For Quick Alerts
ALLOW NOTIFICATIONS  
For Daily Alerts

ಝೆರೋದಾದಿಂದ ಸೆಕ್ಯೂರಿಟೀಸ್ ಮೇಲೆ ಸಾಲದ ಪ್ರಾಡಕ್ಟ್ ಶುರು

|

ರೀಟೇಲ್ ಬ್ರೋಕರೇಜ್ ಸಂಸ್ಥೆಯಾದ ಝೆರೋದಾಗೆ ಎನ್ ಬಿಎಫ್ ಸಿ ಪರವಾನಗಿ ಸಿಕ್ಕಿ ಎರಡು ವರ್ಷಗಳಾಗಿವೆ. ಇದೀಗ ಸೆಕ್ಯೂರಿಟೀಸ್ ಮೇಲೆ ಸಾಲ ನೀಡುವ ಪ್ರಾಡಕ್ಟ್ ಪರಿಚಯಿಸುತ್ತಿದೆ ಝೆರೋದಾ. ಕಂಪೆನಿ ಮೌಲ್ಯ 100 ಕೋಟಿ ಅಮೆರಿಕನ್ ಡಾಲರ್ ಇದೆ ಎಂಬುದು ಉದ್ಯೋಗಿಗಳಿಂದ ಷೇರು ಬೈ ಬ್ಯಾಕ್ ಮಾಡುವಾಗ ಗೊತ್ತಾಗಿತ್ತು. ಆಗಸ್ಟ್ ಕೊನೆಗೆ ಸಾಲ ನೀಡುವ ಪ್ರಾಡಕ್ಟ್ ವೊಂದನ್ನು ಶುರು ಮಾಡುತ್ತಿದೆ.

ಸೆಕ್ಯೂರಿಟಿ ಮೇಲೆ ಸಾಲ ನೀಡುವುದಕ್ಕೆ ಕೆಲ ನಿಯಮಗಳನ್ನು ಸೆಬಿ ಕಳೆದ ವರ್ಷ ಬದಲಾಯಿಸಿತು. ಆದ್ದರಿಂದ ನಮ್ಮ ಪ್ರಾಡಕ್ಟ್ ಅನ್ನು ಮರು ರೂಪಿಸಬೇಕಾಯಿತು. ಮುಂದಿನ ನಾಲ್ಕೈದು ವಾರದಲ್ಲಿ ಈ ಫೀಚರ್ ನೊಂದಿಗೆ ಶುರು ಮಾಡುತ್ತೇವೆ. ದೊಡ್ಡ ಸಂಖ್ಯೆಯಲ್ಲಿ ಇರುವ ನಮ್ಮ ಗ್ರಾಹಕರಿಗೆ ಇದನ್ನು ತಲುಪಿಸುತ್ತೇವೆ ಎಂದು ಝೆರೋದಾ ಸಿಇಒ ಹಾಗೂ ಸಂಸ್ಥಾಪಕ ನಿತಿನ್ ಕಾಮತ್ ಹೇಳಿದ್ದಾರೆ.

ಝೆರೋದಾದಿಂದ ಸೆಕ್ಯೂರಿಟೀಸ್ ಮೇಲೆ ಸಾಲದ ಪ್ರಾಡಕ್ಟ್ ಶುರು

ಈ ಹೊಸ ಸಾಲ ಯೋಜನೆ ಅಡಿಯಲ್ಲಿ ಗ್ರಾಹಕರ ಹೂಡಿಕೆ ಪೋರ್ಟ್ ಫೋಲಿಯೋ ಮೇಲೆ ಹಣಕಾಸು ಸೌಲಭ್ಯ ಒದಗಿಸುತ್ತದೆ. 12ರಿಂದ 13 ಪರ್ಸೆಂಟ್ ಬಡ್ಡಿಯನ್ನು ಹಾಕಲಾಗುತ್ತದೆ. ಗ್ರಾಹಕರು ಒಂದು ಲಕ್ಷ ರುಪಾಯಿ ಹೂಡಿಕೆ ಹೊಂದಿದ್ದರೆ ಅದಕ್ಕೆ ಒಟ್ಟು ಮೌಲ್ಯದ 60% ಸಾಲ ನೀಡಲಾಗುತ್ತದೆ ಎಂದು ಕಾಮತ್ ಹೇಳಿದ್ದಾರೆ.

English summary

Zerodha To Launch Loan Against Securities Product

Retail brokerage Zerodha launched loan on securities product. Here is the details of product.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X