
1: ಬಿಳಿ ಕಾಗದ ಮೇಲೆ ವರ್ಗಾವಣೆ ಕೋರಿ ಬ್ಯಾಂಕಿಗೆ ಪತ್ರ ಬರೆಯಿರಿ
* ಅಂಚೆ ಕಚೇರಿಯಿಂದ ವರ್ಗಾಯಿಸುತ್ತಿದ್ದರೆ SB 10 ಅರ್ಜಿಯನ್ನು ಪಡೆದು ತುಂಬಿಸಿ ಸಲ್ಲಿಸಿ
* ನಿಮ್ಮ ಖಾತೆಯನ್ನು ಎಲ್ಲಿಗೆ ವರ್ಗಾಯಿಸಬೇಕು ಎಂಬುದನ್ನು ಸ್ಪಷ್ಟವಾಗಿ ನಮೂದಿಸಿ
* ನಿಮ್ಮ ಖಾತೆ ಪಾಸ್ ಬುಕ್ ಸಲ್ಲಿಸಿ
* ಗುರುತಿನ ಚೀಟಿ (PAN ಕಾರ್ಡ್, ಮತದಾನದ ಗುರುತಿನ ಚೀಟಿ..ಇತ್ಯಾದಿ) ದಾಖಲೆಯ ನಕಲು ಪ್ರತಿ ಸಲ್ಲಿಸಿ
2: ಒಮ್ಮೆ ಅರ್ಜಿ ಸಲ್ಲಿಸಿದ ಮೇಲೆ ನಿಮ್ಮ ಖಾತೆ ಸ್ಥಗಿಸಿ ವಿವರಗಳನ್ನು ಬ್ಯಾಂಕ್ ಗೆ ಸಲ್ಲಿಸಲಾಗುತ್ತದೆ. ಉಳಿದ ಮೊತ್ತವನ್ನು ಡಿಮ್ಯಾಂಡ್ ಡ್ರಾಫ್ಟ್ ಅಥವಾ ಚೆಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ.
* ನೀವು ವರ್ಗಾವಣೆ ಬಯಸಿದ ಬ್ಯಾಂಕಿನಿಂದ ನಿಮಗೆ ಕರೆ ಬರುತ್ತದೆ
* ಹೊಸ ಪಾಸ್ ಬುಕ್ ವಿತರಿಸಲಾಗುತ್ತದೆ.
* ಈ ವರ್ಗಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲು 3-4 ವಾರಗಳ ಕಾಲ ಬೇಕಾಗುತ್ತದೆ.
* ವರ್ಗಾವಣೆ ಪ್ರಕ್ರಿಯೆಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ.
ವರ್ಗಾವಣೆ ಮಾಡುವ ವೇಳೆ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು:
* ನಿಮ್ಮ ಪಾಸ್ ಬುಕ್ ಅಪ್ಡೇಡ್ ಆಗಿರಲಿ. ಇತ್ತೀಚಿನ ವ್ಯವಹಾರದ ದಾಖಲೆ ಅಚ್ಚಾಗಿರಲಿ
* ಅರ್ಜಿ ಸಲ್ಲಿಸುವ ಮೊದಲು ನಿಮ್ಮ ಪಾಸ್ ಬುಕ್ ನಕಲು ಪ್ರತಿ ತೆಗೆದಿಟ್ಟುಕೊಂಡರೆ ಒಳ್ಳೆಯದು.
* ಹೊಸ ಪಾಸ್ ಬುಕ್ ನಲ್ಲಿ ಹಳೆ ದಾಖಲೆಗಳು ನಮೂದಾಗಿರುವುದಿಲ್ಲ.
* ವರ್ಗಾವಣೆಗೊಂಡ ಖಾತೆಯನ್ನು ಮುಂದುವರೆದ ಖಾತೆಯಂತೆ ಪರಿಗಣಿಸಲಾಗುವುದು.
* ವರ್ಗಾವಣೆ ವೇಳೆಯಲ್ಲಿ ನಿಮ್ಮ Nominee ಗಳನ್ನು ಕೂಡಾ ಬದಲಾಯಿಸಲು ಅವಕಾಶವಿರುತ್ತದೆ.
PPF: ಅಂಚೆ ಕಚೇರಿ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್‌ಬಿಐ), ಐಸಿಐಸಿಐ ಸೇರಿದಂತೆ ಕೆಲವು ಬ್ಯಾಂಕ್ ಗಳಲ್ಲಿ ಪಬ್ಲಿಕ್ ಪ್ರಾವಿಡೆಂಚ್ ಫಂಡ್ ಖಾತೆಯನ್ನು ತೆರೆಯಬಹುದು.
ಸಂಬಳದಾರರಿಗೆ ಮತ್ತು ಸ್ವಉದ್ಯೋಗಸ್ಥರಿಗೆ ಆದಾಯ ತೆರಿಗೆ ಉಳಿಸಲು ಇದು ಹೇಳಿ ಮಾಡಿಸಿದ ಖಾತೆ. ಆದಾಯ ತೆರಿಗೆ ಕಾಯ್ದೆಯ 80ಸಿ ಸೆಕ್ಷನ್ ಅಡಿ ಈ ಖಾತೆಯಲ್ಲಿ 1 ಲಕ್ಷ ರು.ವರೆಗೆ ಜಮಾ ಮಾಡಿದ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ದೊರೆಯುತ್ತದೆ. ಹೆಚ್ಚಿನ ವಿವರಗಳಿಗೆ ಕ್ಲಿಕ್ ಮಾಡಿ[ಪಿಪಿಎಫ್ ಖಾತೆ ತೆರೆಯುವುದು ಹೇಗೆ?]


Click it and Unblock the Notifications