80 ಜಿ : ದಾನ ಧರ್ಮ ಮಾಡಿ ತೆರಿಗೆ ಉಳಿಸಿ

ಆದಾಯ ತೆರಿಗೆ ಉಳಿತಾಯಕ್ಕೆ ಹಲವಾರು ಮಾರ್ಗಗಳಿದ್ದು, ಅದರಲ್ಲಿ 80G ಅಡಿಯಲಿ ಬರುವ ದಾನ ಧರ್ಮ ಉಡುಗೊರೆ ಬಗ್ಗೆ ಸ್ವಲ್ಪ ಗೊಂದಲವಿದೆ. ಆಯ್ದ ಸರ್ಕಾರೇತರ ಸಂಸ್ಥೆಗಳಿಗೆ ವೈಯಕ್ತಿಕವಾಗಿ ಅಥವಾ ಕಾರ್ಪೊರೇಟ್ ಸಂಸ್ಥೆಗಳು ನೀಡುವ ಡೊನೇಷನ್ ಮೊತ್ತವನ್ನು ಆದಾಯ ತೆರಿಗೆ ಲೆಕ್ಕಾಚಾರದಿಂದ ಹೊರಗಿಡಲಾಗುತ್ತದೆ. 80G ಅಡಿಯಲ್ಲಿ ಬರುವ ಎನ್ ಜಿಒಗಳಿಗೆ ದಾನ ಮಾಡುವ ಮೂಲಕ ಒಂದಿಷ್ಟು ತೆರಿಗೆ ಹಣವನ್ನು ಉಳಿಸಬಹುದು.

ಸರ್ಕಾರೇತರ ಸಂಸ್ಥೆ(NGOs) ಅಲ್ಲದೆ ಸರ್ಕಾರಿ ಪ್ರಾಯೋಜಿತ ಯೋಜನೆಗಳು, ಕೇಂದ್ರಗಳಿಗೆ ದಾನ ನೀಡುವ ಮೂಲಕ ಕೂಡಾ ತೆರಿಗೆ ವಿನಾಯತಿ ಪಡೆಯಬಹುದು.

ಎಷ್ಟು ಆದಾಯ ಇರುವವರು ರಿಟರ್ನ್ ಸಲ್ಲಿಸಬೇಕು, ಎಲ್ಲಿ ಸಲ್ಲಿಸಬೇಕು, ಹೇಗೆ ಸಲ್ಲಿಸಬೇಕು, ಸರಕಾರದಿಂದ ನಮಗೇನಾದರೂ ಹಣ ಮರುಪಾವತಿ ಆಗಬೇಕಾ ಎಂಬಿತ್ಯಾದಿ ಪ್ರಶ್ನೆಗಳು ಅನೇಕ ನೌಕರರಲ್ಲಿ ಎದ್ದಿರುತ್ತವೆ.

ಗ್ರಾಹಕರಿಗೆ ತೆರಿಗೆ ಲೆಕ್ಕಾಚಾರ ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆ ಕ್ಯಾಲ್ಕುಲೆಟರ್ ಕೂಡಾ ನೀಡಿದೆ. ಇದರ ಮೂಲಕ ತೆರಿಗೆ ಲೆಕ್ಕಾಚಾರ, ತೆರಿಗೆಗೆ ಒಳಪಡುವ ಆದಾಯ ಲೆಕ್ಕ ಹಾಕಬಹುದು. ಆದಾಯ ತೆರಿಗೆ ಪಾವತಿ ಸುಲಭಗೊಳಿಸಲು ಹಾಗೂ ಸಾರ್ವಜನಿಕರಿಗೆ ತೆರಿಗೆ ಕಟ್ಟಲು ಅನುಕೂಲಕರ ಸೇವೆಗಳನ್ನು ಆದಾಯ ತೆರಿಗೆ ಇಲಾಖೆ ಪರಿಚಯಿಸಿದೆ. ‘Register for Home Visit' ಹಾಗೂ ‘Online Tax Help' ಎಂಬ ಈ ಸೇವೆಗಳು ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಆರಂಭಿಸಿದೆ.

ಈಗ 80Gಗೆ ಯಾರು ಅರ್ಹರು:
ಯಾವುದೇ ತೆರಿಗೆ ಭರಿಸುತ್ತಿರುವ ವ್ಯಕ್ತಿ ಅಥವಾ ಸಂಸ್ಥೆ ನಿಯಮದ ಪ್ರಕಾರ ಡೊನೇಷನ್ ನೀಡುವ ಮೂಲಕ ವಿನಾಯತಿ ಪಡೆಯಬಹುದು. ಮುಂದಿನ ಅಂಶಗಳನ್ನು ಚಿತ್ರ ಸರಣಿಯಲ್ಲಿ ನೋಡಿ

ನೋಂದಾಯಿತ ಸಂಸ್ಥೆ, NGOs ಮಾತ್ರ ಅರ್ಹ

ನೋಂದಾಯಿತ ಸಂಸ್ಥೆ, NGOs ಮಾತ್ರ ಅರ್ಹ

ಎಲ್ಲಾ ದತ್ತಿ, ಸಂಸ್ಥೆ, NGOs ಗಳು ತೆರಿಗೆ ವಿನಾಯತಿಗೆ ಒಳಪಡುವುದಿಲ್ಲ. ತೆರಿಗೆ ಕಾಯ್ದೆ ಅನ್ವಯ ಸರ್ಕಾರೇತರ ಸಂಸ್ಥೆಗಳು 80G ನಿಯಮಕ್ಕೆ ಒಳಪಟ್ಟಿರಬೇಕು. ಸಂಸ್ಥೆಗೆ ಹಣ ನೀಡುವುದು ವೈಯಕ್ತಿಕ ವಿಷಯವಾದರೂ ತೆರಿಗೆ ವಿನಾಯತಿ ಪಡೆಯಬೇಕಾದರೆ ಒಮ್ಮೆ 80G ಮಾನ್ಯತೆ ಪಡೆದಿದೆಯೇ ಎಂದು ವಿಚಾರಿಸುವುದು ಒಳಿತು. ಶಾಲೆ, ವಿದ್ಯಾಭ್ಯಾಸಕ್ಕಾಗಿ ಟೈಮ್ಸ್ ಸಂಸ್ಥೆ ಕೈಜೋಡಿಸಿರುವ ಸಚಿನ್ ತೆಂಡೂಲ್ಕರ್ ಹಾಗೂ ಐಶ್ವರ್ಯಾ ರೈ

ನಿಮ್ಮ ರಸೀತಿಯಲ್ಲಿ ಈ ವಿವರಗಳಿರಲಿ

ನಿಮ್ಮ ರಸೀತಿಯಲ್ಲಿ ಈ ವಿವರಗಳಿರಲಿ

* ಸರ್ಕಾರೇತರ ಸಂಸ್ಥೆ ಹೆಸರು ಹಾಗೂ ಪೂರ್ಣ ವಿಳಾಸ
* ದಾನಿಗಳ ಸಂಪೂರ್ಣ ಹೆಸರು(PAN ನಲ್ಲಿರುವಂತೆ)
* ದಾನದ ಮೊತ್ತ, 80 G ಪಡೆದಿದ್ದಕ್ಕೆ ತೆರಿಗೆ ಇಲಾಖೆ ನೀಡಿದ ನೋಂದಣಿ ಸಂಖ್ಯೆ
ಸೂಚನೆ: ಸಂಸ್ಥೆ 80ಜಿ ಪ್ರಮಾಣಪತ್ರದ ಮುಕ್ತಾಯ ಅವಧಿ ಬಗ್ಗೆ ಕೇಳಿ ತಿಳಿಯಿರಿ. ರಸೀತಿ ಜೊತೆ ಸಂಸ್ಥೆ 80 ಜಿ ನಕಲು ಪ್ರತಿ ಪಡೆಯಿರಿ

ಇತರೆ ನಿಯಮಗಳು

ಇತರೆ ನಿಯಮಗಳು

* ನಗದು ಮೊತ್ತ, ಚೆಕ್ ಮೂಲಕ ಹಣ ಪಾವತಿ ಮಾತ್ರ ಅರ್ಹವಾಗಿದೆ. ಆಹಾರ, ಔಷಧಿ ಇತರೆ ರೂಪದಲ್ಲಿ ನೀಡಿದ ದಾನ ಪರಿಗಣಿಸಲಾಗುವುದಿಲ್ಲ
* ವಿದೇಶಿ ಚಾರಿಟಬೇಲ್ ಟ್ರಸ್ಟ್ ಹಾಗೂ ರಾಜಕೀಯ ಪಕ್ಷಗಳ ಪಾರ್ಟಿ ಫಂಡ್ ಗೆ ಕೊಟ್ಟ ಹಣ ಪರಿಗಣನೆಗೆ ಬರುವುದಿಲ್ಲ
* ಭಾರತೀಯ ಒಲಿಂಪಿಕ್ಸ್ ಅಸೋಸಿಯೇಷನ್ಸ್ ನ u/s 10(23) ನಿಯಮದ ಪ್ರಕಾರ ಕ್ರೀಡೆ ಹಾಗೂ ಕ್ರೀಡಾ ಮೂಲ ಸೌಕರ್ಯಕ್ಕೆ ನೀಡುವ ದಾನ ಕೂಡಾ ಅರ್ಹವಾಗಿರುತ್ತದೆ.
* ಎನ್ನಾರೈ ಗಳು ಮಾಡುವ ದಾನ ಕೂಡಾ ನಿಯಮ ಪ್ರಕಾರ ಇದ್ದರೆ ಪರಿಗಣನೆಗೆ ಬರುತ್ತದೆ.

ಶೇ 100 ರಷ್ಟು ತೆರಿಗೆ ವಿನಾಯತಿ

ಶೇ 100 ರಷ್ಟು ತೆರಿಗೆ ವಿನಾಯತಿ

1. Prime Minister's National Relief Fund
2. National Defence Fund
3. Prime Minister's Armenia Earthquake Relief Fund
4. The Africa (Public Contribution - India) Fund
5. The National Foundation for Communal Harmony
6. Approved university or educational institution of national eminence
7. The Chief Minister's Earthquake Relief Fund, Maharashtra
8. Donations made to Zila Saksharta Samitis.
9. The National Blood Transfusion Council or a State Blood Transfusion Council.
10. The Army Central Welfare Fund or the Indian Naval Benevolent Fund or The Air Force Central Welfare Fund.

ಶೇ 50 ರಷ್ಟು ವಿನಾಯತಿ

ಶೇ 50 ರಷ್ಟು ವಿನಾಯತಿ

1. Jawaharlal Nehru Memorial Fund
2. Prime Minister's Drought Relief Fund
3. National Children's Fund
4. Indira Gandhi Memorial Trust
5. The Rajiv Gandhi Foundation.

80G ಹೇಗೆ ನಿರ್ವಹಣೆ ಉದಾಹರಣೆ

80G ಹೇಗೆ ನಿರ್ವಹಣೆ ಉದಾಹರಣೆ

ಉದಾಹರಣೆಗೆ ವಿಜಯ್ ಒಬ್ಬ ಸಂಬಳದಾರನಾಗಿದ್ದು ಆತನ ಆದಾಯ ರು 300000/ ಇದೆ. ಆತ ಮಾನ್ಯತೆ ಪಡೆದ ಎನ್ ಜಿಒಗೆ 50000/ ರು ದಾನ ನೀಡುತ್ತಾನೆ. ಲೆಕ್ಕಾಚಾರ ಹೇಗಾಗುತ್ತದೆ ನೋಡಿ

Save tax on donations through 80G deductions

Vijay
Total Income for the year 2012-13 Rs. 3,00,000.00/-
Tax payable before Donation Rs. 14,000.00/-
Qualifying amount for deduction (50% of donation made) Rs. 50,000.00/-
Amount of deduction u/s 80G ( Qualifying Amount subject to a maximum limit 10% of the Gross Total Income) Rs. 30,000.00/-
Taxable Income after deduction Rs. 2,70,000.00/-
Tax payable after Donation Rs. 11,000.00/-
Tax Benefit U/S 80G (ii)-(v) Rs. 3,000.00/-

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+