ಬೆಂಗಳೂರು, ಹೈದರಾಬಾದ್ ಹಾಗೂ ಚೆನ್ನೈ ಸೇರಿದಂತೆ ಭಾರತದ 35 ನಗರಗಳಲ್ಲಿ ಝೂಮ್ ಕಾರು ಸೇವೆ ಆರಂಭಿಸಿದೆ. ಸ್ವತಃ ಚಾಲನೆ ಮಾಡಬಹುದಾದ ಕಾರು ಬಾಡಿಗೆ ನೀಡುವ ಕಂಪೆನಿ ಝೂಮ್ ಕಾರ್, ವಿಶೇಷ "ಝೂಮ್ ಟು ಆತ್ಮನಿರ್ಭರ್" ಮಾರಾಟ ಆರಂಭ ಮಾಡಿದೆ. ಈ ವಿಶೇಷ ಮಾರಾಟದ ಭಾಗವಾಗಿ, ಮೇ 26ರಿಂದ 29ರ ಮಧ್ಯೆ ಬುಕ್ ಮಾಡಿದರೆ ಝೂಮ್ ಕಾರ್ 100 ಪರ್ಸೆಂಟ್, ಅದರಲ್ಲಿ 50% ಕಡಿತ ಮತ್ತು 50% ಕ್ಯಾಶ್ ಬ್ಯಾಕ್ ನೀಡುತ್ತಿದೆ.
ಜೂನ್ 1ನೇ ತಾರೀಕಿನ ನಂತರದ ಅವಧಿಗೆ ಕಾರು ಬಾಡಿಗೆ ಬುಕ್ ಮಾಡಬಹುದು. ಅದಕ್ಕಾಗಿ ಕೋಡ್ ZAN100 ಎಂಬುದನ್ನು ಬಳಸಬೇಕು. ಎಲ್ಲ ಬುಕ್ಕಿಂಗ್ ಮೇಲೂ ಅನಿರ್ದಿಷ್ಟಾವಧಿಗೆ ಉಚಿತ ರೀ ಷೆಡ್ಯೂಲ್ ಕೂಡ ದೊರೆಯಲಿದೆ. ದಕ್ಷಿಣ ಮತ್ತು ಪೂರ್ವ ವಲಯಗಳಲ್ಲಿ ಕಾರ್ಯಾರಂಭ ಮಾಡಲಾಗಿದೆ.

ಅದರಲ್ಲಿ ಬೆಂಗಳೂರು, ಮಂಗಳೂರು, ಹೈದರಾಬಾದ್, ವಿಶಾಖಪಟ್ಟಣ, ಚೆನ್ನೈ, ಕೊಯಮತ್ತೂರು, ಕೊಚ್ಚಿ, ಕಲ್ಲಿಕೋಟೆ, ಗುವಾಹತಿ, ಸಿಲಿಗುರಿ ಮತ್ತು ಭುವನೇಶ್ವರ್ ಸೇರಿದಂತೆ ಇತರ ನಗರಗಳು ಒಳಗೊಂಡಿವೆ. ಗೃಹ ಸಚಿವಾಲಯದ ಮಾರ್ಗದರ್ಶಿ ಸೂತ್ರದ ಅನ್ವಯ, ಮೈಸೂರಿನಂಥ ಊರುಗಳಲ್ಲಿ ಬೆಳಗ್ಗೆ 7ರಿಂದ ರಾತ್ರಿ 7ರ ಮಧ್ಯೆ ಮಾತ್ರ ಕಾರುಗಳು ಬಾಡಿಗೆಗೆ ದೊರೆಯುತ್ತವೆ.


Click it and Unblock the Notifications