ಸಂಗಾತಿಗೆ ಯಾವ ಉಡುಗೊರೆ ನೀಡುವುದು ಉತ್ತಮ?

ಪ್ರೇಮಿಗಳ ದಿನ ಎದುರಾಗಿದ್ದು ಸಂಗಾತಿಯನ್ನು ಸದಾ ಸಂತಸದಿಂದ ಇಡಲು ಯಾವುದಾದರೊಂದು ಅಮೂಲ್ಯ ಗಿಫ್ಟ್ ನೀಡಲೇಬೇಕಾಗುತ್ತದೆ. ಕೆಲವೊಮ್ಮೆ ನಾವು ನೀಡುವ ಉಡುಗೊರೆಗಳು ಉಪಯೋಗಕ್ಕೆ ಬರದಂತಾಗುವುದನ್ನು ಕಾಣಬಹುದು. ಇದು ಸಂಗಾತಿಯೊಂದಿಗೆ ಮನಸ್ತಾಪಕ್ಕೂ ಕಾರಣವಾಗಬಹುದು.

ಉತ್ತಮ ರಿಟರ್ನ್ಸ್ ನೀಡುವ ಹಣಕಾಸು ಯೋಜಜನೆಯನ್ನೇ ನಿಮ್ಮ ಸಂಗಾತಿಗೆ ಈ ಬಾರಿಯ ವ್ಯಾಲಂಟೈನ್ಸ್ ಡೇ ಕೊಡುಗೆಯಾಗಿ ನೀಡಿದರೆ ಹೇಗೇ? ಇದು ನಿಮ್ಮನ್ನು ಆರ್ಥಿಕವಾಗಿ ಸಬಲಗೊಳಿಸುವುದರೊಂದಿಗೆ ಬಾಂಧವ್ಯವನ್ನು ಮತ್ತಷ್ಟು ವೃದ್ಧಿ ಮಾಡುತ್ತದೆ.[ಯಾವ ಬ್ಯಾಂಕ್ ನಿಂದ ಕಿಸಾನ್ ವಿಕಾಸ್ ಪತ್ರ ಪಡೆಯಬಹುದು?]

ಕೆಲವೊಂದು ಹಣಕಾಸು ಕೊಡುಗೆ ನೀಡಲು ನಾವು ನೀಡುತ್ತಿರುವ ಸಲಹೆ ಇಲ್ಲಿದೆ.

ಫಿಕ್ಸೆಡ್ ಡಿಪಾಸಿಟ್ ಖಾತೆ ತೆರೆಯಿರಿ

ಫಿಕ್ಸೆಡ್ ಡಿಪಾಸಿಟ್ ಖಾತೆ ತೆರೆಯಿರಿ

ಸುರಕ್ಷಿತ ಮತ್ತು ಅಗತ್ಯ ಕಾಲಕ್ಕೆ ನೆರವಾಗುವಂಥ ಫಿಕ್ಸೆಡ್ ಡಿಪಾಸಿಟ್ ಖಾತೆಯನ್ನು ಸಂಗಾತಿ ಹೆಸರಿನಲ್ಲಿ ತೆರೆಯಿರಿ. ಇದು ತೆರಿಗೆ ನಿಮಗೆ ತೆರಿಗೆ ವಿನಾಯಿತಿಯನ್ನು ನೀಡುತ್ತದೆ.

ಪಿಪಿಎಫ್ ಖಾತೆ ಒಪನ್ ಮಾಡಿ

ಪಿಪಿಎಫ್ ಖಾತೆ ಒಪನ್ ಮಾಡಿ

ಈ ಖಾತೆಯೂ ಸಹ ನಿಮಗೆ ಹಣಕಾಸು ಭದ್ರತೆ ಒದಗಿಸಬಲ್ಲದು. ನಿವೃತ್ತಿ ಕಾಲಕ್ಕೆ ಈ ಹಣ ನೆರವಾಗುವುದರಲ್ಲಿ ಅನಮಾನವಿಲ್ಲ.

ಮ್ಯೂಚುವಲ್ ಫಂಡ್

ಮ್ಯೂಚುವಲ್ ಫಂಡ್

ನಿಮ್ಮ ಸಂಗಾತಿಯ ಹೆಸರಿನಲ್ಲಿ ಮ್ಯೂಚುವಲ್ ಫಂಡ್ ನಲ್ಲಿ ಹಣ ಹೂಡುವುದು ಉತ್ತಮ ಉಪಾಯ. ಮಾರುಕಟ್ಟೆಯ ಆಳ-ಅಗಲಗಳನ್ನು ಅರಿತು ಮುಂದುವರಿಯಬೇಕು.

ಚಿನ್ನದ ಮೇಲೆ ಹೂಡಿಕೆ

ಚಿನ್ನದ ಮೇಲೆ ಹೂಡಿಕೆ

ಭಾರತೀಯರಲ್ಲಿ ಚಿನ್ನದ ಬಗ್ಗೆ ಮೊದಲಿನಿಂದಲೂ ವ್ಯಾಮೋಹವಿದೆ. ಚಿನ್ನ ಖರೀದಿಯಲ್ಲೂ ಅನೇಕ ವಿಧಗಳಿವೆ. ನೀವು ಚಿನ್ನದ ನಾಣ್ಯಗಳು, ಆಭರಣ ಯಾವುದನ್ನೇ ಖರೀದಿ ಮಾಡಿದರೂ ಸಂಗಾತಿಯನ್ನು ಸಂತೋಷವಾಗಿಡುವುದು ಮುಖ್ಯ.

ಗಿಫ್ಟ್ ಕಾರ್ಡ್ ಗಳು

ಗಿಫ್ಟ್ ಕಾರ್ಡ್ ಗಳು

ಬಹುತೇಕ ಬ್ಯಾಂಕ್ ಗಳು ಈ ಸೌಲಭ್ಯವನ್ನು ವಿತರಿಸುತ್ತಿವೆ. ನೀವು ಕೇವಲ ಗಿಫ್ಟ್ ಕಾರ್ಡ್ ಮಾತ್ರ ಖರೀದಿ ಮಾಡಿ ವಸ್ತು ಖರೀದಿ ಆಯ್ಕೆಯನ್ನು ಆಕೆಗೆ ಬಿಡಿ!

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+