ನಾವು ಈಗಾಗಲೇ ಅಕ್ಟೋಬರ್‌ನ ಅರ್ಧ ಭಾಗದಲ್ಲಿದ್ದೇವೆ. ಈ ತಿಂಗಳಿನಲ್ಲಿ ಇನ್ನು 15 ದಿನಗಳಿಗಿಂತ ಕಡಿಮೆ ಸಮಯ ಬಾಕಿ ಉಳಿದಿದೆ. ನೀವು ಯಾವುದೇ ಮಹತ್ವದ ಬ್ಯಾಂಕಿಂಗ್-ಸಂಬಂಧಿತ ಕಾರ್ಯಗಳನ್ನು ಹೊಂದಿದ್ದರೆ, ಪ್ರಮುಖ ಸುದ್ದಿ ಇಲ್ಲಿದೆ. ಅಕ್ಟೋಬರ್ 2023 ರಲ್ಲಿ ಇನ್ನೂ ಎಂಟು ಬ್ಯಾಂಕ್ ರಜಾದಿನಗಳು ಉಳಿದಿವೆ ಎಂದರೆ ನಂಬುತ್ತೀರಾ?
ಅಕ್ಟೋಬರ್‌ನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (ಆರ್‌ಬಿಐ) ರಜಾ ಪಟ್ಟಿಯ ಪ್ರಕಾರ, ದುರ್ಗಾ ಪೂಜೆ, ದಸರಾ ಮತ್ತು ಇತರ ವಿವಿಧ ಹಬ್ಬಗಳು ಮತ್ತು ಕಾರ್ಯಕ್ರಮಗಳಿಗಾಗಿ ಬ್ಯಾಂಕುಗಳು ಮುಚ್ಚಲಾಗುತ್ತದೆ. ಇನ್ನು ಈ ಎಂಟು ರಜೆಗಳನ್ನು ಹೊರತುಪಡಿಸಿ ಇನ್ನು ಕೆಲವು ವಾರದ ರಜೆಗಳು ಇದೆ. ಒಟ್ಟಾರೆಯಾಗಿ 10 ದಿನ ಬ್ಯಾಂಕ್ ಬಂದ್ ಇರಲಿದೆ.

ವಿವಿಧ ರಾಜ್ಯಗಳು ಮತ್ತು ನಗರಗಳಲ್ಲಿ ಆಚರಿಸಲಾಗುವ ಹಬ್ಬಗಳು ಮತ್ತು ಇತರೆ ವಿಶೇಷ ದಿನಗಳ ಆಧಾರದ ಮೇಲೆ ಬ್ಯಾಂಕ್ ರಜಾದಿನಗಳು ಬದಲಾಗಬಹುದು. ಅದೇನೇ ಇದ್ದರೂ, ಬ್ಯಾಂಕ್ ಶಾಖೆಗಳನ್ನು ಮುಚ್ಚಿದ್ದರೂ ಕೂಡಾ ನಿಮ್ಮ ಮನೆಯಿಂದಲೇ ನೀವು ಆನ್‌ಲೈನ್ ಮೂಲಕ ಬ್ಯಾಂಕಿಂಗ್ ವಹಿವಾಟುಗಳನ್ನು ನಡೆಸಲು ಸಾಧ್ಯವಾಗಲಿದೆ.
ಅಕ್ಟೋಬರ್‌ನಲ್ಲಿ ಮುಂಬರುವ ಬ್ಯಾಂಕ್ ರಜಾದಿನಗಳ ವಿವರ ಇಲ್ಲಿದೆ:
1) ಅಕ್ಟೋಬರ್ 21 (ಶನಿವಾರ): ದುರ್ಗಾ ಪೂಜೆ (ಮಹಾ ಸಪ್ತಮಿ) - ತ್ರಿಪುರಾ, ಅಸ್ಸಾಂ, ಮಣಿಪುರ ಮತ್ತು ಬಂಗಾಳದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
2) ಅಕ್ಟೋಬರ್ 23 (ಸೋಮವಾರ): ಮಹಾನವಮಿ, ಆಯುಧಪೂಜೆ, ದುರ್ಗಾಪೂಜೆ, ವಿಜಯ ದಶಮಿ - ತ್ರಿಪುರಾ, ಕರ್ನಾಟಕ, ಒರಿಸ್ಸಾ, ತಮಿಳುನಾಡು, ಅಸ್ಸಾಂ, ಆಂಧ್ರಪ್ರದೇಶ, ಕಾನ್ಪುರ, ಕೇರಳ, ಜಾರ್ಖಂಡ್ ಮತ್ತು ಬಿಹಾರದಲ್ಲಿ ಬ್ಯಾಂಕುಗಳನ್ನು ಬಂದ್ ಮಾಡಲಾಗುತ್ತದೆ.
3) ಅಕ್ಟೋಬರ್ 24 (ಮಂಗಳವಾರ): ದಸರಾ (ವಿಜಯದಶಮಿ), ದುರ್ಗಾ ಪೂಜೆ - ಆಂಧ್ರಪ್ರದೇಶ ಮತ್ತು ಮಣಿಪುರ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಬ್ಯಾಂಕುಗಳು ಬಂದ್ ಆಗಿರಲಿದೆ.
4) ಅಕ್ಟೋಬರ್ 25 (ಬುಧವಾರ): ದುರ್ಗಾ ಪೂಜೆ (ದಸೈನ್) - ಸಿಕ್ಕಿಂನಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.
5) ಅಕ್ಟೋಬರ್ 26 (ಗುರುವಾರ): ದುರ್ಗಾ ಪೂಜೆ (ದಸೈನ್)/ ವಿಲೀನ ದಿನ- ಸಿಕ್ಕಿಂ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಬ್ಯಾಂಕ್‌ಗಳನ್ನು ಮುಚ್ಚಲಾಗುತ್ತದೆ.
6) ಅಕ್ಟೋಬರ್ 27 (ಶುಕ್ರವಾರ): ದುರ್ಗಾ ಪೂಜೆ (ದಸೈನ್) - ಸಿಕ್ಕಿಂನಲ್ಲಿ ಬ್ಯಾಂಕುಗಳನ್ನು ಬಂದ್ ಮಾಡಲಾಗುತ್ತದೆ.
7) ಅಕ್ಟೋಬರ್ 28 (ನಾಲ್ಕನೇ ಶನಿವಾರ): ಲಕ್ಷ್ಮಿ ಪೂಜೆ - ಪಶ್ಚಿಮ ಬಂಗಾಳದಲ್ಲಿ ಬ್ಯಾಂಕ್‌ಗಳನ್ನು ಬಂದ್ ಆಗಿರಲಿದೆ.
8) ಅಕ್ಟೋಬರ್ 31 (ಮಂಗಳವಾರ): ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ - ಗುಜರಾತ್‌ನಲ್ಲಿ ಬ್ಯಾಂಕುಗಳು ಬಂದ್ ಆಗಿರುತ್ತದೆ.
9) ಅಕ್ಟೋಬರ್ 22: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
10) ಅಕ್ಟೋಬರ್ 29: ಭಾನುವಾರ, ವಾರದ ರಜೆ, ದೇಶದಾದ್ಯಂತ ಬ್ಯಾಂಕ್ ರಜೆ
ಕರ್ನಾಟಕದಲ್ಲಿ ಬ್ಯಾಂಕ್ ರಜೆ
ಅಕ್ಟೋಬರ್ 1: ಭಾನುವಾರ, ವಾರದ ರಜೆ
ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
ಅಕ್ಟೋಬರ್ 8: ಭಾನುವಾರ, ವಾರದ ರಜೆ
ಅಕ್ಟೋಬರ್ 14: ಎರಡನೇ ಶನಿವಾರ
ಅಕ್ಟೋಬರ್ 15: ಭಾನುವಾರ, ವಾರದ ರಜೆ
ಅಕ್ಟೋಬರ್ 22: ಭಾನುವಾರ, ವಾರದ ರಜೆ
ಅಕ್ಟೋಬರ್ 23: ಮಹಾ ನವಮಿ
ಅಕ್ಟೋಬರ್ 24: ವಿಜಯ ದಶಮಿ
ಅಕ್ಟೋಬರ್ 28: ನಾಲ್ಕನೇ ಶನಿವಾರ
ಅಕ್ಟೋಬರ್ 29: ಭಾನುವಾರ, ವಾರದ ರಜೆ


Click it and Unblock the Notifications