದಾರರು ನೋಡುತ್ತಾರೆ.
ಪ್ರಸ್ತುತ 2022ರ ಕೊನೆಯ ತಿಂಗಳಲ್ಲಿ ನಾವಿದ್ದೇವೆ. ಈ ನಡುವೆ ಈ ಲೇಖನದಲ್ಲಿ ನಾವು ಈ ವರ್ಷ ಸ್ಟಾಕ್ ಮಾರುಕಟ್ಟೆಯು ಕಂಡ ಅತೀ ದೊಡ್ಡ 4 ನಾಲ್ಕು ಐಪಿಒಗಳ ಬಗ್ಗೆ ವಿವರಣೆ ನೀಡಲಿದ್ದೇವೆ. ಇಲ್ಲಿದೆ ಈ ಐಪಿಒಗಳ ವಿವರ ಮುಂದೆ ಓದಿ.....
1. ಭಾರತೀಯ ಜೀವ ವಿಮಾ ನಿಗಮ
ಭಾರತದ ಷೇರು ಮಾರುಕಟ್ಟೆಯಲ್ಲಿ ಅತೀ ದೊಡ್ಡ ಐಪಿಒ ಭಾರತೀಯ ಜೀವ ವಿಮಾ ನಿಗಮ (ಎಲ್‌ಐಸಿ) ಐಪಿಒ ಆಗಿದೆ. ಇದು ಸರ್ಕಾರಿ ಸ್ವಾಮ್ಯದ ವಿಮಾ ಸಂಸ್ಥೆಯಾಗಿದೆ. ಎಲ್‌ಐಸಿಯು ಮೇ 17, 2022ರಂದು ಸಾರ್ವಜನಿಕ ಚಂದಾದಾರಿಕೆಗೆ ತೆರೆದುಕೊಂಡಿದೆ. ಆದರೆ ಆರಂಭಿಕವಾಗಿಯೇ ರಿಯಾಯಿತಿ ದರದಲ್ಲಿ ಲೀಸ್ಟಿಂಗ್ ಆಗಿದೆ. ಈವರೆಗೆ ಶೇಕಡ 17.25ರಷ್ಟು ರಿಟರ್ನ್ ಅನ್ನು ಕಳೆದುಕೊಂಡಿದೆ. ಆದರೆ ಕಳೆದ ಒಂದು ವಾರದಲ್ಲಿ ಸ್ಟಾಕ್ ಕೊಂಚ ಉತ್ತಮ ಬೆಳವಣಿಗೆಯನ್ನು ಕಂಡಿದೆ. ಸ್ಟಾಕ್ ಶೇಕಡ 10.72ರಷ್ಟು ಏರಿಕೆಯನ್ನು ಕಂಡಿದೆ. ಹಾಗೆಯೇ ಕಳೆದ ಒಂದು ತಿಂಗಳಲ್ಲಿ ಶೇಕಡ 8.97ರಷ್ಟು ಏರಿಕೆಯನ್ನು ದಾಖಲಿಸಿದೆ. ಕಳೆದ 3 ತಿಂಗಳಲ್ಲಿಯೂ ಶೇಕಡ 9.17ರಷ್ಟು ಏರಿಕೆಯನ್ನು ಕಂಡಿದೆ.
2. ಅದಾನಿ ವಿಲ್ಮಾರ್ ಲಿಮಿಟೆಡ್
ಅದಾನಿ ವಿಲ್ಮಾರ್ ಪ್ರಮುಖ ಎಫ್‌ಎಂಸಿಜಿ ಸಂಸ್ಥೆಯಾಗಿದೆ. ಇದು ಅದಾನಿ ಗ್ರೂಪ್ ಹಾಗೂ ವಿಲ್ಮಾರ್ ಗ್ರೂಪ್‌ನ ಜಂಠಿ ಸಂಸ್ಥೆಯಾಗಿದೆ. 1999ರಲ್ಲಿ ಈ ಸಂಸ್ಥೆ ಜಂಠಿಯಾಗಿದೆ. ಈ ಸಂಸ್ಥೆಯು ಭಾರತದಲ್ಲಿ ಅಗತ್ಯ ಅಡುಗೆ ಸಾಮಾಗ್ರಿಗಳನ್ನು ತನ್ನ ಗ್ರಾಹಕರಿಗೆ ಮಾರಾಟ ಮಾಡುತ್ತದೆ. ಅದಾನಿ ವಿಲ್ಮಾರ್ 2022ರ ಫೆಬ್ರವರಿ 8ರಂದು ಸ್ಟಾಕ್ ಮಾರುಕಟ್ಟೆಗೆ ಎಂಟ್ರಿ ನೀಡಿದೆ. ಈ ಸ್ಟಾಕ್ ಈವರೆಗೆ ಸುಮಾರು ಶೇಕಡ 141.06ರಷ್ಟು ಲಾಭವನ್ನು ಗಳಿಸಿದೆ. ಆದರೆ ಕಳೆದ 1 ತಿಂಗಳಲ್ಲಿ ಶೇಕಡ 3.16ರಷ್ಟು ಹಾಗೂ ಕಳೆದ 3 ತಿಂಗಳಲ್ಲಿ ಶೇಕಡ 8.76ರಷ್ಟು ಕುಸಿತವನ್ನು ಕಂಡಿದೆ.
3. ಹರಿಓಂ ಪೈಪ್ ಇಂಡಸ್ಟ್ರೀಸ್ ಲಿಮಿಟೆಡ್
ಹರಿಓಂ ಪೈಪ್ ಇಂಡಸ್ಟ್ರೀಸ್ ಸ್ಟೀಲ್ ಉತ್ಪಾದನ ಸಂಸ್ಥೆಯಾಗಿದೆ. ಈ ಸಂಸ್ಥೆಯು ಮೈಲ್ಡ್ ಸ್ಟೀಲ್ (ಎಂಎಸ್) ಬಿಲೇಟ್‌ಗಳು, ಕಾಯಿಲ್‌ಗಳು, ಪೈಪ್‌ಗಳು, ಟ್ಯೂಬ್‌ಗಳನ್ನು ಉತ್ಪಾದನೆ ಮಾಡುತ್ತದೆ. ಇದು ಸಣ್ಣ ಬಂಡವಾಳವನ್ನು ಹೊಂದಿರುವ ಸಂಸ್ಥೆಯಾಗಿದ್ದು 2022ರ ಮೇ 30ರಂದು ಷೇರುಪೇಟೆಗೆ ಎಂಟ್ರಿ ನೀಡಿದೆ. ಲೀಸ್ಟಿಂಗ್ ಆದ ಬಳಿಕ ಈ ಸ್ಟಾಕ್ ಸುಮಾರು ಶೇಕಡ 56.95ರಷ್ಟು ಪಾಸಿಟಿವ್ ರಿಟರ್ನ್ ಅನ್ನು ಗಳಿಸಿದೆ. ಹಾಗೆಯೇ ಕಳೆದ 1 ತಿಂಗಳಲ್ಲಿ ಶೇಕಡ 30.84ರಷ್ಟು ಹಾಗೂ ಕಳೆದ 3 ತಿಂಗಳಲ್ಲಿ ಶೇಕಡ 31.76ರಷ್ಟು ಏರಿಕೆಯನ್ನು ಕಂಡಿದೆ.
4. ಡೆಲಿವರಿ ಲಿಮಿಟೆಡ್
ಡೆಲಿವರಿ ಲಿಮಿಟೆಡ್ ರಫ್ತು ಹಾಗೂ ಆಮದು ವಲಯದ ಸಂಸ್ಥೆಯಾಗಿದೆ. ಇದು ಯುನಿಕಾರ್ನ್ ಐಪಿಒ ಆಗಿದೆ. ಈ ಸಂಸ್ಥೆಯು ಪಾರ್ಸೆಲ್ ಸೇವೆ, ಭಾರೀ ಗಾತ್ರದ ಸರಕು ಪಾರ್ಸೆಲ್, ಶಿಪ್, ಟ್ರೈನ್ ಮೊದಲಾದವುಗಳಲ್ಲಿ ಆಮದು-ರಫ್ತು ಸೇವೆಯನ್ನು ನೀಡುತ್ತದೆ. 2022ರ ಮೇ 24ರಂದು ಈ ಸಂಸ್ಥೆಯು ಷೇರು ಮಾರುಕಟ್ಟೆ ಎಂಟ್ರಿ ನೀಡಿದೆ. ಎನ್‌ಎಸ್‌ಇಯಲ್ಲಿ ಲೀಸ್ಟಿಂಗ್ ಆದ ಬಳಿಕ ಈ ಸ್ಟಾಕ್ ನೆಗೆಟಿವ್ ರಿಟರ್ನ್ ಅನ್ನು ಕಂಡಿದೆ. ಅಂದರೆ ಸ್ಟಾಕ್ ಮೌಲ್ಯ ಈವರೆಗೆ ಶೇಕಡ 31.78ರಷ್ಟು ಇಳಿದಿದೆ. ಆದರೆ ಕಳೆದ ಒಂದು ವಾರದಲ್ಲಿ ಸ್ಟಾಕ್ ಮೌಲ್ಯವು ಸುಮಾರು ಶೇಕಡ 9.4ರಷ್ಟು ಏರಿಕೆಯನ್ನು ದಾಖಲಿಸಿದೆ. ಹಾಗೆಯೇ ಕಳೆದ 1 ತಿಂಗಳಲ್ಲಿ ಶೇಕಡ 1.2ರಷ್ಟು ಹಾಗೂ ಕಳೆದ 3 ತಿಂಗಳಲ್ಲಿ ಶೇಕಡ 38.4ರಷ್ಟು ಕುಸಿತವನ್ನು ಕಂಡಿದೆ.


Click it and Unblock the Notifications