ಬೆಂಗಳೂರು, ಏ.10: ಕಾಗದ ರಹಿತ ಕಚೇರಿಯಾಗುವತ್ತ ಬಿಬಿಎಂಪಿ ಪ್ರಗತಿ ಸಾಧಿಸುತ್ತಿದೆ. ಆನ್ ಲೈನ್ ಮೂಲಕ ಆಸ್ತಿ ತೆರಿಗೆ ಪಾವತಿಸುವ ವಿಧಾನ ಜನಪ್ರಿಯತೆ ಗಳಿಸುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿದ್ದಯ್ಯ ಹೇಳಿದ್ದಾರೆ.
2013-14ರ ಅವಧಿಯಲ್ಲಿ ನಾಗರೀಕರು ಆಸ್ತಿ ತೆರಿಗೆಯನ್ನು ಆನ್ ಲೈನ್ ಮೂಲಕ ಪಾವತಿಸಬಹುದು. ಬಿಬಿಎಂಪಿ ತಾಣಕ್ಕೆ ಭೇಟಿ ಕ್ರೆಡಿಟ್/ ಡೆಬಿಟ್ ಕಾರ್ಡ್ ಬಳಸಿ ಸುಲಭವಾಗಿ ತೆರಿಗೆ ಪಾವತಿಸಬಹುದು ಎಂದು ಆಯುಕ್ತ ಎಚ್ ಸಿದ್ದಯ್ಯ ಹೇಳಿದ್ದಾರೆ.
ಆನ್ ಲೈನ್ ವ್ಯವಸ್ಥೆ ಸಾರ್ವಜನಿಕರಿಗೆ ಲಭ್ಯವಿದ್ದು. ಈ ಸೇವೆ ಉಚಿತವಾಗಿದ್ದು, ತೆರಿಗೆ ಪಾವತಿಸಲು ಯಾವುದೇ ಮೊತ್ತ ಪಾವತಿಸಬೇಕಿಲ್ಲ. ಐಡಿಬಿಐ ಬ್ಯಾಂಕ್ ನ ಹಣಪಾವತಿ ಗೇಟ್ ವೇ ಮೂಲಕ ಸುರಕ್ಷಿತವಾಗಿ ಹಣ ಸಂದಾಯ ಮಾಡಬಹುದು.
ವಾಣಿಜ್ಯ ಕಟ್ಟಡಗಳು ಬಾಕಿ ಉಳಿಸಿಕೊಂಡಿರುವ ತೆರಿಗೆ ವಸೂಲಿ ಮಾಡಿದರೆ ಸಾಕಷ್ಟು ಆದಾಯ ಕ್ರೋಢೀಕರಣ ಆಗುತ್ತದೆ. ಇದರಿಂದ ಅಭಿವೃದ್ಧಿ ಕೆಲಸಗಳಿಗೂ ಹಣ ಸಿಗುತ್ತದೆ. ಯಾವುದೇ ಕಾರಣಕ್ಕೂ ಆಸ್ತಿ ತೆರಿಗೆ ಹೆಚ್ಚಳ ಮಾಡುವುದು ಬೇಡ. ಆದಾಯ ಹೆಚ್ಚಳಕ್ಕೆ ಪರ್ಯಾಯ ಮಾರ್ಗಗಳು ಹೆಚ್ಚಾಗಿ ಇರುವಾಗ ತೆರಿಗೆ ಹೆಚ್ಚಳದ ಕಡೆಗೆ ಒಲವು ತೋರುವುದು ಸರಿಯಲ್ಲ ಎಂದು ವಿಪಕ್ಷಗಳು ಗಲಾಟೆ ನಡೆಸಿದ್ದರಿಂದ ನಾಗರೀಕರು ಹೆಚ್ಚಿನ ಆಸ್ತಿ ತೆರಿಗ್ ಹೊರೆಯಿಂದ ಬಚಾವಾಗಿದ್ದಾರೆ.
ಹೆಚ್ಚಿನ ವಿವರಗಳು ಹಂತ ಹಂತವಾಗಿ ಆನ್ ಲೈನ್ ಪಾವತಿ ಮಾಹಿತಿಗಾಗಿ ಮುಂದೆ ಓದಿರಿ...step by step ಪೇಮೆಂಟ್ ಮಾಡುವ ವಿಧಾನದ ಬಗ್ಗೆ ನಿರೀಕ್ಷಿಸಿ
ಆನ್ ಲೈನ್ ತಾಣಕ್ಕೆ ಭೇಟಿ ಕೊಡಿ
ಬಿಬಿಎಂಪಿ ಅಧಿಕೃತ ಆನ್ ಲೈನ್ ವೆಬ್ ತಾಣಕ್ಕೆ http://bbmp.gov.in/ ಭೇಟಿ ಕೊಡಿ.ಈ ಸಾಲಿನ ಆಸ್ತಿ ತೆರಿಗೆ ಪಾವತಿಗಾಗಿ ಕ್ಲಿಕ್ ಮಾಡಿ ಎಂದು ಮುಖಪುಟದ ಮೊದಲ ಲಿಂಕ್ ಇದೆ. ಅದನ್ನು ಕ್ಲಿಕ್ ಮಾಡಿ
ಬಿಬಿಎಂಪಿಗೆ ಸಲಹೆ: ಜಾಹೀರಾತು ಆದಾಯದಲ್ಲಿ ಸಾಕಷ್ಟು ಸೋರಿಕೆ ಆಗುತ್ತಿದೆ. ಹಲವಾರು ಪುಢಾರಿಗಳು ತೆರಿಗೆ ಕಟ್ಟದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಇದನ್ನೆಲ್ಲ ಬಿಗಿ ಮಾಡಿದರೆ ಸಾಕಷ್ಟು ವರಮಾನ ಬರುತ್ತದೆ
ಬಿಬಿಎಂಪಿ ಆಸ್ತಿ ತೆರಿಗೆ ಪಾವತಿ ವ್ಯವಸ್ಥೆ
ಕಳೆದ ಸಾಲಿನ ನಿಮ್ಮ ಆಸ್ತಿ ವಿವರಗಳನ್ನು ನೀವು ತುಂಬಿದ್ದರೆ ಈ ಸಾಲಿನ ಆಸ್ತಿ ತೆರಿಗೆ ಪಾವತಿ ಇನ್ನಷ್ಟು ಸುಲಭವಾಗುತ್ತದೆ. ಆನ್ ಲೈನ್ ಮೂಲಕ ಪಾವತಿಗೆ ನಿರ್ವಹಣಾ ವೆಚ್ಚ ಇರುವುದಿಲ್ಲ. ಡೆಬಿಟ್ /ಕ್ರೆಡಿಟ್ ಕಾರ್ಡ್ ಬಳಸಿ ಐಡಿಬಿಐ ಬ್ಯಾಂಕ್, ಕಾರ್ಪೊರೇಷನ್, ಐಸಿಐಸಿಐ(ನೆಟ್ ಬ್ಯಾಕಿಂಗ್) ಮೂಲಕ ಪಾವತಿ ಮಾಡಬಹುದು.
ತೆರಿಗೆ ಕಟ್ಟುವ ಮುನ್ನ
* ಬೆಸ್ಕಾಂ, ಜಲಮಂಡಳಿ ಸಂಪರ್ಕದ ಆರ್ ಆರ್ ನಂಬರ್ ಇಟ್ಟುಕೊಳ್ಳಿ, ಹೆಚ್ಚು ವಿದ್ಯುತ್ ಮೀಟರ್ ಹೊಂದಿದ್ದರೆ ಎಲ್ಲಾ ಸಂಖ್ಯೆಗಳನ್ನು ನಮೂದಿಸಬೇಕಾಗುತ್ತದೆ.
* Form IV ( ಕಟ್ಟಡ ಮಾಲೀಕರಿಗೆ) ನಿರ್ಮಿತ ಕಟ್ಟಡದಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೆ ಈ ಅರ್ಜಿಯನ್ನು ತುಂಬಿಸಿ. ನಿಮ್ಮ ತೆರಿಗೆ ವರ್ಷವನ್ನು ಆಯ್ಕೆ ಮಾಡಿಕೊಳ್ಳಿ
* ಅರ್ಜಿ ತುಂಬುವ ಮೊದಲು ನಿಯಮಗಳನ್ನು ಓದಿಕೊಳ್ಳಿ. ನಂತರ ಅರ್ಜಿ ತುಂಬಿದ ಮೇಲೆ ನಿಮ್ಮ ಆಸ್ತಿ ತೆರಿಗೆ ಲೆಕ್ಕಚಾರ ವಿವರಗಳು ಲಭ್ಯವಾಗುತ್ತದೆ. ನಂತರ ಪೇಮೆಂಟ್ ಮಾಡಬಹುದು.
ರಿಯಾಯಿತಿ ಇದೆಯಾ?
* 30 ಏಪ್ರಿಲ್ 2013ರೊಳಗೆ ಪೂರ್ಣ ವರ್ಷದ ಆಸ್ತಿ ತೆರಿಗೆ ಪಾವತಿಸಿದರೆ ಶೇ 5 ರಷ್ಟು ರಿಯಾಯಿತಿ ಲಭ್ಯವಿರುತ್ತದೆ
* ಆಸ್ತಿ ತೆರಿಗೆಯನ್ನು 2 ಕಂತುಗಳಲ್ಲಿ ಕಟ್ಟಬಹುದು. ಮೊದಲ ಆರ್ಧ ವಾರ್ಷಿಕ ಕಂತು ಬಡ್ಡಿ ರಹಿತವಾಗಿ 30 ಮೇ 2013ರೊಳಗೆ ಹಾಗೂ ಎರಡನೇ ಕಂತನ್ನು ಬಡ್ಡಿ ರಹಿತವಾಗಿ 30 ನವೆಂಬರ್ 2013ರೊಳಗೆ ಕಟ್ಟ ಬಹುದು
* ಘನ ತ್ಯಾಜ್ಯ ವಸ್ತು ಉಪಕರ(solid waste cess) ತೆರಿಗೆಗೆ ಅನುಗುಣವಾಗಿ ಲೆಕ್ಕಾಚಾರ ಹಾಕಿ ಕಟ್ಟಬೇಕು
ಸಹಾಯವಾಣಿ ಲಭ್ಯ
ಪಾಲಿಕೆಯ ಎಲ್ಲ ಸಹಾಯ ಕೇಂದ್ರ, ಬೆಂಗಳೂರು ಒನ್ ಕೇಂದ್ರಗಳಲ್ಲಿ ಎಲ್ಲಾ ಕೆಲಸದ ದಿನಗಳಲ್ಲಿ ಬೆಳಗ್ಗೆ 9 ರಿಂದ ಮಧ್ಯಾಹ್ನ 3 ಹಾಗೂ ಸಂಜೆ 7 ಗಂಟೆ ತನಕ ತೆರೆದಿರುತ್ತದೆ. ಸಹಾಯವಾಣಿ : 65683804/5, 23365007/8
Email: [email protected]
ಆನ್ ಲೈನ್ ನಲ್ಲಿ ಬ್ರೋಸರ್ ಮೋಝಿಲ್ಲಾ ಫೈರ್ ಫಾಕ್ಸ್ ಅಥವಾ ಗೂಗಲ್ ಕ್ರೋಮ್ ಬಳಸಿ ತೆರಿಗೆ ಪಾವತಿಸುವುದು ಸುರಕ್ಷಿತವಿಧಾನವಾಗಿದೆ.


Click it and Unblock the Notifications