ಮುಂಬರಲಿರುವ ಬಜೆಟ್ ಮೂಲ ಸೌಕರ್ಯ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಿದೆ ಎಂದೇ ಭಾವಿಸಲಾಗಿದೆ. ಆರ್ಥಿಕ ಬೆಳವಣಿಗೆ ಮತ್ತು ಷೇರು ಮಾರುಕಟ್ಟೆಯ ಮೇಲೂ ಇದು ಪರಿಣಾಮ ಉಂಟುಮಾಡಲಿದೆ.
ಹಾಗಾದರೆ ಈ ಸಂದರ್ಭದಲ್ಲಿ ಯಾವ ಬಗೆಯ ಷೇರುಗಳನ್ನು ಕೋಡರೆ ಲಾಭ ಗಳಿಸಬಹುದು. ಪವರ್ ಸೆಕ್ಟರ್ ಗೆ ಕಾಲಿಡಬಹುದೆ? ಬಜೆಟ್ ಉಂಟುಮಾಡುವ ಪರಿಣಾಮಗಳೇನು? ಎಂಬುದರ ಮೇಲೆ ಒಂದು ನೋಟ ಹರಿಸುವುದು ಅಗತ್ಯವಾಗುತ್ತದೆ.[ಭಾರತದಲ್ಲಿ ಚಿನ್ನಾಭರಣ ಖರೀದಿಗೆ 8 ಸೂತ್ರ]

ಇಲ್ಲಿ ಖರೀದಿ ಮಾಡಬಹುದಾದ ಅಥವಾ ವ್ಯವಹಾರ ನಡೆಸಬಹುದಾದ ಕೆಲವೊಂದು ಷೇರುಗಳನ್ನು ನೀಡಲಾಗಿದೆ. ಇವು ಮೂಲಸೌಕರ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ಕಂಪನಿಗಳು ಎಂಬುದನ್ನು ಗಮನಿಸಬೇಕು.
ಎಲ್ ಅಂಡ್ ಟಿ
ಮೂಲ ಸೌಕರ್ಯ ದೃಷ್ಟಿಕೋನದಲ್ಲಿ ಹೇಳುವುದಾದರೆ ಎಲ್ ಆಂಡ್ ಟಿ ಷೇರುಗಳು ಉತ್ತಮ ಗಳಿಕೆಯನ್ನೇ ಸಾಧಿಸಲಿವೆ. ಸದ್ಯದ ಮಾರುಕಟ್ಟೆಯಲ್ಲಿ ಈ ಷೇರುಳು 1550 ರ ಲೆವಲ್ ಆಸುಪಾಸಿನಲ್ಲಿ ದೃಢವಾಗಿ ನಿಂತಿವೆ. ಕೊಳ್ಳಲು ಅತಿಯೋಗ್ಯವಾದ ಷೇರುಗಳು ಇದಾಗಿದ್ದು ಕೇಂದ್ರ ಬಜೆಟ್ ನಂತರ ನಿಮಗೆ ಸಾಕಷ್ಟು ರಿಟರ್ನ್ಸ್ ನಿರೀಕ್ಷೆ ಇಟ್ಟುಕೊಳ್ಳಬಹುದು.[ಷೇರಲ್ಲಿ ಹಣ ಹೂಡುವ ಮುನ್ನ ಈ 5 ಸಂಗತಿ ತಲೆಯಲ್ಲಿರಲಿ]
ಎಚ್ ಸಿಸಿ
ಬಂದ್ರಾ ಸಮುದ್ರ ತೀರದ ಕಾಮಗಾರಿ, ದೆಹಲಿ ಮೆಟ್ರೋ, ಲಾವಸ್ಸಾ ಮತ್ತಿತರ ಕಡೆ ಪಾಲುದಾರಿಕೆ ಹೊಂದಿರುವ ಎಚ್ ಸಿಸಿ ಸಹ ಖರೀದಿಗೆ ಉತ್ತಮವಾದ ಷೇರು. ಅಲ್ಲದೇ ಕಳೆದ ತ್ರೈಮಾಸಿಕ ಅವಧಿಯಲ್ಲಿ ಇದು ಉತ್ತಮ ಲಾಭವನ್ನು ಗಳಿಸಿದೆ. ಈ ಬಾರಿ 27.1 ಕೋಟಿ ನಿವ್ವಳ ಲಾಭ ಗಳಿಸಿದೆ. 35 ರೂ. ಮುಖಬೆಲೆಯ ಷೇರುಗಳು ಖರೀದಿಗೆ ಹೇಳಿ ಮಾಡಿಸಿದಂತಿವೆ.
ಎನ್ ಸಿಸಿ
ರಸ್ತೆ ನಿರ್ಮಾಣ, ನೀರು ಸರಬರಾಜು, ಸಾರ್ವಜನಿಕ ಪರಿಸರ ಕಾಪಾಡುವಿಕೆ, ನೀರಾವರಿ ಮುಂತಾದ ಕಾರ್ಯಗಳಲ್ಲಿ ತೊಡಗಿಕೊಂಡಿರುವ ಎನ್ ಸಿಸಿ ಷೇರುಗಳನ್ನು ಖರೀದಿಸಬಹುದು.
ಕಳೆದ ವರ್ಷ ನಷ್ಟದಲ್ಲಿದ್ದ ಕಂಪನಿ ಈ ಬಾರಿ ನಿವ್ವಳ 42 ಕೋಟಿ ರೂ. ಲಾಭ ಗಳಿಸಿದ್ದೇನೆ ಎಂದು ವರದಿ ನೀಡಿದೆ. ವಿಶ್ಲೇಷಕರು ಈ ಕಂಪನಿಯ ಷೇರುಗಳನ್ನು ಯಾವ ಹಿಂಜರಿಕೆ ಇಲ್ಲದೇ ಕೊಳ್ಳಬಹುದು ಎಂದು ತಿಳಿಸಿದ್ದಾರೆ.
ಕೊನೆ ಮಾತು: ಯಾವ ಷೇರುಗಳನ್ನು ಖರೀದಿಸಬೇಕು ಎಂಬ ಗೊಂದಲ ಮನಸ್ಸಿನಲ್ಲಿ ಇರಬಾರದು. ಮೊದಲು ಷೇರು ಖರೀದಿ ಸೆಕ್ಟರ್ ಆಯ್ಕೆ ಮಾಡಿಕೊಂಡು ನಂತರ ಅದರಲ್ಲಿ ಯಾವುದು ಉತ್ತಮ ಎಂದು ಹುಡುಕುವುದು ಒಳಿತು.[ಗುಡ್ ರಿಟರ್ನ್ಸ್.ಇನ್]


Click it and Unblock the Notifications