ಸೋನಿ ಜೊತೆಗೆ ಝೀ ವಿಲೀನಕ್ಕೆ ಬಿಎಸ್ಇ, ಎನ್ಎಸ್ಇಯಿಂದ ಅಸ್ತು

ಭಾರತದ ಅತಿದೊಡ್ಡ ಮನರಂಜನಾ ಜಾಲ ಹೊಂದಿರುವ ಟಿವಿ ಮಾಧ್ಯಮ ಝೀ ಎಂಟರ್‌ಟೇನ್‌ಮೆಂಟ್ ಎಂಟರ್‌ಪ್ರೈಸಸ್ ಲಿಮೆಟೆಡ್ ಸಂಸ್ಥೆಯನ್ನು ಸೋನಿ ಇಂಡಿಯಾ ಕಾರ್ಪ್ಸ್ ತನ್ನ ತೆಕ್ಕೆಗೆ ತೆಗೆದುಕೊಂಡಿದೆ. ಟಿವಿ, ಒಟಿಟಿ ಮಾಧ್ಯಮ ಈ ದೊಡ್ಡ ವಿಲೀನಕ್ಕೆ ಷೇರು ನಿಯಂತ್ರಕಗಳಾದ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (ಬಿಎಸ್ಇ) ಹಾಗೂ ನ್ಯಾಷನಲ್ ಸ್ಟಾಕ್ ಎಕ್ಸ್ ಚೇಂಜ್ (ಎನ್ಎಸ್ಇ) ಗಳಿಂದ ಒಪ್ಪಿಗೆ ಸಿಕ್ಕಿದೆ.

ಈ ಮೂಲಕ ಕುಲ್ವರ್ ಮ್ಯಾಕ್ಸ್ ಎಂಟರ್‌ಟೇನ್‌ಮೆಂಟ್ ಪ್ರೈ ಲಿಮಿಟೆಡ್ (ಸೋನಿ ಪಿಕ್ಚರ್ಸ್ ನೆಟ್ವರ್ಕ್ಸ್ ಇಂಡಿಯಾ ಪ್ರೈ ಲಿಮಿಟೆಡ್) ತೆಕ್ಕೆಗೆ ಝೀ ಎಂಟರ್‌ಟೇನ್‌ಮೆಂಟ್ ಬೀಳಲಿದೆ.

ಈ ಒಪ್ಪಂದದ ಪ್ರಕಾರ ಝೀ ಸಂಸ್ಥೆಯ ಹೂಡಿಕೆಗಳು ಶೇಕಡಾ 47.07ಕ್ಕೆ ಉಳಿದಿದೆ ಉಳಿದ ಷೇರುಗಳು ಸೋನಿ ಇಂಡಿಯಾ ನೆಟ್‌ವರ್ಕ್‌ ಹೂಡಿಕೆದಾರರ ಒಡೆತನಕ್ಕೆ ಸೇರಿದೆ. ಸೋನಿ ಸುಮಾರು 1.57 ಬಿಲಿಯನ್ ಡಾಲರ್ ಅಥವಾ 11,571 ಕೋಟಿ ಹೂಡಿಕೆ ಮಾಡಲಿದೆ. ಈ ಮೂಲಕ ಶೇಕಡಾ 52.93ರಷ್ಟು ಷೇರು ಪಾಲು ಪಡೆಯಲಿದೆ.

ಸೋನಿ ಜೊತೆಗೆ ಝೀ ವಿಲೀನಕ್ಕೆ ಬಿಎಸ್ಇ, ಎನ್ಎಸ್ಇಯಿಂದ ಅಸ್ತು

ಹೊಸ ಒಪ್ಪಂದದಂತೆ ಸೋನಿ ಇಂಡಿಯಾ ಶೇ 53ರಷ್ಟು ಪಾಲು ಹೊಂದಲಿದ್ದು, ಮಿಕ್ಕಿದ್ದು ಝೀ ಪಾಲಾಗಲಿದೆ

ಸೋನಿ ಇಂಡಿಯಾ ಸರಿ ಸುಮಾರು 1.58 ಬಿಲಿಯನ್ ಡಾಲರ್ ಮೊತ್ತ ಹೂಡಿಕೆ ಮಾಡಲಿದೆ

ಸೋನಿ ಇಂಡಿಯಾಕ್ಕೂ ಮೊದಲು ಝೀ ಸಂಸ್ಥೆಯಲ್ಲಿ ಇತರೆ ಸಂಸ್ಥೆಗಳು ಕೂಡಾ ಹೂಡಿಕೆ ಮಾಡಿವೆ. ಇವೆಸ್ಕೋ ಡೆವಲಪ್ಮೆಂಟ್ ಮಾರ್ಕೆಟ್ಸ್ ಫಂಡ್ ಹಾಗೂ ಒಎಫ್ಐ ಗ್ಲೋಬಲ್ ಚೀನಾ ಫಂಡ್ ಎಲ್ಎಲ್ಸಿ ಹೂಡಿಕೆ ಮಾಡಿದ್ದು, ಶೇ 17.9ರಷ್ಟು ಪಾಲು ಹೊಂದಿವೆ

1992ರಲ್ಲಿ ಸಂಸ್ಥೆ ಹುಟ್ಟು ಹಾಕಿದ ಸುಭಾಷ್ ಚಂದ್ರ ಅವರ ಕುಟುಂಬಸ್ಥರು ಸಂಸ್ಥೆ ಮೇಲೆ ನಿಧಾನವಾಗಿ ಹಿಡಿತ ಕಳೆದುಕೊಳ್ಳುತ್ತಿದ್ದು, ಪುನೀತ್ ನಿರ್ಗಮನದಿಂದ ಇನ್ನಷ್ಟು ಅಂತರ ಉಂಟಾಗುತ್ತಿತ್ತು. ಸದ್ಯಕ್ಕೆ ಇಬ್ಬರು ಬೋರ್ಡ್ ಸದಸ್ಯರು ಸಂಸ್ಥೆ ತೊರೆದಿದ್ದಾರೆ.

ಭಾರತದಲ್ಲಿ ಅತಿದೊಡ್ಡ ಮನರಂಜನಾ ಜಾಲವನ್ನು ರಚಿಸಲಿದ್ದು, ಶೇಕಡಾ 26ರಷ್ಟು ವೀಕ್ಷಣೆಯ ಹಂಚಿಕೆಯನ್ನು ಹೊಂದಿದ್ದು, ಜೀ ಜೊತೆ ಶೇಕಡಾ 18ರಷ್ಟು ವೀಕ್ಷಕರ ಪಾಲು ಮತ್ತು ಸೋನಿ ಶೇಕಡಾ 8ರಷ್ಟು ವೀಕ್ಷಕರ ಪಾಲು ಹೊಂದಿದೆ.

ಎರಡು ಕಂಪನಿ ವಿಲೀನದೋಂದಿಗೆ ಬರೋಬ್ಬರಿ 75 ಚಾನೆಲ್‌ಗಳ ನೆಟ್‌ವರ್ಕ್ ಅನ್ನು ಹೊಂದಲಿದೆ. SPNI ಆಪರೇಟಿಂಗ್ 26 ಚಾನೆಲ್‌ಗಳೊಂದಿಗೆ ಕಾರ್ಯನಿರ್ವಹಿಸುತ್ತದೆ ಮತ್ತು ಕ್ರೀಡಾ ಪ್ರಕಾರದಲ್ಲಿ ಎರಡು ಹೊಸ ಚಾನೆಲ್‌ಗಳು ಸೇರಿದೆ. ಇನ್ನು ಜೀ ಎಂಟರ್‌ಟೈನ್‌ಮೆಂಟ್ 49 ಚಾನೆಲ್‌ಗಳನ್ನು ಸೇರಿಸುತ್ತದೆ.

ಜೀ 173 ಕ್ಕೂ ಹೆಚ್ಚು ದೇಶಗಳಲ್ಲಿ ಮತ್ತು ಪ್ರಪಂಚದಾದ್ಯಂತ 1.3 ಶತಕೋಟಿಗೂ ಹೆಚ್ಚು ಜನರನ್ನು ತಲುಪಿದೆ. ಪ್ರತಿ ವಾರ ಭಾರತದಲ್ಲಿ 600 ದಶಲಕ್ಷಕ್ಕೂ ಹೆಚ್ಚು ಜನರನ್ನು ಜೀ ತಲುಪುತ್ತಿದೆ. ಆದರೆ ಸೋನಿ ಭಾರತದಲ್ಲಿ 700 ಮಿಲಿಯನ್ ವೀಕ್ಷಕರನ್ನು ತಲುಪುತ್ತದೆ ಮತ್ತು 167 ದೇಶಗಳಲ್ಲಿ ಲಭ್ಯವಿದೆ .

ಎರಡೂ ನೆಟ್‌ವರ್ಕ್‌ಗಳು ವೀಡಿಯೋ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳನ್ನು ಹೊಂದಿವೆ. ZEE5 ಮತ್ತು SonyLIV ಪ್ರತ್ಯೇಕ ಸ್ಟ್ರೀಮಿಂಗ್ ಹೊಂದಿದ್ದು, ಚಾನೆಲ್‌ಗಳ ಜೊತೆಗೆ ಒಟಿಟಿ ಮೂಲಕ ಜನರನ್ನು ಹೆಚ್ಚಾಗಿ ತಲುಪಲಿದೆ.

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+