
ಮಕ್ಕಳಿಗೆ ಹಣದ ಶಿಕ್ಷಣವನ್ನು ಗುರುಕುಲ ಶಿಕ್ಷಣ ಕಾಲದಲ್ಲಿಯೇ ಕಲಿಸಿಕೊಡಲಾಗುತ್ತಿತ್ತು. ಶಿಷ್ಯರು ತಾವೇ ಸ್ವಂತ ದುಡಿದ ಹಣವನ್ನು ಗುರು ದಕ್ಷಿಣೆಯಾಗಿ ನೀಡಬೇಕಿತ್ತು. ಈ ಮೂಲಕ ಹಣಕಾಸು ಸ್ವಾತಂತ್ರ್ಯದ ಪಾಠವನ್ನು ಹೇಳಿಕೊಡಲಾಗುತ್ತಿತ್ತು.
ನಾವು ಬಾಲ್ಯದಲ್ಲಿ ಡಬ್ಬಿಯಲ್ಲಿ ಒಂದೊಂದು ರುಪಾಯಿ ಕೂಡಿಡುತ್ತಿದ್ದೇವು. ಸ್ಕೂಲ್ ಡೇಗೆ ಬಟ್ಟೆ ಖರೀದಿಸಲು ಅಥವಾ ವರ್ಷದ ಪಿಕ್ ನಿಕ್ ಹೋಗಲು ಆ ದುಡ್ಡು ಸಾಕಾಗುತ್ತಿತ್ತು. ಈಗ ಹೆಚ್ಚಿನ ಮಕ್ಕಳು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ. ಹೆಚ್ಚಿನವರಿಗೆ ದುಡ್ಡಿನ ಬೆಲೆಯೇ ಗೊತ್ತಿಲ್ಲ. ಉಳಿಸುವುದಕ್ಕೆ ಗೊತ್ತಿಲ್ಲದ ಮೇಲೆ ಎಷ್ಟು ಗಳಿಸಿದರೆ ಏನು ಪ್ರಯೋಜನ?
ಮಕ್ಕಳಿಗೆ ಹಣದ ಮಹತ್ವ ತಿಳಿಸಲು ಕೆಲವು ದಾರಿಗಳು
* ಹಣಕಾಸು ಬಗ್ಗೆ ಕಲಿಯಲು ಮಕ್ಕಳಿಗೆ ನಾವು ಬೆಂಬಲ ನೀಡಬೇಕು. ನೀತಿ ಕಥೆ ಮತ್ತು ಆಟಗಳಲ್ಲಿ ಹಣದ ಮಹತ್ವವನ್ನು ಮಕ್ಕಳಿಗೆ ಅರ್ಥವಾಗುವಂತೆ ಹೇಳಿಕೊಡಬಹುದು. ಉದಾಹರಣೆಗೆ: ಒಂದೂರಿನಲ್ಲಿ ಒಬ್ಬ ಇದ್ದ. ಆತ ಹಣವನ್ನು ಪೋಲು ಮಾಡುತ್ತಿದ್ದ... ಇತ್ಯಾದಿ ಕಥೆಗಳನ್ನು ಹೇಳಬಹುದು.
* ಮಕ್ಕಳು ಬೆಳೆಯುತ್ತಿದ್ದಂತೆ ಹೆಚ್ಚು ಹೆಚ್ಚು ಹಣದ ಅವಶ್ಯಕತೆ ಬೀಳಬಹುದು. ಮಕ್ಕಳು ಖರ್ಚು ಮಾಡುವ ಪ್ರಮಾಣವೂ ಜಾಸ್ತಿಯಾಗಬಹುದು. ಅವರಿಗೆ ಹಣದ ಮೌಲ್ಯದ ಕುರಿತು ತಿಳಿಸಿಹೇಳಿ. ಹಣಕ್ಕಾಗಿ ಕಷ್ಟಪಟ್ಟ, ದುಡಿಯಲು ಆರಂಭಿಸಿದ ನಿಮ್ಮ ಕಥೆಗಳನ್ನು ಹೇಳಿರಿ. ಹಣ ಉಳಿತಾಯ ಮಾಡುವ ಅವಶ್ಯಕತೆಯನ್ನು ಹೇಳಿರಿ. ಹಣ ಪೋಲು ಮಾಡಬಾರದೆಂದು ತಿಳಿಸಿರಿ.
* ಮಕ್ಕಳು ಕೆಲವೊಮ್ಮೆ ಅನವಶ್ಯಕ ಬೇಡಿಕೆಗಳನ್ನು ಇಡಬಹುದು. ಅದು ಅನಗತ್ಯ ಖರ್ಚಿಗೆ ದಾರಿಯಾಗಬಹುದು. ಅವರ ಬೇಡಿಕೆಯು ಯಾಕೆ ವ್ಯರ್ಥವೆಂದು ಅವರಿಗೆ ಅರ್ಥವಾಗುವಂತೆ ಬಿಡಿಸಿಹೇಳಿ. ಮಕ್ಕಳಿಗೆ ಇದು ಅರ್ಥವಾದರೆ ನಂತರ ಅನಗತ್ಯ ಬೇಡಿಕೆಗಳನ್ನು ಇಡುವುದಿಲ್ಲ.
* ಮಕ್ಕಳ ಹೆಚ್ಚಿನ ಅವಶ್ಯಕತೆಗಾಗಿ ಫಿಕ್ಸ್‌ಡ್ ಅಥವಾ ಇಂತಿಷ್ಟು ಹಣ ನಿಗದಿ ಮಾಡಿ ನೀಡಿ. ಉದಾಹರಣೆಗೆ ಶೂ ಬೇಕೆಂದರೆ 500 ರುಪಾಯಿ ನೀಡಿ. ಅದರಲ್ಲಿ ಹಣ ಉಳಿಸೋಕೆ ಹೇಳಿ. ಅವರು ಎಷ್ಟು ವಾಪಸ್ ಕೊಡುತ್ತಾರೆ ಎಂದು ನೋಡಿ.
* ಈಗ ಹೆಚ್ಚಿನವರು ಮಕ್ಕಳಿಗೆ ತಿಂಗಳಿಗೆ ಇಂತಿಷ್ಟು ಎಂದು ದುಡ್ಡು ನೀಡುತ್ತಾರೆ. ಹಣವನ್ನು ಅವರು ಹೇಗೆ ವೆಚ್ಚ ಮಾಡುತ್ತಾರೆಂದು ನಿಗಾ ಇಡಿ. ಪ್ರತಿತಿಂಗಳು ಯಾವುದಕ್ಕೆಲ್ಲ ಖರ್ಚು ಮಾಡಿದ್ದಾರೆಂಬ ಮಾಹಿತಿ ನೀಡಲು ಹೇಳಿ. ಮಕ್ಕಳು ವೆಚ್ಚ ನಿಯಂತ್ರಿಸಲು ಕಲಿತರೆ ಅವರಿಗೆ ಬಹುಮಾನ ನೀಡುವ ಮೂಲಕ ಉತ್ತೇಜಿಸಿರಿ.
* ಕೆಲವೊಮ್ಮೆ ಮಕ್ಕಳು ತಮ್ಮ ಸ್ನೇಹಿತರಿಂದ ಹಣ ಸಾಲ ಪಡೆಯಬಹುದು. ಅದಕ್ಕೆ ಬಡ್ಡಿ ನೀಡಿ ವಾಪಸ್ ನೀಡಲು ಹೇಳಿ. ಇದರಿಂದಾಗಿ ಮಕ್ಕಳಿಗೆ ಬಡ್ಡಿ ಮತ್ತು ಹೂಡಿಕೆಯ ಪಾಠವೂ ದೊರಕುತ್ತದೆ. ಇದರಿಂದ ಉಳಿತಾಯದ ಮನೋಭಾವವೂ ಹೆಚ್ಚಾಗುತ್ತದೆ.
* ಮಕ್ಕಳು ಹಣದ ಕುರಿತಾಗಿ ಯಾವುದಾದರೂ ಸಂಶಯ ಪ್ರಕಟಿಸಿದರೆ ಅವರಿಗೆ ಅರ್ಥವಾಗುವಂತೆ ತಿಳಿಸಿ. ಹಣ, ಉಳಿತಾಯ, ಬ್ಯಾಂಕ್, ಹೂಡಿಕೆ, ಕರೆನ್ಸಿ ಮಾರುಕಟ್ಟೆ ಇತ್ಯಾದಿ ಪಾಠಗಳನ್ನು ಮಾಡುತ್ತಿರಿ.
* ಮಕ್ಕಳಿಗೆ ದುಡ್ಡು ಕಳೆದುಕೊಂಡು ಕೂಡ ಅಭ್ಯಾಸವಾಗಬೇಕು. ನೂರು ರುಪಾಯಿ ಬ್ಯಾಗಿಗೆ 200 ರುಪಾಯಿ ಕೊಟ್ಟರೆ ಅವರಿಗೆ ನೂರು ರುಪಾಯಿ ನಷ್ಟವಾದ ಬಗ್ಗೆ ಹೇಳಬೇಕು.
* ಹಣವನ್ನು ಉಳಿತಾಯ ಖಾತೆಗಳಲ್ಲಿ ಹೂಡಿಕೆ ಮಾಡಲು ಪ್ರೋತ್ಸಾಹಿಸಿ.
* ಮನೆಯಲ್ಲೊಂದು ಹಣ ಹಾಕುವ ಡಬ್ಬಿ ಇರಲಿ. ಚಿಲ್ಲರೆಯನ್ನೆಲ್ಲ ಅದಕ್ಕೆ ಹಾಕಲು ಹೇಳಿ. ದಿನಕ್ಕೆ ಒಂದು ರುಪಾಯಿ ಹಾಕಿದ್ರೂ ವರ್ಷಕ್ಕೆ 350 ರುಪಾಯಿ ದಾಟುತ್ತದೆ.
ಮಕ್ಕಳು ಹಣ ಉಳಿಸಲು ಕಲಿತರೆ ಅವರ ಭವಿಷ್ಯದಲ್ಲಿ ಕಷ್ಟಗಳು ಕಡಿಮೆಯಾಗುತ್ತವೆ. ಹಣದ ವಿಷಯದಲ್ಲಿ ಮಕ್ಕಳೊಂದಿಗೆ ಕಟ್ಟುನಿಟ್ಟಾಗಿರಿ. ಕೇಳಿದನ್ನೆಲ್ಲ ಕೊಡಬೇಡಿ.
More From GoodReturns

LPG Gas Helpline Number: ದೇಶದಲ್ಲಿ ಎಲ್ಪಿಜಿ ಸಿಲಿಂಡರ್ ಕೊರತೆ; ತುರ್ತು ಅಗತ್ಯಕ್ಕೆ ಇಲ್ಲಿದೆ ಸಹಾಯವಾಣಿ

Gold Rate Bengaluru: ಚಿನ್ನದ ಬೆಲೆಯಲ್ಲಿ ಜಿಗಿತ.. ಇಂದು 24K, 22K, 18K ಬೆಲೆ ಎಷ್ಟು? ಇಲ್ಲಿದೆ ಸಂಪೂರ್ಣ ವಿವರ

Karnataka Weather: ಬಿಸಿಲಿನ ತಾಪಮಾನ ಇನ್ನಷ್ಟು ಹೆಚ್ಚಳ…ಕರ್ನಾಟಕದಲ್ಲಿ ಸದ್ಯಕ್ಕೆ ತಪ್ಪದು ಒಣಹವೆಯ ಕಾಟ!

Bengaluru Metro: ಗ್ರೀನ್ ಲೈನ್ ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ! ಮತ್ತೊಂದು ರೈಲಿನ ಆಗಮನ

ಮತ್ತೆ ಭಾರತ-ಪಾಕ್ ನಡುವೆ ಯುದ್ಧದ ಛಾಯೆ..ಭುಗಿಲೆದ್ದ 'ಸಿಂಧೂ ನದಿ' ವಿವಾದ, ಬಿಲಾವಲ್ ಭುಟ್ಟೋ ಕಿಡಿ

Bengaluru Metro: ಬೆಂಗಳೂರು ಮೆಟ್ರೋ 3ನೇ ಹಂತ ಮತ್ತೆ ವಿಳಂಬ, ಯಾವ ವರ್ಷಕ್ಕೆ ಈ ಸೇವೆ ಸಿಗಲಿದೆ ತಿಳಿಯಿರಿ

Bengaluru Traffic: ಗೊರಗುಂಟೆಪಾಳ್ಯ ಟ್ರಾಫಿಕ್ ಮುಕ್ತಿಗೆ ಸುರಂಗ ರಸ್ತೆ ಯೋಜನೆ? ಸರ್ಕಾರದ ಮಹತ್ವದ ಹೆಜ್ಜೆ

Gold Rate Today: ಮಧ್ಯಪ್ರಾಚ್ಯದಲ್ಲಿ ಸಂಘರ್ಷ; ಚಿನ್ನದ ಬೆಲೆ ಸ್ಥಿರ! ಎಷ್ಟಿದೆ ದರ?

Bengaluru to Pune: ಈ ಯೋಜನೆಯಿಂದ ಬೆಂಗಳೂರು-ಪುಣೆ ಪ್ರಯಾಣ 7 ಗಂಟೆ ಮಾತ್ರ...ಹೊಸ ಹೆದ್ದಾರಿ ಯೋಜನೆ ವಿವರ!

Karnataka Budget: ಏರಿಕೆಯಾಗುತ್ತಿರುವ ಸಾಲ, ಹೆಚ್ಚುತ್ತಿರುವ ವೆಚ್ಚ...ಬಜೆಟ್ನಲ್ಲಿ ಸಮತೋಲನ ಸಾಧಿಸುವುದು ಸಾಧ್ಯವೇ?

Sanju Samson: ಟಿ20 ವಿಶ್ವಕಪ್ ಫೈನಲ್ ಹೀರೋ ಸಂಜು ಸ್ಯಾಮ್ಸನ್ ಅವರ ಸಂಪೂರ್ಣ ಆಸ್ತಿ ವಿವರ ತಿಳಿಯಿರಿ



Click it and Unblock the Notifications