ಬಹಳಷ್ಟು ಜನರಿಗೆ ಸ್ಯಾಲರಿ ಖಾತೆ ಮತ್ತು ಉಳಿತಾಯ ಖಾತೆ ನಡುವಿನ ಸ್ಪಷ್ಟ ವ್ಯತ್ಯಾಸಗಳು ಗೊತ್ತಿರುವುದಿಲ್ಲ. ಹಾಗಾಗಿ, ಇವುಗಳ ಕಾರ್ಯನಿರ್ವಹಣೆಯಲ್ಲಿ ಯಾವ ಬದಲಾವಣೆ ಇರುತ್ತದೆ ಎಂಬುದನ್ನು ತಿಳಿದುಕೊಳ್ಳಬೇಕಾಗುತ್ತದೆ.
ಸ್ಯಾಲರಿ ಖಾತೆ
ಹೆಸರೇ ಸೂಚಿಸುವಂತೆ ಈ ಖಾತೆಯನ್ನು ನೀವು ಕೆಲಸ ಮಾಡುತ್ತಿರುವ ಕಂಪನಿ ನಿಮ್ಮ ಹೆಸರಿನಲ್ಲಿ ತೆರೆಯುತ್ತದೆ. ಇದನ್ನು ಜಿರೋ ಬ್ಯಾಲೆನ್ಸ್ ಅಕೌಂಟ್ ಎಂದು ಕರೆಯಬಹುದು. ಇಲ್ಲಿ ಇಂತಿಷ್ಟೇ ಹಣವನ್ನು ಅಥವಾ ಕನಿಷ್ಠ ಡಿಪಾಸಿಟ್ ಇಡಬೇಕೆಂಬ ನಿಯಮಗಳಿಲ್ಲ. ವೇತನ ನೀಡಿಕೆಗೆ ಸಂಬಂಧಿಸಿ ಈ ಖಾತೆ ಬಳಕೆಯಾಗುತ್ತದೆ.[ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯೋದು ಹೇಗೆ?]

ಕೆಲ ಬ್ಯಾಂಕ್ ಗಳು ವಿಭಿನ್ನ ಬಗೆಯ ಸ್ಯಾಲರಿ ಖಾತೆಯನ್ನು ಕೊಡಮಾಡುತ್ತವೆ. ನಿಮಗೆ ದೊರೆಯುವ ವೇತನದ ಆಧಾರಲ್ಲಿ ಈ ಅಕೌಂಟ್ ಗಳು ಕಾರ್ಯನಿರ್ವಹಿಸುತ್ತವೆ.
ಅತಿ ಹೆಚ್ಚು ಮೊತ್ತದ ಹಣ ಏಕಕಾಲದಲ್ಲಿ ಡ್ರಾ ಮಾಡಲು ಅವಕಾಶ ನೀಡುವ ಡೆಬಿಟ್ ಕಾರ್ಡ್, ಕೆಲ ಸಾಲ ಸೌಲಭ್ಯಗಳು, ಕ್ರೆಡಿಟ್ ಕಾರ್ಡ್ ಆಫರ್ ಗಳನ್ನು ಈ ಖಾತೆಯ ಆಧಾರದಲ್ಲಿ ಪಡೆಯಬಹುದು.
ಇಲ್ಲಿ ಮತ್ತೊಂದು ಸಂಗತಿ ಮುಖ್ಯವಾಗುತ್ತದೆ. ಒಂದು ವೇಳೆ ಮೂರು ತಿಂಗಳು ಕಾಲ ನಿರಂತರವಾಗಿ ಖಾತೆಗೆ ಸ್ಯಾಲರಿ ಹಣ ಕ್ರೆಡಿಟ್ ಆಗದಿದ್ದಲ್ಲಿ ಇದನ್ನು ಉಳಿತಾಯ ಖಾತೆ ಎಂದು ಪರಿಗಣಿಸಲಾಗುವುದು. ಅಲ್ಲದೇ ನಂತರ ನೀವು ಮಿನಿಮಮ್ ಬ್ಯಾಲೆನ್ಸ್ ಇಡಲೇಬೇಕಾಗುವುದು.[ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?]
ಉಳಿತಾಯ ಖಾತೆ
ಈ ಬಗೆಯ ಖಾತೆಯನ್ನು ಯಾರೂ ಬೇಕಾದರೂ ತೆರೆಯಬಹುದು. ಇದರ ಮುಖ್ಯ ಉದ್ದೇಶ ಉಳಿತಾಯಕ್ಕೆ ಆದ್ಯತೆ ನೀಡುವುದು. ಇಲ್ಲಿಯೂ ಸಹ ವಿವಿಧ ಬಗೆಯ ಖಾತೆಗಳನ್ನು ಬ್ಯಾಂಕ್ ನೀಡುತ್ತದೆ. ಮಿನಿಮಮ್ ಬ್ಯಾಲೆನ್ಸ್ ನಿರ್ವಹಣೆ ಮಾಡುವುದರಲ್ಲಿ ನೀವು ವಿಫಲರಾದರೆ ಬ್ಯಾಂಕ್ ದಂಡವನ್ನು ವಸೂಲಿ ಮಾಡಬಹುದು.
ನಿಮ್ಮ ಕಂಪನಿ ನೀವು ಉಳಿತಾಯ ಖಾತೆ ಹೊಂದಿರುವ ಬ್ಯಾಂಕ್ ನಲ್ಲೇ ಸ್ಯಾಲರಿ ಅಕೌಂಟ್ ತೆರೆಯಲು ಮುಂದಾದರೆ, ಇರುವ ಖಾತೆಯನ್ನೇ ಸ್ಯಾಲರಿ ಅಕೌಂಟ್ ಆಗಿ ಬದಲಾಯಿಸಬಹುದು.
ಸಂಕ್ಷಿಪ್ತ ಮಾಹಿತಿ
ಸ್ಯಾಲರಿ ಅಕೌಂಟ್
ಯಾರು ತೆರೆಯಬಹುದು ? - ಕಂಪನಿ
ಯಾವ ಉದ್ದೇಶ- ವೇತನ ಪಾವತಿ
ಮಿನಿಮಮ್ ಬ್ಯಾಲೆನ್ಸ್- ಇಲ್ಲ
ಬದಲಾವಣೆ- ನಿರಂತರ ಮೂರು ತಿಂಗಳು ಕಾಲ ಸ್ಯಾಲರಿ ಕ್ರೆಡಿಟ್ ಆಗದಿದ್ದರೆ ಇದು ಉಳಿತಾಯ ಖಾತೆಯಾಗಿ ಬದಲಾಗುವುದು.
ಬಡ್ಡಿ- ಇಲ್ಲ, ಯಾವ ಬಡ್ಡಿ ಕೊಡಲಾಗಲ್ಲ
ಉಳಿತಾಯ ಖಾತೆ
ಯಾರು ತೆರೆಯಬಹುದು ? - ಯಾರೂ ಬೇಕಾದರೂ
ಯಾವ ಉದ್ದೇಶ- ಹಣ ಉಳಿತಾಯ
ಮಿನಿಮಮ್ ಬ್ಯಾಲೆನ್ಸ್- ಬೇಕು
ಬದಲಾವಣೆ- ಬ್ಯಾಂಕ್ ಒಪ್ಪಿಗೆ ಇದ್ದರೆ ಸ್ಯಾಲರಿ ಖಾತೆಯಾಗಿ ಬದಲಾವಣೆ ಮಾಡಬಹುದು
ಬಡ್ಡಿ- ಶೇ, 4 ರಂದ 6 ಬಡ್ಡಿ ದರ ನೀಡಲಾಗುವುದು.
ಕೊನೆ ಮಾತು
ನೀವು ಕೆಲಸದ ಬದಲಾವಣೆ ಮಾಡಿದರೆ ಅಥವಾ ಮಾಡುವವರಿದ್ದರೆ ಇದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕೆಲಸ ಬದಲು ಮಾಡಿ ಮೊದಲಿನ ಖಾತೆ ಕ್ಲೋಸ್ ಮಾಡಲು ಮರೆತರೆ ದಂಡ ತೆರಬೇಕಾದ ಸಂಭವವೂ ಇರುತ್ತದೆ. ಕೆಲಸ ಬಿಟ್ಟ ತಕ್ಷಣ ಖಾತೆಯನ್ನು ಕ್ಲೋಸ್ ಮಾಡುವುದು ಒಳಿತು.(ಗುಡ್ ರಿಟರ್ನ್ಸ್. ಇನ್)


Click it and Unblock the Notifications