ಪ್ರಮುಖ ಖಾಸಗಿ ಬ್ಯಾಂಕ್‌ಗಳಲ್ಲಿ ಒಂದಾದ ಯೆಸ್ ಬ್ಯಾಂಕ್ ಸಾಮಾನ್ಯ ಮತ್ತು ಹಿರಿಯ ನಾಗರಿಕರಿಗೆ ಅನೇಕ ಆಯ್ಕೆಗಳನ್ನ ಒಳಗೊಂಡ ನಿಶ್ಚಿತ ಠೇವಣಿ(ಎಫ್‌ಡಿ) ಯೋಜನೆಗಳನ್ನು ಹೊಂದಿದೆ. ಏಳು ದಿನಗಳಿಂದ ಪ್ರಾರಂಭವಾಗುವ ಎಫ್‌ಡಿ ಯೋಜನೆಗಳು 10 ವರ್ಷಗಳ ಅವಧಿಯನ್ನು ಹೊಂದಿದೆ.
ಹೀಗೆ ಎಫ್‌ಡಿಗಳನ್ನ ಒಳಗೊಂಡಂತೆ ಬಡ್ಡಿದರಗಳನ್ನು ಬ್ಯಾಂಕ್ ಪರಿಷ್ಕರಿಸಿದ್ದು, 2021 ರ ಫೆಬ್ರವರಿ 8 ರಿಂದ ಠೇವಣಿಗಳ ಮೇಲಿನ ಬಡ್ಡಿದರವನ್ನು ಪರಿಷ್ಕೃತಗೊಂಡಿದೆ. ಇತ್ತೀಚಿನ ಪರಿಷ್ಕರಣೆಯ ನಂತರ, ಯೆಸ್ ಬ್ಯಾಂಕ್ ಏಳು- ಹದಿನಾಲ್ಕು ದಿನಗಳಲ್ಲಿನ ಠೇವಣಿಗಳ ಮೇಲೆ 3.50%, 15 ರಿಂದ 45 ದಿನಗಳಲ್ಲಿ 4%, 46 ರಿಂದ 90 ದಿನಗಳ ಎಫ್‌ಡಿಗಳಲ್ಲಿ 4.5% ಬಡ್ಡಿದರವನ್ನು ನೀಡುತ್ತದೆ.

ಯೆಸ್ ಬ್ಯಾಂಕ್‌ನ 3 ತಿಂಗಳ ಮತ್ತು 6 ತಿಂಗಳಿಗಿಂತ ಕಡಿಮೆ ಮತ್ತು 6 ತಿಂಗಳಿಂದ 9 ತಿಂಗಳಿಗಿಂತ ಕಡಿಮೆ ಅವಧಿಗೆ ಮುಕ್ತಾಯಗೊಳ್ಳುವ ಅವಧಿಯ ಠೇವಣಿಗಳ ಮೇಲೆ 5% ರಿಂದ 5.5% ನೀಡುತ್ತದೆ. ಮುಕ್ತಾಯದ ಅವಧಿ 9 ತಿಂಗಳಿಂದ 1 ವರ್ಷಕ್ಕಿಂತ ಕಡಿಮೆ ಇರುವ ಎಫ್‌ಡಿಗಳಿಗೆ, ಬ್ಯಾಂಕ್ 5.75% ಬಡ್ಡಿದರವನ್ನು ನೀಡುತ್ತದೆ.
ಸಾಮಾನ್ಯ ನಾಗರಿಕರಿಗೆ ಅನ್ವಯವಾಗುವ ಪರಿಷ್ಕೃತ ಬಡ್ಡಿದರಗಳು:
7ರಿಂದ 14 ದಿನಗಳು 3.50%
15 ರಿಂದ 45 ದಿನಗಳು 4.00%
46 ರಿಂದ 90 ದಿನಗಳು 4.50%
3 ತಿಂಗಳಿಂದ 6 ತಿಂಗಳ ಒಳಗೆ 5.00%
6 ತಿಂಗಳಿಂದ 9 ತಿಂಗಳ ಒಳಗೆ 5.50%
9 ತಿಂಗಳಿಂದ 1 ವರ್ಷದೊಳಗೆ 5.75%
1 ವರ್ಷದಿಂದ 2 ವರ್ಷದೊಳಗೆ 6.25%
2 ವರ್ಷದಿಂದ 3 ವರ್ಷಗಳು 6.50%
3 ವರ್ಷದಿಂದ 10 ವರ್ಷ 6.75%
ಹಿರಿಯ ನಾಗರಿಕರಿಗೆ ಅನ್ವಯವಾಗುವ ಬಡ್ಡಿದರಗಳು:
ಹಿರಿಯ ನಾಗರಿಕರು ಸಾಮಾನ್ಯ ಜನರಿಗಿಂತ 50 ಬೇಸಿಸ್ ಪಾಯಿಂಟ್‌ಗಳ ಹೆಚ್ಚಿನ ಬಡ್ಡಿದರಗಳನ್ನು ಪಡೆಯುತ್ತಿದ್ದಾರೆ. 7 ದಿನಗಳಿಂದ 10 ವರ್ಷಗಳಿಗೆ ಅನ್ವಯವಾಗುವ ಎಫ್‌ಡಿಗಳಲ್ಲಿ ಬ್ಯಾಂಕ್ 4% ರಿಂದ 7.5% ವರೆಗೆ ಬಡ್ಡಿದರಗಳನ್ನು ನೀಡುತ್ತದೆ. ಹಿರಿಯ ನಾಗರಿಕರು 3 ವರ್ಷದಿಂದ 10 ವರ್ಷಗಳಿಗೆ ಅನ್ವಯವಾಗುವ ಎಫ್‌ಡಿಗಳಲ್ಲಿ 75 ಬೇಸಿಸ್ ಪಾಯಿಂಟ್‌ಗಳನ್ನು ಹೆಚ್ಚುವರಿಯಾಗಿ ಪಡೆಯುತ್ತಾರೆ.


Click it and Unblock the Notifications