For Quick Alerts
ALLOW NOTIFICATIONS  
For Daily Alerts

ಮೋದಿ ಸರ್ಕಾರದಿಂದ 15 ಲಕ್ಷ ರೂಪಾಯಿ ಬಹುಮಾನ ಗೆಲ್ಲುವ ಅವಕಾಶ: ತಡ ಮಾಡದಿರಿ..

|

ಕೇಂದ್ರ ಸರ್ಕಾರ ಪ್ರಾಯೋಜಿತ ಅಭಿವೃದ್ಧಿ ಹಣಕಾಸು ಸಂಸ್ಥೆಗಾಗಿ ನೀವು ಹೆಸರು, ಟ್ಯಾಗ್‌ಲೈನ್ ಮತ್ತು ಲೋಗೋ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ 15 ಲಕ್ಷ ರೂಪಾಯಿವರೆಗೆ ಗೆಲ್ಲುವ ಅವಕಾಶ ಲಭಿಸಿದೆ.

 

ಕೇಂದ್ರ ಬಜೆಟ್‌ 2021ರಲ್ಲಿ ಮೂಲಸೌಕರ್ಯಗಳ ಧನಸಹಾಯಕ್ಕಾಗಿ ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಅನ್ನು ಸ್ಥಾಪಿಸುವ ಯೋಜನೆ ಘೋಷಿಸಲಾಗಿದ್ದು, ಪ್ರತಿ ವಿಭಾಗಕ್ಕೆ, 5,00,000 ನಗದು ಬಹುಮಾನವನ್ನು ಗೆಲ್ಲುವ ಅವಕಾಶವಿದೆ ಎಂದು MyGovIndia ಟ್ವೀಟ್ ಮಾಡಿದೆ.

ಆಗಸ್ಟ್‌ 15ರವರೆಗೆ ಅವಕಾಶ

ಡಿಎಫ್‌ಐಗಾಗಿ ಟ್ಯಾಗ್‌ಲೈನ್ ಮತ್ತು ಲೋಗೋ ರಚನೆಗೆ ನಾಗರೀಕರನ್ನು ಸಚಿವಾಲಯವು ವಿನಂತಿಸಿದ್ದು, ವಿಜೇತರಿಗೆ 15 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಸಚಿವಾಲಯ ತಿಳಿಸಿದೆ. ನಿಮ್ಮ ಆಯ್ಕೆಗಳನ್ನು ಕಳುಹಿಸಲು ಆಗಸ್ಟ್‌ 15, 2021ರವರೆಗೆ ಅವಕಾಶ ನೀಡಲಾಗಿದೆ.

ಯಾವ ರೀತಿಯಲ್ಲಿ ಆಯ್ಕೆ ನಡೆಯಲಿದೆ?

ಯಾವ ರೀತಿಯಲ್ಲಿ ಆಯ್ಕೆ ನಡೆಯಲಿದೆ?

ಈ ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳ ಆಯ್ಕೆಯನ್ನು ಸೃಜನಶೀಲನೆ, ಚೈತನ್ಯ, ಥೀಮ್‌ನೊಂದಿಗೆ ಸಂಪರ್ಕಿಸುವ ಸಾಮರ್ಥ್ಯದಂತಹ ಹಲವಾರು ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಆಜಾದಿ ಕಾ ಅಮೃತ್‌ ಮಹೋತ್ಸವ (ಸ್ವಾತಂತ್ರ್ಯದ ಅಮೃತ ಮಹೋತ್ಸವ) ಆಚರಣೆಯ ಹಿನ್ನೆಲೆಯಲ್ಲಿ ಸ್ಪರ್ಧೆ ಆಯೋಜಿಸಲಾಗಿದೆ.

ಡಿಎಫ್‌ಐ ಸ್ಪರ್ಧೆಯ ಬಹುಮಾನದ ವಿವರಗಳೇನು?
 

ಡಿಎಫ್‌ಐ ಸ್ಪರ್ಧೆಯ ಬಹುಮಾನದ ವಿವರಗಳೇನು?

ನಿಮ್ಮ ಆಯ್ಕೆಗಳನ್ನು ಕಳುಹಿಸಲು ಆಗಸ್ಟ್ 15, 2021ರವರೆಗೆ ಅವಕಾಶ ನೀಡಲಾಗಿದೆ. ಸ್ಪರ್ಧೆಯಲ್ಲಿ ಭಾಗವಹಿಸಿದವರ ಆಯ್ಕೆಯನ್ನು ಸೃಜನಶೀಲತೆ, ಚೈತನ್ಯ, ಥೀಮ್‌ನೊಂದಿಗೆ ಸಂಪರ್ಕಿಸುವ ಸಾಮರ್ಥ್ಯದಂತಹ ಹಲವಾರು ಮಾನದಂಡಗಳ ಮೇಲೆ ಮೌಲ್ಯಮಾಪನ ಮಾಡಲಾಗುತ್ತದೆ. ಆಜಾದಿ ಕಾ ಅಮೃತ್‌ಮಹೋತ್ಸವ (ಸ್ವಾತಂತ್ರ್ಯದ ಅಮೃತ ಮಹೋತ್ಸವ) ಆಚರಣೆಯ ಹಿನ್ನೆಲೆ

ಇನ್ನು ಪ್ರತಿ ವಿಭಾಗಕ್ಕೆ ಈ ಮೇಲೆ ತಿಳಿಸಿದಂತೆ ವಿಜೇತರಿಗೆ 5 ಲಕ್ಷ ರೂ. ಮೌಲ್ಯದ ಬಹುಮಾನವಿದೆ. ಅದೇ ರೀತಿಯಲ್ಲಿ ದ್ವಿತೀಯ ಸ್ಥಾನಕ್ಕೆ ಪ್ರತಿ ವಿಭಾಗಕ್ಕೆ 3 ರೂ. ಬಹುಮಾನ, ಮೂರನೇ ಸ್ಥಾನಕ್ಕೆ ಎರಡು ಲಕ್ಷ ಬಹುಮಾನವಿದೆ.

ಡಿಎಫ್‌ಐ ಕಾರ್ಯವೇನು?

ಡಿಎಫ್‌ಐ ಕಾರ್ಯವೇನು?

ಭಾರತದ ಮೂಲಸೌಕರ್ಯಗಳ ಉದ್ದೇಶಕ್ಕಾಗಿ ಬ್ಯಾಂಕ್‌ಗಳನ್ನು ಅವಲಂಬಿಸುವುದನ್ನು ತಪ್ಪಿಸಲು ಕಳೆದ ಕೇಂದ್ರ ಬಜೆಟ್‌ನಲ್ಲಿ ಅಭಿವೃದ್ಧಿ ಹಣಕಾಸು ಸಂಸ್ಥೆ (DFI) ಅನ್ನು ಸ್ಥಾಪಿಸುವ ಯೋಜನೆ ಘೋಷಿಸಲಾಗಿತ್ತು. ಇದರ ಮೂಲ ಉದ್ದೇಶವು ಮೂಲಸೌಕರ್ಯಗಳ ಅಭಿವೃದ್ಧಿಗೆ ಮಾತ್ರವೇ ಹಣಕಾಸು ಒದಗಿಸುವುದಾಗಿದೆ.

ಡಿಎಫ್‌ಐ ಆದೇಶದ ಮೂಲಕ ಸರ್ಕಾರದ ಬೆಂಬಲದೊಂದಿಗೆ ಅಭಿವೃದ್ಧಿ ಬ್ಯಾಂಕ್ ಆಗಿ ಕಾರ್ಯ ನಿರ್ವಹಿಸುತ್ತದೆ. ಈ ಸಂಸ್ಥೆಯು ಎಲ್ಲಾ ಸಾಲಗಾರರನ್ನು ಒಗ್ಗೂಡಿಸುತ್ತದೆ ಎಂದು MyGov ವೆಬ್‌ಸೈಟ್ ಮಾಹಿತಿ ನೀಡಿದೆ. ಈ ಕಾರಣಕ್ಕಾಗಿಯೇ ಸರ್ಕಾರವು ರಾಷ್ಟ್ರೀಯ ಮೂಲಸೌಕರ್ಯ ಪೈಪ್‌ಲೈನ್ (ಎನ್‌ಐಪಿ) ಅಡಿಯಲ್ಲಿ 2024-25ರ ವೇಳೆಗೆ 7000 ಕ್ಕೂ ಹೆಚ್ಚು ಯೋಜನೆಗಳ ಇನ್ಫ್ರಾ ಯೋಜನೆಗಳಿಗೆ 111 ಲಕ್ಷ ಕೋಟಿ ರೂಪಾಯಿ ಹೂಡಿಕೆ ಮಾಡಲು ಯೋಜಿಸಿದೆ.

English summary

You Can Win Rs 15 Lakh From Modi Govt: Check Details

Now you can win a whopping Rs 15 lakh from the central government. All you need to do is to participate in “Name, Tagline and Logo” contest for DFI
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X