2019ರ ಏಪ್ರಿಲ್- ಸೆಪ್ಟೆಂಬರ್ ಮಧ್ಯೆ ಯೆಸ್ ಬ್ಯಾಂಕ್ ನಿಂದ 18 ಸಾವಿರ ಕೋಟಿ ಡ್ರಾ

ಯೆಸ್ ಬ್ಯಾಂಕ್ ನ ಠೇವಣಿದಾರರು 2019ರ ಏಪ್ರಿಲ್ ನಿಂದ ಸೆಪ್ಟೆಂಬರ್ ಮಧ್ಯೆ 18 ಸಾವಿರ ಕೋಟಿ ರುಪಾಯಿ ನಿಧಿಯನ್ನು ಹಿಂಪಡೆದಿದ್ದಾರೆ. ಈ ಅವಧಿಯಲ್ಲೇ ಅನುತ್ಪಾದಕ ಆಸ್ತಿ (ಎನ್ ಪಿಎ) ಪ್ರಮಾಣ ವಿಪರೀತ ಹೆಚ್ಚಾಗಿ ಬಂಡವಾಳ ಪೂರೈಸುವುದಕ್ಕೆ ಯೆಸ್ ಬ್ಯಾಂಕ್ ಹೆಣಗಾಡುತ್ತಿತ್ತು ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

2019ರ ಅಕ್ಟೋಬರ್ ನಿಂದ 2020ರ ಫೆಬ್ರವರಿ ಮಧ್ಯೆ ಇನ್ನೂ 10ರಿಂದ 20 ಪರ್ಸೆಂಟ್ ವಿಥ್ ಡ್ರಾ ಮಾಡಲಾಗಿದೆ. ಇದೇ ವೇಳೆ ಯೆಸ್ ಬ್ಯಾಂಕ್ ಠೇವಣಿ ಕೂಡ ಸೆಪ್ಟೆಂಬರ್ 30, 2019ರ ಹೊತ್ತಿಗೆ 2,09,497 ಕೋಟಿಗೆ ಕುಸಿದಿದೆ. 2019ರ ಮಾರ್ಚ್ ನಲ್ಲಿ 2,27,610 ಕೋಟಿ ರುಪಾಯಿ ಠೇವಣಿ ಬ್ಯಾಂಕ್ ನಲ್ಲಿ ಇತ್ತು. ಇದು ಬ್ಯಾಂಕ್ ವಾರ್ಷಿಕ ವರದಿ ಮತ್ತು ರೇಟಿಂಗ್ ಏಜೆನ್ಸಿಗಳ ಮೂಲಕ ತಿಳಿದುಬರುವ ಮಾಹಿತಿ.

6 ತಿಂಗಳಲ್ಲೇ ಯೆಸ್ ಬ್ಯಾಂಕ್ ನಿಂದ 18 ಸಾವಿರ ಕೋಟಿ ಡ್ರಾ

ಇನ್ನೊಂದೆಡೆ ಯೆಸ್ ಬ್ಯಾಂಕ್ ನ ಪ್ರತಿಸ್ಪರ್ಧಿ ಬ್ಯಾಂಕ್ ಗಳ ಡೆಪಾಸಿಟ್ ನಲ್ಲಿ 9.2ರಷ್ಟು ಏರಿಕೆಯಾಗಿದೆ. 2019-20ರ ಅವಧಿಯಲ್ಲಿ ಆರ್ ಬಿಐ ರೆಪೋ ದರ 135 ಬೇಸಿಸ್ ಪಾಯಿಂಟ್ಸ್ ನಷ್ಟು ಇಳಿಕೆ ಮಾಡಿದ ಬೆನ್ನಿಗೆ ಇತರ ಬ್ಯಾಂಕ್ ಗಳು ಠೇವಣಿ ದರವನ್ನು ಇಳಿಕೆ ಮಾಡಿದ ಹೊರತಾಗಿಯೂ ಈ ಏರಿಕೆ ಆಗಿದೆ. ಇನ್ನು ಯೆಸ್ ಬ್ಯಾಂಕ್ ನಲ್ಲಿ ಸಮಸ್ಯೆ ಕಂಡುಬಂದಿರುವ ಹಿನ್ನೆಲೆಯಲ್ಲಿ ಡಿಸೆಂಬರ್ ತ್ರೈಮಾಸಿಕದ ಫಲಿತಾಂಶ ಪ್ರಕಟಣೆ ವಿಳಂಬ ಆಗುತ್ತಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+