ಹನ್ನೊಂದು ದಿನದ ಅಂತರದಲ್ಲಿ 1000 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡ ಷೇರಿದು

ಆ ಬ್ಯಾಂಕ್ ನ ಹೆಸರು ಕೇಳಿದರೆ ಸಾಕು ಹೆದರುವಂತಿತ್ತು ಪರಿಸ್ಥಿತಿ. ಇನ್ನು ಆ ಬ್ಯಾಂಕ್ ಗ್ರಾಹಕರ ಸ್ಥಿತಿ ದೇವರಿಗೇ ಪ್ರೀತಿ. ಇನ್ನು ಷೇರುದಾರರ ಪರಿಸ್ಥಿತಿ ಏನಾಗಿರಬಹುದು? ಈಗ ಹೇಳಹೊರಟಿರುವುದು ಯೆಸ್ ಬ್ಯಾಂಕ್ ಬಗ್ಗೆ. ಅದರಲ್ಲೂ ಆ ಬ್ಯಾಂಕ್ ನ ಷೇರುಗಳ ಬೆಲೆಯಲ್ಲಿ ಏರಿಕೆ ಕಂಡಿರುವ ಬಗ್ಗೆ. ಯೆಸ್ ಬ್ಯಾಂಕ್ ಷೇರಿನ ಬೆಲೆ ಮಂಗಳವಾರದ ದಿನದ ಕೊನೆಗೆ (ಮಾರ್ಚ್ 17, 2020) 58.65 ರುಪಾಯಿ ಮುಟ್ಟಿದೆ. ದಿನದ ಗರಿಷ್ಠ ಮಟ್ಟ 64.90 ತಲುಪಿತ್ತು.

ಆದರೆ, ಇದೇ ಷೇರು ಮಾರ್ಚ್ 6ನೇ ತಾರೀಕಿನಂದು ಕನಿಷ್ಠ ಮಟ್ಟವಾದ 5.55 ತಲುಪಿತ್ತು. ಹೌದು, ನೀವು ಸರಿಯಾಗಿಯೇ ಓದುತ್ತಿದ್ದೀರಿ. ಹನ್ನೊಂದು ದಿನದ ಅಂತರದಲ್ಲಿ 1000 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡಿದೆ ಯೆಸ್ ಬ್ಯಾಂಕ್ ಷೇರು. ಮಂಗಳವಾರವೊಂದೇ ದಿನ 58.09 ಪರ್ಸೆಂಟ್ ಏರಿಕೆ ಕಂಡಿದೆ.

ಸದ್ಯಕ್ಕೆ ಕೊರೊನಾ ಭೀತಿಯಲ್ಲಿ ಎಲ್ಲ ವಲಯದ ಷೇರುಗಳೂ ಇಳಿಕೆ ಹಾದಿಯಲ್ಲಿ ಇರುವಾಗ ಯೆಸ್ ಬ್ಯಾಂಕ್ ನ ಈ ಏರಿಕೆಗೆ ಕಾರಣ ಆಗಿರುವುದು ವಿವಿಧ ಹಣಕಾಸು ಸಂಸ್ಥೆಗಳ ಬಂಡವಾಳ ಹೂಡಿಕೆ ಘೋಷಣೆ. ಆದರೂ ರೀಟೇಲ್ ಷೇರುದಾರರಿಗೆ ಷೇರು ಮಾರಾಟದಲ್ಲಿ ನಿರ್ಬಂಧ ವಿಧಿಸಲಾಗಿದ್ದು, ನೂರಕ್ಕೂ ಹೆಚ್ಚು ಷೇರು ಇರುವಂಥವರು ಶೇಕಡಾ ಇಪ್ಪತ್ತೈದಕ್ಕಿಂತ ಹೆಚ್ಚು ಷೇರುಗಳನ್ನು ಮೂರು ವರ್ಷಗಳ ಕಾಲ ಮಾರುವಂತಿಲ್ಲ.

11 ದಿನದ ಅಂತರದಲ್ಲಿ 1000 ಪರ್ಸೆಂಟ್ ಗೂ ಹೆಚ್ಚು ಏರಿಕೆ ಕಂಡ ಷೇರಿದು

ಅಂದಹಾಗೆ, ಮಂಗಳವಾರ ಸೆನ್ಸೆಕ್ಸ್ ಸೂಚ್ಯಂಕ 810.98 ಪಾಯಿಂಟ್ ಕುಸಿದರೆ, ನಿಫ್ಟಿ 230.35 ಪಾಯಿಂಟ್ ಇಳಿಕೆ ಕಂಡಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+