
ನ್ಯೂ ಜೀವನ್ ನಿಧಿ ಪ್ರಮುಖ ಅಂಶಗಳು
* ಮೊದಲ 5 ವರ್ಷಗಳ ವರೆಗೆ ಪ್ರತಿ ಸಾವಿರ ರು.ಗೆ ಹೆಚ್ಚುವರಿ 50 ರು. ಖಚಿತ ಗ್ಯಾರಂಟಿ.
* 6ನೇ ವರ್ಷದಿಂದ ಮಾಡುವ ಹೂಡಿಕೆಗೆ ಬೋನಸ್ ನೀಡಲಾಗುವುದು.
* 20ರಿಂದ 60 ವರ್ಷದವರು ಈ ಪಾಲಿಸಿಯನ್ನು ತೆಗೆದುಕೊಳ್ಳಬಹುದು.
* ಪಾಲಿಸಿ ಅವಧಿ 5 ವರ್ಷದಿಂದ 35 ವರ್ಷದವರೆಗೆ.
* ಆಕ್ಸಿಡೆಂಟ್ ಬೆನೆಫಿಟ್ ರೈಡರ್ ಕೂಡ ಲಭ್ಯವಿದೆ.
ಲಾಭ
ಮೊದಲ 5 ವರ್ಷದೊಳಗೆ ಸಾವು ಸಂಭವಿಸಿದಾಗ, ಪಾಲಿಸಿ ಚಾಲ್ತಿಯಲ್ಲಿದ್ದರೆ, ನಾಮನಿರ್ದೇಶನವಾದವರಿಗೆ ಖಚಿತವಾಗಿ ನೀಡಲಾಗುವ ಮೂಲ ಮೊತ್ತದೊಂದಿಗೆ, ಹೆಚ್ಚುವರಿ ಹಣವನ್ನು ಒಟ್ಟಾರೆಯಾಗಿ ಅಥವಾ ಭಾಗಶಃವಾಗಿ ಅಥವಾ ವಾರ್ಷಿಕವಾಗಿ ಚಾಲ್ತಿಯಲ್ಲಿರುವ ದರದಂತೆ ನೀಡಲಾಗುವುದು.
5 ವರ್ಷದ ನಂತರ ಸಾವು ಸಂಭವಿಸಿದಾಗ, ಪಾಲಿಸಿ ಚಾಲ್ತಿಯಲ್ಲಿದ್ದರೆ, ನಾಮನಿರ್ದೇಶನವಾದವರಿಗೆ ಖಚಿತವಾಗಿ ನೀಡಲಾಗುವ ಮೂಲ ಮೊತ್ತದೊಂದಿಗೆ, ಹೆಚ್ಚುವರಿ ಹಣ ಮತ್ತು ಸರಳ ರಿವರ್ಶನರಿ ಬೋನಸ್ ಮತ್ತು ಅಂತಿಮ ಬೋನಸ್ ಜೊತೆಗೆ ಹಣವನ್ನು ಒಟ್ಟಾರೆಯಾಗಿ ಅಥವಾ ಭಾಗಶಃವಾಗಿ ಅಥವಾ ವಾರ್ಷಿಕವಾಗಿ ಚಾಲ್ತಿಯಲ್ಲಿರುವ ದರದಂತೆ ನೀಡಲಾಗುವುದು.
ಪಾಲಿಸಿ ಅವಧಿ ಮುಗಿಸಿದಾಗ, ಪಾಲಿಸಿ ಚಾಲ್ತಿಯಲ್ಲಿದ್ದರೆ, ಖಚಿತವಾಗಿ ನೀಡಲಾಗುವ ಮೂಲ ಮೊತ್ತದೊಂದಿಗೆ, ಹೆಚ್ಚುವರಿ ಹಣ ಮತ್ತು ಸರಳ ರಿವರ್ಶನರಿ ಬೋನಸ್ ಮತ್ತು ಅಂತಿಮ ಬೋನಸ್ ಜೊತೆಗೆ ಒಟ್ಟಾರೆ ಮೊತ್ತವನ್ನು ಪಡೆಯಲು ಪಾಲಿಸಿದಾರರು ಅರ್ಹರಿರುತ್ತಾರೆ. ಆ ಮೊತ್ತವನ್ನು ಹೊಸ ಸಿಂಗಲ್ ಪ್ರೀಮಿಯಮ್ ಡೆಫರ್ಡ್ ಪೆನ್ಸನ್ ಪಾಲಿಸಿ ಪಡೆಯಲು ಬಳಸಬಹುದು ಅಥವಾ ವಾರ್ಷಿಕ ಆದಾಯ ಬರುವಂತೆ ಪರಿವರ್ತಿಸಬಹುದು.
ಎಲ್ಐಸ್ ಫ್ಲೆಕ್ಸಿ ಪ್ಲಸ್ ಪ್ರಮುಖ ಅಂಶಗಳು
ಒಂದು ವೇಳೆ ಸಾವು ಸಂಭವಿಸಿದರೆ, ಒಟ್ಟಾರೆ ಹಣವನ್ನು, ಪಾಲಿಸಿ ಅವಧಿ ಮುಗಿಸಿದಾಗ ನೀಡಲಾಗುವ ಲಾಭಾಂಶದೊಂದಿಗೆ ನೀಡಲಾಗುವುದು. ಪಾಲಿಸಿದಾರರಿಗೆ ನೀಡಲಾಗುವ ವಿಮಾ ರಕ್ಷಣೆಯ ಆಧಾರದ ಮೇಲೆ ನೀಡುವ ಪ್ರೀಮಿಯಮ್ ಹಣವನ್ನು ಪಾಲಿಸಿದಾರನೇ ನಿಗದಿಪಡಿಸಬಹುದು. ನಿಗದಿತವಾಗಿ ಆದಾಯ ಪಡೆಯಲು ಕೂಡ ಈ ಪಾಲಿಸಿಯನ್ನು ಬಳಸಬಹುದು.
ಹೆಸರೇ ಹೇಳುವಂತೆ ಇದು ಅತ್ಯಂತ ಫ್ಲೆಕ್ಸಿಬಲ್ ಆದ ಪಾಲಿಸಿ. ಪಾಲಿಸಿ ಅವಧಿ, ಮೊತ್ತ ಪಾವತಿ ಮಾಡುವ ರೀತಿಯನ್ನು ಪಾಲಿಸಿದಾರನೇ ನಿರ್ಧರಿಸಬಹುದು. ಅವಶ್ಯಕತೆಯಿದ್ದಾಗ ಭಾಗಶಃ ಹಣ ಹಿಂತೆಗೆದುಕೊಳ್ಳುವ ಮತ್ತು ಹಣ ಪಾವತಿ ಮಾಡುವ ವಿಧಾನವನ್ನು ಬದಲಿಸುವ ಅವಕಾಶವಿರುತ್ತದೆ. ಒಟ್ಟಾರೆ, ನಮ್ಮ ರಕ್ಷಣೆಗಾಗಿ, ಭದ್ರತೆಗಾಗಿ ಮತ್ತು ಬೆಳವಣಿಗಾಗಿ ಹಣ ಹೂಡಿಕೆ ಮಾಡಲು ಅತ್ಯುತ್ತಮ ಪಾಲಿಸಿ.
ಹೆಚ್ಚಿನ ಮಾಹಿತಿ ಬೇಕಿದ್ದರೆ ಸಂಪರ್ಕಿಸಿ
Corporate Communications department
LIC of India, Central Office, Mumbai.
Telephone: 022 22028307,
Email id: [email protected]


Click it and Unblock the Notifications