ಹಲವಾರು ಬ್ಯಾಂಕ್ ಗಳೂ ಆನ್ ಲೈನ್ ಟ್ರಾನ್ಸಾಕ್ಷನ್ ಗೋಸ್ಕರ ಅಪ್ಲಿಕೇಶನ್ ಗಳನ್ನು ಬಿಡುಗಡೆ ಮಾಡಿವೆ. ಬಿಲ್ ಪಾವತಿ, ಮೊಬೈಲ್ ರೀಚಾರ್ಜ್ ಎಲ್ಲವೂ ಕುಳಿತಲ್ಲೇ ಸಾಧ್ಯವಾಗುತ್ತಿದೆ.
ನೀವು ಯಾವ ಬ್ಯಾಂಕ್ ಗ್ರಾಹಕರಾಗಿರುತ್ತಿರೋ ಆ ಬ್ಯಾಂಕ್ ನ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಂಡು ಎಲ್ಲ ಕೆಲಸವನ್ನು ಸುಲಭವಾಗಿ ನಿರ್ವಹಿಸಬಹುದು. ಆದರೆ ನಿಮ್ಮ ಮೊಬೈಲ್ ಮತ್ತು ಇತರ ಮಾಹಿತಿಗಳ ಬಗ್ಗೆ ಸದಾ ಜಾಗರೂಕರಾಗಿರಬೇಕಾಗಿರುವುದು ಅಷ್ಟೇ ಮುಖ್ಯ.

ಸ್ಟೇಟ್ ಬ್ಯಾಂಕ್ FreedoM
ಇದು ಸ್ಟೇಟ್ ಬ್ಯಾಂಕ್ ಇಂಡಿಯಾದ ಅಪ್ಲಿಕೇಷನ್. ಇದನ್ನು ಡೌನ್ ಕೋಡ್ ಮಾಡಿಕೊಂಡು ರಜಿಸ್ಟರ್ ಮಾಡಿಕೊಂಡರೆ ಹಣದ ರವಾನೆ ಸಾಧ್ಯ. ಚೆಕ್ ಬುಕ್ ರಿಕ್ವೆಸ್ಟ್, ಬಿಲ್ ಪಾವತಿ ಮತ್ತಿತರ ಸಂಗತಿಗಳು ಅಂಗೈನಲ್ಲೇ ಲಭ್ಯವಾಗುತ್ತದೆ. ಈಗಾಗಲೇ ಇದನ್ನು 5 ಮಿಲಿಯನ್ ಗೂ ಅಧಿಕ ಜನರು ಡೌನ್ ಲೋಡ್ ಮಾಡಿಕೊಂಡು 3.9 ರೇಟಿಂಗ್ ನೀಡಿದ್ದಾರೆ.
ಎಚ್ ಡಿಎಫ್ ಸಿ ಬ್ಯಾಂಕ್
ಎಚ್ ಡಿಎಫ್ ಸಿ ಬ್ಯಾಂಕ್ ಅಪ್ಲಿಕೇಶನ್ ನಿಂದ 60 ಬಗೆಯ ವ್ಯವಹಾರಗಳನ್ನು ಯಾವ ಸ್ಥಳದಿಂದಾದರೂ ನಿರ್ವಹಿಸಲು ಸಾಧ್ಯ. ಮೈ ಮೆನು ಅವಕಾಶವನ್ನು ನೀಡಿದ ಮೊದಲ ಬ್ಯಾಂಕ್ ಎಚ್ ಡಿ ಎಫ್ ಸಿ. ನಿಮ್ಮ ಬಹುಮುಖ್ಯವಾದ ಹಿಂದಿನ 10 ರವಾನೆ ಮಾಹಿತಿಯನ್ನು ಫೆವರೇಟ್ ಹೆಸರಿನಲ್ಲಿ ಸೇವ್ ಮಾಡಿಟ್ಟುಕೊಂಡಿರಬಹುದು. ಹಿಂದಿ ಭಾಷೆಯಲ್ಲೂ ಅಪ್ಲಿಕೇಶನ್ ಬಳಸಲು ಸಾಧ್ಯವಿದೆ. 1 ಮಿಲಿಯನ್ ಗೂ ಅಧಿಕ ಜನರು ಡೌನ್ ಲೋಡ್ ಮಾಡಿಕೊಂಡಿದ್ದು, 4.3 ರೇಟಿಂಗ್ ನೀಡಿದ್ದಾರೆ.
ಐಸಿಐಸಿಐ ಬ್ಯಾಂಕ್
ಐಸಿಐಸಿಐ ಬ್ಯಾಂಕ್ ನ ಐ ಮೊಬೈಲ್ ಅಪ್ಲಿಕೇಶನ್ ಆಂಡ್ರ್ಯಾಡ್ ಪೋನ್ ಗಳಿಗೆ ಹೇಳಿ ಮಾಡಿಸಿದ್ದಾಗಿದೆ. ನಿಮ್ಮ ಬ್ಯಾಲೆನ್ಸ್ ಪರಿಶೀಲಿಸಲು ಇಲ್ಲವೇ ಕೊನೆಯ ಐದು ಟ್ರಾನ್ಸಾಕ್ಷನ್ ವೀಕ್ಷಿಸಲು ಸಾಧ್ಯವಿದೆ. ಉಳಿದಂತೆ ಹಣ ರವಾನೆ, ಬಿಲ್ ಪಾವತಿ, ಫಿಕ್ಸೆಡ್ ಡಿಪಾಸಿಟ್ ಖಾತೆ ತೆರೆಯಲು ಅವಕಾಶ ಕಲ್ಪಿಸಲಾಗಿದೆ. ನಿಮ್ಮ ಸಾಲ ಮತ್ತು ಕ್ರೆಡಿಡ್ ವ್ಯವಹಾರಗಳನ್ನು ಲಿಂಕ್ ಮಾಡಲು ಸಾಧ್ಯವಿದೆ. ಇದಕ್ಕೆ ಬಳಕೆದಾರರು 4.0 ರೇಟಿಂಗ್ ನೀಡಿದ್ದಾರೆ.
ಬ್ಯಾಂಕ್ ಆಫ್ ಬರೋಡಾ
ಬ್ಯಾಂಕ್ ಆಫ್ ಬರೋಡಾದ ಎಮ್-ಕನೆಕ್ಟ್ ಅಪ್ಲಿಕೇಶನ್ ದಿನದ 24 ಗಂಟೆಯೂ ಸೇವೆ ಒದಗಿಸಲಿದ್ದು ಅತ್ಯಂತ ಸುರಕ್ಷಿತ ವ್ಯವಸ್ಥೆ ಎಂದೇ ಗುರುತಿಸಿಕೊಂಡಿದೆ. ಖಾತೆಯ ಮಾಹಿತಿ, ಮೊಬೈಲ್ ರೀಚಾರ್ಜ್, ಸಿನಿಮಾ ಟಿಕೆಟ್ ಬುಕಿಂಗ್, ವಿಮಾನ ಟಿಕೆಟ್ ಬುಕಿಂಗ್ ಎಲ್ಲವೂ ಇಲ್ಲಿ ಸಾಧ್ಯವಿದೆ. ಬಳಕೆದಾರರು 3.7 ರೇಟಿಂಗ್ ನೀಡಿದ್ದಾರೆ.
ನ್ಯೂ ಏಕ್ಸಿಸ್ ಮೊಬೈಲ್
ಏಕ್ಸಿಸ್ ಬ್ಯಾಂಕ್ ನ ಈ ಅಪ್ಲಿಕೇಶನ್ ಸಹ ಜನರ ಪ್ರೀತಿಗೆ ಪಾತ್ರವಾಗಿದೆ. ಇದರ ಸಹಾಯದಿಂದ ಹಿಂದಿನ 10 ಟ್ರಾನ್ಸಾಕ್ಷನ್ ಪರಿಶೀಲನೆ ಮಾಡಬಹುದು. ಬಳಕೆದಾರರು ಇದಕ್ಕೆ 4.1 ರೇಟಿಂಗ್ ನೀಡಿದ್ದಾರೆ.(ಗುಡ್ ರಿಟರ್ನ್ಸ್,ಇನ್)


Click it and Unblock the Notifications