For Quick Alerts
ALLOW NOTIFICATIONS  
For Daily Alerts

ಯೆಸ್ ಬ್ಯಾಂಕ್ ಎಟಿಎಂ ಕಾರ್ಡ್ ದಾರರಿಗೆ ಕೊಂಚ ನಿರಾಳ

|

ಯೆಸ್ ಬ್ಯಾಂಕ್ ನ ಎಟಿಎಂ ಕಾರ್ಡ್ ದಾರರು ಯೆಸ್ ಬ್ಯಾಂಕ್ ಅಥವಾ ಬೇರೆ ಯಾವುದೇ ಬ್ಯಾಂಕ್ ನಿಂದಾದರೂ ಹಣ ವಿಥ್ ಡ್ರಾ ಮಾಡಬಹುದು ಎಂದು ಶನಿವಾರ ರಾತ್ರಿ ಬ್ಯಾಂಕ್ ನಿಂದ ಟ್ವೀಟ್ ಮಾಡಲಾಗಿದೆ. ಕಳೆದ ಗುರುವಾರವಷ್ಟೇ ಆರ್ ಬಿಐನಿಂದ ಯೆಸ್ ಬ್ಯಾಂಕ್ ನಲ್ಲಿನ ಠೇವಣಿ ವಿಥ್ ಡ್ರಾ ಮೇಲೆ ಮಿತಿ ಹಾಕಲಾಗಿತ್ತು. ಏಪ್ರಿಲ್ 3ರ ತನಕ 50 ರುಪಾಯಿಯೊಳಗೆ ವಿಥ್ ಡ್ರಾ ಮಾಡಬಹುದು ಎಂದು ತಿಳಿಸಲಾಗಿತ್ತು.

ನೆಟ್ ಬ್ಯಾಂಕಿಂಗ್ ಸೇವೆಯೂ ಇರಲಿಲ್ಲ ಮತ್ತು ಕ್ರೆಡಿಟ್ ಕಾರ್ಡ್ ಕೂಡ ಕೆಲಸ ಮಾಡುತ್ತಿಲ್ಲ ಎಂದು ಕೆಲವು ಗ್ರಾಹಕರು ದೂರಿದ್ದರು. ಈ ಮಧ್ಯೆ ಭಾನುವಾರ ನಸುಕಿನಲ್ಲಿ ಯೆಸ್ ಬ್ಯಾಂಕ್ ಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ರಾಣಾ ಕಪೂರ್ ನನ್ನು ಅಕ್ರಮ ಹಣ ವರ್ಗಾವಣೆ ನಿಯಂತ್ರಣ ಕಾಯ್ದೆ ಅಡಿಯಲ್ಲಿ ಜಾರಿ ನಿರ್ದೇಶನಾಲಯವು ಬಂಧಿಸಿದೆ.

ಯೆಸ್ ಬ್ಯಾಂಕ್ ಎಟಿಎಂ ಕಾರ್ಡ್ ದಾರರಿಗೆ ಕೊಂಚ ನಿರಾಳ

ಒಂದು ಪ್ರಕರಣದಲ್ಲಿ, ಜಾರಿ ನಿರ್ದೇಶನಾಲಯ ಆರೋಪಿಸಿರುವ ಪ್ರಕಾರ, ಹಗರಣಕ್ಕೆ ಸಿಲುಕಿರು ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ನಿಂದ ರಾಣಾ ಕಪೂರ್ 600 ಕೋಟಿ ರುಪಾಯಿ ಪಡೆದಿದ್ದಾರೆ. ಇನ್ನು ಬ್ಯಾಂಕ್ ನಿಂದ ಡಿಎಚ್ ಎಫ್ ಎಲ್ ಗೆ ನೀಡಿದ ಸಾಲವು ಸಮಸ್ಯೆಯಾಗಿ ಪರಿಣಮಿಸಿದೆ ಎಂದು ಆರೋಪಿಸಲಾಗಿದೆ.

English summary

Yes Bank Customers Can Withdraw Money By Using ATM Card

Crisis hit Yes bank customers can withdraw money by using ATM card.
Story first published: Sunday, March 8, 2020, 10:21 [IST]
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X