For Quick Alerts
ALLOW NOTIFICATIONS  
For Daily Alerts

ಆದಾಯ ತೆರಿಗೆ ಲೆಕ್ಕಾಚಾರ ಹಾಕೋದು ಹೇಗೆ?

By Mahesh
|

ಆದಾಯ ತೆರಿಗೆ ಲೆಕ್ಕಾಚಾರ ಹಾಕೋದು ಹೇಗೆ?
ನಿಮ್ಮ ಆದಾಯ ಗಳಿಕೆ ಮೂಲಗಳ ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಆದಾಯ ತೆರಿಗೆ ಲೆಕ್ಕಾಚಾರ ಅತಿ ಸುಲಭ.

ಗ್ರಾಹಕರಿಗೆ ತೆರಿಗೆ ಲೆಕ್ಕಾಚಾರ ಸುಲಭಗೊಳಿಸಲು ಆದಾಯ ತೆರಿಗೆ ಇಲಾಖೆ ಕ್ಯಾಲ್ಕುಲೆಟರ್ ಕೂಡಾ ನೀಡಿದೆ. ಇದರ ಮೂಲಕ ತೆರಿಗೆ ಲೆಕ್ಕಾಚಾರ, ತೆರಿಗೆಗೆ ಒಳಪಡುವ ಆದಾಯ ಲೆಕ್ಕ ಹಾಕಬಹುದು.

ಈ ಲೆಕ್ಕಾಚಾರ ಮಾಡಲು ಯಾವುದೇ ಹೊಸ ಸಾಫ್ಟ್ ವೇರ್ ಡೌನ್ ಲೋಡ್ ಮಾಡಬೇಕಿಲ್ಲ ಅಥವಾ ಎಂಎಸ್ ಎಕ್ಸೆಲ್ ಬಳಸುವ ಅಗತ್ಯವೂ ಇಲ್ಲ.

ಹಾಗಿದ್ದರೆ, ತೆರಿಗೆ ಲೆಕ್ಕಾಚಾರ ಹೇಗೆ? ಹಂತ ಹಂತವಾಗಿ ತೆರಿಗೆ ಕಂಡು ಹಿಡಿಯುವುದು ಹೀಗೆ:

1. ಆದಾಯ ತೆರಿಗೆ ಇಲಾಖೆ ವೆಬ್ ತಾಣಕ್ಕೆ ಭೇಟಿ ನೀಡಿ

2. assement ವರ್ಷ ಆಯ್ಕೆ ಮಾಡಿಕೊಳ್ಳಿ

3. ಯಾರಿಗೆ ಅನ್ವಯವಾಗುತ್ತದೋ Assesseee ಆಯ್ಕೆ ಮಾಡಿ

4. ವೈಯಕ್ತಿಕವಾದರೆ individual ಆಯ್ಕೆ ಮಾಡಿಕೊಳ್ಳಿ

ವೈಯಕ್ತಿಕ ಪಾವತಿದಾರರ ಆದಾಯವಾದರೆ

* ಮಹಿಳೆ

* ಹಿರಿಯ ನಾಗರಿಕ (60 ವರ್ಷ ಮೇಲ್ಪಟ್ಟವರು ಹಾಗೂ 80 ವರ್ಷ ಕೆಳಗಿನವರು)

* ಅತಿ ಹಿರಿಯ ನಾಗರಿಕ (80 ವರ್ಷ ಮೇಲ್ಪಟ್ಟವರು)

5. ನಿಮ್ಮ ನಿವ್ವಳ ಆದಾಯ ದಾಖಲಿಸಿ

6. ತೆರಿಗೆ ಎಷ್ಟಾಗಿದೆ ಎಂದು ತಿಳಿಯಲು ಕ್ಲಿಕ್ ಮಾಡಿ

ಶಿಕ್ಷಣ ತೆರಿಗೆ, ಉನ್ನತ ಶಿಕ್ಷಣ ಸೆಸ್ ನಿಂದ ಈ ಮೊತ್ತ ಕೂಡಾ ಸೇರಿರುತ್ತದೆ. ಕೆಲವೇ ಸೆಕೆಂಡು ಗಳಲ್ಲಿ ನಿಮ್ಮ ಆದಾಯ ತೆರಿಗೆ ಮೊತ್ತವನ್ನು ಸುಲಭವಾಗಿ ಲೆಕ್ಕ ಹಾಕಬಹುದಾಗಿದೆ.

* ಆದಾಯ ತೆರಿಗೆ ಪಾವತಿ ವರ್ಷ 2002-03 ರಿಂದ 2013-14 ರ ತನಕ ಲಭ್ಯವಿದೆ.
* ಪಾವತಿದಾರರಲ್ಲಿ ವೈಯಕ್ತಿಕ ಖಾತೆ ಜೊತೆಗೆ, ಸ್ಥಳೀಯ ಕಂಪನಿ, ವಿದೇಶಿ ಕಂಪನಿ ಹಾಗೂ ಸಹಕಾರ ಸಂಘಗಳ ಖಾತೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು.

ಗುಡ್ ರಿಟರ್ನ್ಸ್ .ಇನ್

English summary

How to compute your tax using an IT calculator? | ಆದಾಯ ತೆರಿಗೆ ಲೆಕ್ಕಾಚಾರ ಹಾಕೋದು ಹೇಗೆ?

Yes, now it's easy to compute your tax liability if you are aware of your total net income. The Income Tax department has provided a calculator which helps you to calculate your tax liability based on your taxable income. Here, you need not download any software or excel for calculation.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X