ಬೆಂಗಳೂರು, ಏಪ್ರಿಲ್ 24: ಬೆಂಗಳೂರಿನ ಜನರು ಬುಧವಾರ 'ಶೂನ್ಯ ನೆರಳು ದಿನ' ಎಂಬ ಅಪರೂಪದ ವಿದ್ಯಮಾನಕ್ಕೆ ಸಾಕ್ಷಿಯಾಗಲಿದ್ದಾರೆ.
ಈ ಮಹತ್ವದ ಘಟನೆ 12:17 ರಿಂದ 12:23 ನಡುವೆ ಸಂಭವಿಸುತ್ತದೆ. ಸೂರ್ಯನ ಸ್ಥಾನವು ನಿಖರವಾಗಿ ತಲೆ ಮೇಲೆ ನಿಖರವಾಗಿ ಬೀಳಲಿದ್ದು, ಎಲ್ಲಾ ನೆರಳುಗಳು ಕಣ್ಮರೆಯಾಗುತ್ತವೆ. ಈ ವಿಸ್ಮಯವು ಬೆಂಗಳೂರು ಅಲ್ಲದೆ ಕನ್ಯಾಕುಮಾರಿ, ಭೋಪಾಲ್, ಹೈದರಾಬಾದ್ ಮತ್ತು ಮುಂಬೈ ಮುಂತಾದ ಸ್ಥಳಗಳಲ್ಲಿ ಜನರು ಈ ವಿದ್ಯಮಾನವನ್ನು ವೀಕ್ಷಿಸುವ ಸಾಧ್ಯತೆಯಿದೆ.

ಶೂನ್ಯ ನೆರಳು ದಿನ ಎಂದರೇನು?
ಶೂನ್ಯ ನೆರಳು ದಿನವು ಸೂರ್ಯ ನೇರವಾಗಿ ತಲೆಯ ಮೇಲೆ ಬಂದಾಗ ಸಂಭವಿಸುತ್ತದೆ. ಇದರ ಪರಿಣಾಮವಾಗಿ ವಸ್ತುಗಳು ಮಧ್ಯಾಹ್ನ ಯಾವುದೇ ನೆರಳು ಗೋಚರಿಸುವುದಿಲ್ಲ. ಈ ವಿದ್ಯಮಾನವು ಸಾಮಾನ್ಯವಾಗಿ ಸಮಭಾಜಕದ ಸಮೀಪವಿರುವ ಪ್ರದೇಶಗಳಲ್ಲಿ ಸಂಭವಿಸುತ್ತದೆ. ಅಲ್ಲಿ ಸೂರ್ಯನ ಕೋನವು ಭೂಮಿಯ ಮೇಲ್ಮೈಗೆ ಬಹುತೇಕ ಲಂಬವಾಗಿರುತ್ತದೆ. ಪರಿಣಾಮವಾಗಿ ವಸ್ತುಗಳ ನೆರಳು ಕಾಣುವುದಿಲ್ಲ.
ಭೂಮಿಯು ಸೂರ್ಯನ ಸುತ್ತ ಸುತ್ತುತ್ತಿರುವಾಗ ಆಕಾಶದಲ್ಲಿ ತನ್ನ ಸ್ಥಾನವನ್ನು ಬದಲಾಯಿಸುತ್ತದೆ. ವರ್ಷದ ವಿವಿಧ ಸಮಯಗಳಲ್ಲಿ ವಿವಿಧ ಅಕ್ಷಾಂಶಗಳಲ್ಲಿ ತನ್ನ ಸ್ಥಾನವನ್ನು ತಲುಪುತ್ತದೆ. ಇದು ಋತುಗಳನ್ನು ಸೃಷ್ಟಿಸುತ್ತದೆ ಮತ್ತು ಸೂರ್ಯನು ಸಮಭಾಜಕದ 23.5 ಡಿಗ್ರಿ ದಕ್ಷಿಣದಿಂದ 23.5 ಡಿಗ್ರಿ ಉತ್ತರಕ್ಕೆ ಹೋಗುವಂತೆ ಮಾಡುತ್ತದೆ. ಮತ್ತೆ ವಾರ್ಷಿಕವಾಗಿ ಮತ್ತೆ ಹಿಂತಿರುಗುತ್ತದೆ.
ಆಸ್ಟ್ರೋನಾಮಿಕಲ್ ಸೊಸೈಟಿ ಆಫ್ ಇಂಡಿಯಾದ ಪ್ರಕಾರ, +23.5 ಮತ್ತು -23.5 ಡಿಗ್ರಿ ಅಕ್ಷಾಂಶಗಳ ನಡುವಿನ ಸ್ಥಳಗಳಲ್ಲಿ ವರ್ಷಕ್ಕೆ ಎರಡು ಬಾರಿ ಶೂನ್ಯ ನೆರಳು ದಿನ ಸಂಭವಿಸುತ್ತದೆ.
ಬೆಂಗಳೂರಿನಲ್ಲಿ ಶೂನ್ಯ ನೆರಳು ದಿನ
ಬೆಂಗಳೂರಿನಲ್ಲಿರುವ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (IIA) ತನ್ನ ಕೋರಮಂಗಲ ಕ್ಯಾಂಪಸ್‌ನಲ್ಲಿ ಶೂನ್ಯ ನೆರಳು ದಿನವನ್ನು ಆಚರಿಸಲು ಏಪ್ರಿಲ್ 24 ರಂದು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯುವ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಸಾರ್ವಜನಿಕರನ್ನು ಅವರು ಆಹ್ವಾನಿಸಿದ್ದಾರೆ. ಭಾಗವಹಿಸುವವರು ವಸ್ತುಗಳ ಬದಲಾಗುತ್ತಿರುವ ನೆರಳಿನ ಉದ್ದವನ್ನು ವೀಕ್ಷಿಸಬಹುದು ಮತ್ತು ಅಳೆಯಬಹುದು. ಸೂರ್ಯನ ಸುತ್ತ ಭೂಮಿಯ ಓರೆ ಮತ್ತು ಕಕ್ಷೆಯ ಒಳನೋಟಗಳನ್ನು ಕಾಣಬಹುದು.
ಇತರ ನಗರಗಳಲ್ಲಿ ಶೂನ್ಯ ನೆರಳು ದಿನ
ಕನ್ಯಾಕುಮಾರಿ: 10 ಏಪ್ರಿಲ್ ಮತ್ತು 01 ಸೆಪ್ಟೆಂಬರ್ (ಮಧ್ಯಾಹ್ನ: 12:21, 12:22)
ಬೆಂಗಳೂರು: ಏಪ್ರಿಲ್ 24 ಮತ್ತು ಆಗಸ್ಟ್ 18 (ಮಧ್ಯಾಹ್ನ: 12:17, 12:25)
ಹೈದರಾಬಾದ್: 09 ಮೇ ಮತ್ತು 05 ಆಗಸ್ಟ್ (ಮಧ್ಯಾಹ್ನ: 12:12, 12:19)
ಮುಂಬೈ: 15 ಮೇ ಮತ್ತು 27 ಜೂನ್ (ಮಧ್ಯಾಹ್ನ: 12:34, 12:45)
ಭೋಪಾಲ್: 13 ಜೂನ್ ಮತ್ತು 28 ಜೂನ್ (ಮಧ್ಯಾಹ್ನ: 12:20, 12:23)


Click it and Unblock the Notifications