For Quick Alerts
ALLOW NOTIFICATIONS  
For Daily Alerts

ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?

|

ಬ್ಯಾಂಕ್ ನಲ್ಲಿ ಇಡುವ ಡಿಪಾಸಿಟ್ ಹಣದ ಮರುಪಾವತಿ ಕಾಲಾವಧಿಯಲ್ಲೂ ಬದಲಾವಣೆ ಇರುತ್ತದೆ. ನೀವು ಯಾವ ಬಗೆಯ ಹೂಡಿಕೆದಾರ ಎಂಬ ಆಧಾರದ ಮೇಲೆ ಕಾಲಾವಧಿ ನಿರ್ಧರಿತವಾಗುತ್ತದೆ.

ಹಿರಿಯ ನಾಗರೀಕರಿಗೆ ಕೇವಲ 15 ದಿನಗಳ ಕಾಲಕ್ಕೆ ಫಿಕ್ಸೆಡ್ ಡಿಪಾಸಿಟ್ ಇಡುವ ಸೌಲಭ್ಯವನ್ನು ಅನೇಕ ಬ್ಯಾಂಕ್ ಗಳು ಮಾಡಿಕೊಟ್ಟಿವೆ. ಅತಿ ಹೆಚ್ಚು ಎಂದರೆ 20 ವರ್ಷಗಳ ಕಾಲಕ್ಕೂ ಫಿಕ್ಸೆಡ್ ಡಿಪಾಸಿಟ್ ಇಡಬಹುದು.[ಆಪತ್ಕಾಲದಲ್ಲಿ ಪಡೆಯಬಹುದಾದ ಸಾಲಗಳು ಯಾವವು?]

ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?

ದೀರ್ಘ ಕಾಲಕ್ಕೆ ಫಿಕ್ಸೆಡ್ ಡಿಫಾಸಿಟ್ ಇಟ್ಟರೆ ಏನಾಗುತ್ತದೆ?
ನೀವು ಹಣವನ್ನು ದೀರ್ಘಕಾಲದ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಏನಾಗುತ್ತದೆ ಎಂಬುದನ್ನು ಉದಾಹರಣೆ ಸಮೇತ ನೋಡಿದರೆ ವಿವರವಾಗಿ ಅರ್ಥವಾಗುತ್ತದೆ.
ಮಾರ್ಚ್ 19, 2015 ರಂದು ಶೇ. 8.5 ಬಡ್ಡಿ ದರದಲ್ಲಿ 20 ವರ್ಷದ ಅವಧಿಗೆ ಒಂದಿಷ್ಟು ಹಣವನ್ನು ಇಟ್ಟಿರುತ್ತೀರಿ ಎಂದುಕೊಳ್ಳಿ. ಇದಾಗಿ ಎರಡು ವರ್ಷದ ನಂತರ ಬಡ್ಡಿ ಪ್ರಮಾಣದಲ್ಲಿ ಏರಿಕೆ ಕಂಡುಬರುತ್ತದೆ. ಶೇ. 9.5ಕ್ಕೆ ಬಡ್ಡಿಯನ್ನು ನಿಗದಿ ಮಾಡಲಾಗುತ್ತದೆ. ಪರಿಣಾಮ ನಿಮ್ಮ ಹಣದ ಮೇಲೇ ಶೇ. 1 ನಷ್ಟ ಮಾಡಿಕೊಳ್ಳಬೇಕಾಗುತ್ತದೆ.

ಒಂದು ವೇಳೆ ಬಡ್ಡಿ ಪ್ರಮಾಣ ಇಳಿಕೆಯಾದರೆ ಅಥವಾ ಕುಸಿತ ಕಂಡು ಶೇ. 6 ಕ್ಕೆ ತಲುಪಿದರೆ ನಿಮಗೆ ಸಿಗುತ್ತಿರುವ ಬಡ್ಡಿ ಪ್ರಮಾಣ ಹೆಚ್ಚಿನದೇ ಆಗಿರುತ್ತದೆ. ಆಧುನಿಕತೆಗೆ ಒಗ್ಗಿಕೊಂಡಿರುವ ಸಮಾಜದಲ್ಲಿ ದೀರ್ಘ ಕಾಲ ಅಂದರೆ 20 ವರ್ಷದ ಲೆಕ್ಕದಲ್ಲಿ ಹಣ ಡಿಪಾಸಿಟ್ ಮಾಡುವವರ ಸಂಖ್ಯೆ ತುಂಬಾ ವಿರಳವಾಗಿದೆ ಎಂದೇ ಹೇಳಬಹುದು.[ಗೃಹ ಸಾಲ ಒಳಗೊಳ್ಳುವ ಶುಲ್ಕಗಳು ಯಾವವು?]

ಮತ್ತೊಂದು ಸಂಗತಿಯನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕಾಗುತ್ತದೆ. ನಿಮ್ಮ ಡಿಪಾಸಿಟ್ ಮೊತ್ತದಲ್ಲಿ ಟಿಡಿಎಸ್ ಗಾಗಿ ಎಷ್ಟು ಹಣ ಕಟ್ ಮಾಡಿಕೊಳ್ಳಲಾಗುತ್ತಿ ಎಂಬುದನ್ನು ತಿಳಿದುಕೊಂಡಿರಬೇಕು. ನೀವು ಚಿಕ್ಕ ಮೊತ್ತದ ಹಣ ಹೂಡಿಕೆ ಮಾಡಲು ಬಯಸುವಿರಾಗಿದ್ದರೆ ಇದಕ್ಕಿಂತ ಪಿಪಿಎಫ್ ಉತ್ತಮ ಮಾರ್ಗ. ಅಲ್ಲಿ ನಿಮಗೆ ಯಾವ ತೆರಿಗೆ ತಾಪತ್ರಯ ಇರುವುದಿಲ್ಲ.

ಫಿಕ್ಸೆಡ್ ಡಿಪಾಸಿಟ್ ನಿಂದ ತೆರಿಗೆ ವಿನಾಯಿತಿ ಹೇಗೆ?

ನೀವು ದೀರ್ಘಕಾಲದ ಯೋಜನೆಗಳಲ್ಲಿ ಹಣ ಹೂಡಿಕೆ ಮಾಡುತ್ತೀರಿ ಎಂಥಾದರೆ ತೆರಿಗೆ ವಿನಾಯಿತಿ ತಂತ್ರಗಳ ಬಗೆಗೂ ತಿಳಿದುಕೊಂಡಿರಬೇಕಾಗುತ್ತದೆ.
ನೀವು 15G ಮತ್ತು 15H ಅರ್ಜುಗಳನ್ನು ತೆರಿಗೆ ವಿನಾಯಿತಿ ಸಂಬಂಧ ಸಲ್ಲಿಸಬೇಕಾಗುತ್ತದೆ. ಆದಾಯ ತೆರಿಗೆ ಮಿತಿಗಿಂತ ಹೆಚ್ಚಾಗಿದ್ದರೆ ಇದನ್ನು ಸಲ್ಲಿಸಬೇಕಾದದ್ದು ಅಗತ್ಯವಾಗಿರುತ್ತದೆ.

ಫಿಕ್ಸೆಡ್ ಡಿಪಾಸಿಟ್ ನ್ನು ಬೇರೆ ಬೇರೆ ಜನರ ಹೆಸರುಗಳಲ್ಲಿ ಇಡುವುದರಿಂದಲೂ ಕೊಂಚ ಪ್ರಮಾಣದ ತೆರಿಗೆಯಿಂದ ಮುಕ್ತಿ ಕಾಣಬಹುದು. ಉದಾಹರಣೆಗೆ ಹಣ ಹೂಡಿಕೆ ಮಾಡುವಾಗ ಅರ್ಧ ಮೊತ್ತವನ್ನು ಹೆಂಡತಿ ಹೆಸರಲ್ಲಿ, ಇನ್ನರ್ಧ ತನ್ನ ಹೆಸರಲ್ಲಿ ಹೂಡಿಕೆ ಮಾಡಬಹುದು. ಹೆಂಡತಿಯೂ ಆದಾಯದ ಮೂಲ ಹೊಂದಿದ್ದರೆ ನಿಗದಿತ ತೆರಿಗೆ ತುಂಬುವುದು ಒಳಿತು.

ನೆನಪಿರಲಿ ನಿಮ್ಮ ಬ್ಯಾಂಕ್ ಡಿಪಾಸಟ್ ಖಾತೆಗೆ ದೊರಕುವ ಬಡ್ಡಿ 10 ಸಾವಿರ ರೂ. ಗೂ ಅಧಿಕವಾಗಿದ್ದರೆ ಮಾತ್ರ ಟಿಡಿಎಸ್ ಗೆ ಸಂಬಂಧಿಸಿದ ಹಣವನ್ನು ಮುರಿದುಕೊಳ್ಳಲಾಗುತ್ತದೆ.

ಕೊನೆ ಮಾತು
ನೀವು ಅತಿ ಕಡಿಮೆ ಅಥವಾ ಸುದೀರ್ಘ ಅವಧಿಹಗೆ ಹಣ ಹೂಡಿಕೆ ಮಾಡುವುದು ದಡ್ಡತನವಾದೀತು. ಸಾಮಾನ್ಯ ಅವಧಿಗೆ ಹೂಡಿಕೆ ಮಾಡಿದರೆ ನಿರ್ದಿಷ್ಟ ಕಾಲದ ನಂತರ ಒಂದು ಮೊತ್ತ ಪಡೆಯಲು ಸಾಧ್ಯವಿದೆ.(ಗುಡ್ ರಿಟರ್ನ್ಸ್.ಇನ್)

English summary

What Is The Minimum And Maximum Period For A Bank Fixed Deposit?

The minimum tenure for a bank deposit varies depending on the type of investor. For retail individuals including senior citizens the minimum tenure for a bank fixed deposit is 15 days.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X