ಯೆಸ್‌ ಬ್ಯಾಂಕ್ ಗ್ರಾಹಕರು ಸ್ವಲ್ಪ ನಿರಾಳ:NEFT, IMPS ಸೇವೆ ಆರಂಭ

ಏಪ್ರಿಲ್ 3ರ ತನಕ ಆರ್‌ಬಿಐ ನಿರ್ಬಂಧಕ್ಕೆ ಒಳಗಾಗಿರುವ ಯೆಸ್‌ ಬ್ಯಾಂಕ್‌ ಗ್ರಾಹಕರಿಗೆ ಸ್ವಲ್ಪ ಸಮಾಧಾನ ತರುವಂತಾಗಿದೆ. ಗ್ರಾಹಕರು ಇತರೆ ಬ್ಯಾಂಕ್ ಖಾತೆಯ ಮೂಲಕ ಯೆಸ್‌ ಬ್ಯಾಂಕ್‌ಗೆ IMPS/NEFT ಮೂಲಕ ಪಾವತಿಸಬೇಕಿರುವ ಹಣವನ್ನು ವರ್ಗಾಯಿಸಬಹುದು ಎಂದು ಬ್ಯಾಂಕ್ ತಿಳಿಸಿದೆ.

ಯೆಸ್ ಬ್ಯಾಂಕ್ ಗ್ರಾಹಕರು ಕ್ರೆಡಿಟ್ ಕಾರ್ಡ್ ಬಿಲ್, ಸಾಲ ಮರು ಪಾವತಿ ಇತ್ಯಾದಿಗಳನ್ನು ಇತರೆ ಬ್ಯಾಂಕ್‌ಗಳ ಖಾತೆಗಳ ಮೂಲಕ ಸಲ್ಲಿಸಬಹುದು ಎಂದು ಯೆಸ್ ಬ್ಯಾಂಕ್ ಮಂಗಳವಾರ ತಿಳಿಸಿದೆ. ಜೊತೆಗೆ ಸಮಾಧಾನದ ವಿಷಯ ಏನೆಂದರೆ 50,000 ರುಪಾಯಿಗಳ ವಿತ್‌ಡ್ರಾ ಮಿತಿಯನ್ನು ಶನಿವಾರದೊಳಗೆ ತೆರವುಗೊಳಿಸುವ ನಿರೀಕ್ಷೆ ಇದೆ.

ಯೆಸ್‌ ಬ್ಯಾಂಕ್ ಗ್ರಾಹಕರು ಸ್ವಲ್ಪ ನಿರಾಳ:NEFT, IMPS ಸೇವೆ ಆರಂಭ

ಸಾಲದ ಇಎಂಐಗಳು, ಕ್ರೆಡಿಟ್ ಕಾರ್ಡ್ ಬಿಲ್‌ ಪಾವತಿಗಳನ್ನು ಮಾಡಲಾಗದೆ ಗ್ರಾಹಕರು ಸಮಸ್ಯೆಯನ್ನು ಎದುರಿಸುತ್ತಿದ್ದರು. ಆದರೆ ಗ್ರಾಹಕರು ಇತರೆ ಬ್ಯಾಂಕ್‌ ಖಾತೆಯಿಂದ ಯೆಸ್ ಬ್ಯಾಂಕ್‌ಗೆ IMPS/NEFT ಮೂಲಕ ಪಾವತಿಸಬೇಕಿರುವ ಹಣವನ್ನು ವರ್ಗಾಯಿಸಬಹುದು.

ಯೆಸ್‌ ಬ್ಯಾಂಕ್‌ನ ಷೇರು ಖರೀದಿ ಸಂಬಂಧ ಶನಿವಾರ(ಮಾರ್ಚ್ 7) ಮಾತನಾಡಿದ್ದ ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ , ಯೆಸ್‌ ಬ್ಯಾಂಕ್‌ನ 49 ಪರ್ಸೆಂಟ್ ಬಂಡವಾಳವನ್ನು 2,450 ಕೋಟಿಗೆ ಖರೀದಿಸುವುದಾಗಿ ತಿಳಿಸಿದ್ದರು. ಯೆಸ್‌ ಬ್ಯಾಂಕ್‌ನ ಸಾಲಪತ್ರಗಳಿಗೆ ಪ್ರತಿಯಾಗಿ ಆರ್‌ಬಿಐನಿಂದ 8,000 ಕೋಟಿ ರೂ. ನಗದು ನೆರವು ಸಿಗುವ ಸಾಧ್ಯತೆ ಇದೆ. ಯೆಸ್‌ ಬ್ಯಾಂಕ್‌ ಅನ್ನು ತನ್ನಲ್ಲಿ ವಿಲೀನಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಎಸ್‌ಬಿಐ ಹೇಳಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+