ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು

ಯಾವುದೇ ಒಂದು ಕುಟುಂಬದ ಯಜಮಾನ ತನ್ನ ಮಕ್ಕಳಿಗೆ ಅಥವಾ ತನಗೆ ಬೇಕಾದವರಿಗೆ ಹಣಕಾಸು ಸಮಸ್ಯೆ ಉಂಟಾಗದಂತಯೆ ಸದಾ ನೋಡಿಕೊಳ್ಳುತ್ತಾನೆ. ಒಂದ ವೇಳೆ ಆತ ಆಕಸ್ಮಿಕ ಸಾವಿಗೀಡಾದರೆ ಆಸ್ತಿ ಹಂಚಿಕೆ ವೇಳೆ ಗೊಂದಲಗಳು ಏರ್ಪಡುವುದನ್ನು ಕಾಣುತ್ತೇವೆ. ಆಭರಣ, ರಿಯಲ್ ಎಸ್ಟೇಟ್ ಮತ್ತು ಫಿಕ್ಸೆಡ್ ಡಿಪಾಸಿಟ್ ಹಂಚಿಕೆಯಲ್ಲಿ ಗೊಂದಲಗಳು ಎದುರಾಗುವ ಸಂಭವವಿರುತ್ತದೆ.

ಆರೋಗ್ಯಕರ ಹಂಚಿಕೆ ಮಾಡುವುದು ನಿಧನದ ನಂತರ ಕಷ್ಟಸಾಧ್ಯವೇ? ಆದರೆ ವಿಲ್ ತಯಾರಿಕೆ ಅಷ್ಟೆ ಸುಲಭ. ಭಾರತೀಯ ಸಮಾಜದಲ್ಲಿ ಇದು ಬಹಳ ಮುಖ್ಯ ಸಂಗತಿಯಾಗಿದ್ದು ಕೆಲ ಅಂಶಗಳನ್ನು ಮನಗಾಣಬೇಕಾಗುತ್ತದೆ.[ಹಣ ಹೂಡುವ ಮುನ್ನ ಪಿಪಿಎಫ್ ಅವಗುಣ ತಿಳಿದುಕೊಳ್ಳಿ]

ವಿಲ್ ಮಾಡಿಸಿದರೆ ಸಾಲದು, ನೋಂದಣಿಯೂ ಆಗಿರಬೇಕು

ವಿಲ್ ಬರೆಯದೇ ಮನೆಯ ಯಜಮಾನ ಸಾವನ್ನಪ್ಪಿದರೆ ಕುಟುಂಬದಲ್ಲಿ ಗಲಾಟೆಗಳು ನಡೆಯುವುದು ಸಾಮಾನ್ಯ. ಆಸ್ತಿ ಹಂಚಿಕೆ ವಿವಾದಕ್ಕೆ ಕೊನೆಯೇ ಇಲ್ಲವಂಥಾಗುವುದನ್ನು ನೋಡಿದ್ದೇವೆ.

ಹಣಕ್ಕೆ ಯಾರು ಹಕ್ಕುದಾರರಾಗುತ್ತಾರೆ?
ಹಿಂದುಗಳಲ್ಲಾದರೆ ರೋಗ ಪೀಡಿತ ತಾಯಿ, ಹೆಂಡತಿ, ಮಕ್ಕಳು ಮತ್ತು ಹತ್ತಿರದ ರಕ್ತ ಸಂಬಂಧಿಕರು ಯಾರಾದರೂ ಸಾವನ್ನಪ್ಪಿದರೆ ಅವರ ಮಕ್ಕಳು ಸಹ ಪಾಲುದಾರರಾಗುತ್ತಾರೆ. ಇವರನ್ನು ಮೊದಲನೆ ಕ್ಲಾಸ್ ನವರು ಎಂದು ಕರೆಯಬಹುದು. ಅಂದರೆ ಆಸ್ತಿಯೊಂದಿಗೆ ನೇರವಾಗಿ ಸಂಬಂಧ ಹೊಂದಿರುತ್ತಾರೆ.

ಹಿಂದು ಕಾನೂನಿನ ಪ್ರಕಾರ ಎರಡನೇ ವರ್ಗದ ಸಂಬಂಧಿಕರು ಅಂದರೆ ಸಹೋದರರು, ಮೊಮ್ಮಕ್ಕಳು, ಸಹೋದರರ ಮಕ್ಕಳು ಸಹ ಆಸ್ತಿಗೆ ಹಕ್ಕುದಾರನಾಗಬಲ್ಲದು. ಆದರೆ ಇಲ್ಲಿ ಕೆಲವು ನಿಬಂಧನೆಗಳಿರುತ್ತವೆ.[ಅಕೌಂಟ್ ಕ್ಲೋಸ್ ಮಾಡುವ ಮುನ್ನ 6 ಅಂಶ ತಲೆಯಲ್ಲಿರಲಿ]

ಮೃತನ ಸಂಬಂಧಿಕರು ಯಾರು ಇಲ್ಲದಿದ್ದರೆ?
ಒಂದು ವೇಳೆ ಮೊದಲನೇ ವರ್ಗದ ನೇರ ಸಂಬಂಧಿಕರು ಅಥವಾ ಎರಡನೇ ವರ್ಗದ ಸಹೋದರ ಸಂಬಂಧಿಕರು ಯಾರು ಇಲ್ಲವಾದರೆ ಏನು? ಎಂಬ ಪ್ರಶ್ನೆ ಮೂಡಬಹುದು. ಇಂಥ ಸಂದರ್ಭದಲ್ಲಿ ಆಸ್ತಿ ಮೃತನ ವಂಶಸ್ಥರಿಗೆ ಸಲ್ಲುತ್ತದೆ. ಒಂದು ವೇಳೆ ವಂಶಸ್ಥರ ಪತ್ತೆಯೂ ಇರದಿದ್ದರೇ ಸಾವಿಗೀಡಾದ ವ್ಯಕ್ತಿಯ ಜಾತಿಯವರಿಗೆ ಕೊಡಲ್ಪಡುತ್ತದೆ. ಮೇಲಿನ ರೀತಿಯ ಯಾವ ಸಂಬಂಧಿಕರು ಇಲ್ಲವಾದಲ್ಲಿ ಆಸ್ತಿ ಸರ್ಕಾರದ ಪಾಲಾಗುತ್ತದೆ.

ವಿಲ್ ರೆಜಿಸ್ಟರ್ ಮಾಡುವುದರ ಲಾಭವೇನು?
ವಿಲ್ ನೋಂದಣಿ ಮಾಡಿಸುವುದು ಬಹಳ ಮುಖ್ಯ, ಇದು ಕುಟುಂಬದಲ್ಲಿ ಯಾವಿದೇ ಗಲಾಟೆ ಟಥವಾ ಗೊಂದಲಕ್ಕೆ ಆಸ್ಪದ ನೀಡುವುದಿಲ್ಲ. ನೋಂದಣಿ ಮಾಡಿಸಿದ್ದಲ್ಲಿ ಆಸ್ತಿ ಹಂಚಿಕೆ ವೇಳೆ ಮೂರನೇ ವ್ಯಕ್ತಿ ಪ್ರವೇಶ ಮಾಡಲು ಸಾಧ್ಯವಿಲ್ಲ. ಇಲ್ಲಿ ಯಾವುದೇ ರೀತಿಯ ಮೋಸ ಅಥವಾ ಹಣ ದುರ್ಬಳಕೆಗೆ ಕಡಿವಾಣ ಬೀಳುತ್ತದೆ.

ಸಾವು ಅಥವಾ ಸಾವಿನ ನಂತರದ ವಿಲ್ ಇದ್ದರೆ ಆಸ್ತಿ ಹಂಚಿಕೆಗೆ ಯಾವ ಅಡೆತಡೆ ಇರುವುದಿಲ್ಲ. ಕಾನೂನು ತೊಡಕುಗಳು ಎದುರಾಗಲ್ಲ. ಸಂಭಾವ್ಯ ವಿವಾದಗಳಿಗೂ ಎಡೆಮಾಡಿಕೊಡುವಿದಿಲ್ಲ.

ಕೊನೆ ಮಾತು: ಕೇವಲ ವಿಲ್ ಬರೆಯುವುದು ಮಾತ್ರವಲ್ಲ ಅದನ್ನು ನೋಂದಣಿ ಮಾಡಿಸುವುದು ಮುಖ್ಯ. ಸ್ಪಷ್ಟ ನಿರ್ದೇಶನಗಳಿರುವ ವಿಲ್ ಇದ್ದರೆ ಮಕ್ಕಳು ಅಥವಾ ಕುಟುಂಬಸ್ಥರಲ್ಲಿ ಆಸ್ತಿ ಕುರಿತು ಯಾವುದೇ ಗೊಂದಲಗಳು ಏರ್ಪಡುವುದಿಲ್ಲ. (ಗುಡ್ ರಿಟರ್ನ್ಸ್. ಇನ್)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+