ಅನಗತ್ಯ ಎಟಿಎಂ ಶುಲ್ಕ ತಪ್ಪಿಸಲು ಹೀಗೆ ಮಾಡಿ

ಬ್ಯಾಂಕ್ ನಿಗದಿಪಡಿಸಿರುವ ಸಂಖ್ಯೆಗಳಿಗಿಂತ ಅಧಿಕ ಬಾರಿ ಎಟಿಎಂ ಮೂಲಕ ಹಣ ಡ್ರಾ ಮಾಡಿದರೆ ಶುಲ್ಕ ಮುರಿದುಕೊಳ್ಳುವ ಪದ್ಧತಿ ಜಾರಿ ಮಾಡಿ ಅನೇಕ ದಿನಗಳು ಕಳೆದಿವೆ. ಹಣದ ಟ್ರಾನ್ಸಾಕ್ಷನ್ ಕಡಿಮೆ ಮಾಡಿ, ಪಾರದರ್ಶಕ ಹಣದ ರವಾನೆಗೋಸ್ಕರ ಆರ್ ಬಿಐ ಇಂಥ ಕ್ರಮ ತೆಗೆದುಕೊಂಡಿದೆ. ನವೆಂಬರ್ 2014 ರಿಂದಲೇ ಇಂಥ ಕ್ರಮ ಜಾರಿಗಾಗಿದೆ.

ಕೆಲವೊಂದು ಬ್ಯಾಂಕ್ ಗಳು ತಮ್ಮದೇ ಎಟಿಎಂ ಶಾಖೆಯಲ್ಲಿಯೇ ಹಣ ಡ್ರಾ ಮಾಡಿದರೆ ಶುಲ್ಕ ವಿಧಿಸುತ್ತಿಲ್ಲ. ಮೂರು ಟ್ರಾನ್ಸಾಕ್ಷನ್ ಗೆ ಎಲ್ಲಿಯೂ ಹಣ ಮುರಿದುಕೊಳ್ಳಲಾಗುವುದಿಲ್ಲ. ಹಾಗಾದರೆ ಈ ಬಗೆಯ ಅನಗತ್ಯ ವೆಚ್ಚಗಳನ್ನು ತಡೆಯಲು ಅನುಸರಿಸಬೇಕಾದ ಸರಳ ಸೂತ್ರಗಳು ಯಾವವು? ಎಂಬುದನ್ನು ಮುಂದೆ ಓದಿ....[ಎಟಿಎಂ ಮೂಲಕ ಹಣ ಡಿಪಾಸಿಟ್ ಮಾಡೋದು ಹೇಗೆ?]

ಅನಗತ್ಯ ಎಟಿಎಂ ಶುಲ್ಕ ತಪ್ಪಿಸಲು ಹೀಗೆ ಮಾಡಿ

* ಕೈಯಲ್ಲಿ ಸ್ವಲ್ಪ ಹಣ ಯಾವಾಗಲೂ ಇಟ್ಟುಕೊಳ್ಳಿ
ನಿಮ್ಮ ತಿಂಗಳ ಖರ್ಚಿನ ಲೆಕ್ಕ ಹಾಕಿಕೊಂಡು ಅದಕ್ಕಿಂತ ಸ್ವಲ್ಪ ಹೆಚ್ಚಿಗೆ ಹಣ ಡ್ರಾ ಮಾಡಿ ಇಟ್ಟುಕೊಳ್ಳುವುದು ಒಳಿತು. ಇದರಿಂದ ಅನಗತ್ಯ ಶುಲ್ಕ ನೀಡುವಿಕೆಯಿಂದ ತಪ್ಪಿಸಿಕೊಳ್ಳಬಹುದು.

* ಬರುವ ಬಡ್ಡಿ ಬಿಟ್ಟುಕೊಳ್ಳಬೇಡಿ
ನಿಮ್ಮ ಉಳಿತಾಯ ಖಾತೆಗೆ ಬ್ಯಾಂಕ್ ಬಡ್ಡಿ ನೀಡುತ್ತಿರುತ್ತದೆ. ಅಗತ್ಯಕ್ಕಿಂತ ಹೆಚ್ಚಿನ ಹಣ ಡ್ರಾ ಮಾಡಿಕೊಂಡು ಸುಮ್ಮನೇ ಬರುವ ಬಡ್ಡಿ ಬಿಟ್ಟಿಕೊಂಡು ನಷ್ಟ ಮಾಡಿಕೊಳ್ಳದಿರುವುದು ಒಳಿತು.

* ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಳ್ಳಿ
ಬಹುತೇಕ ಅಂಗಡಿಗಳಲ್ಲಿ ಸ್ವೈಪಿಂಗ್ ಮಷಿನ್ ಇಟ್ಟುಕೊಂಡಿರಲಾಗುತ್ತದೆ. ಶಾಪಿಂಗ್ ಮಾಡಿದ ನಂತರ ಕಾರ್ಡ್ ಮೂಲಕವೇ ಪಾವತಿ ಮಾಡಿದರೆ ಅಷ್ಟೇ ಹಣ ಖಾತೆಯಿಂದ ಕಡಿಯತಗೊಳ್ಳುವುದು. ಇಲ್ಲಿ ಕೆಲವೊಮ್ಮೆ ಕ್ಯಾಶ್ ಬ್ಯಾಕ್ ಆಫರ್ ಗಳನ್ನು ಪಡೆಯಬಹುದು.[ಆನುವಂಶಿಕ ಆಸ್ತಿ ಪಡೆವ ಮುನ್ನ ಏಳು ಹೆಜ್ಜೆಗಳು]

* ಒಂದೇ ಕಡೆ ಡ್ರಾ ಮಾಡಿ
ಒಂದೇ ಬ್ಯಾಂಕ್ ಎಟಿಎಂನಲ್ಲಿ ಹಣ ತೆಗೆಯಿರಿ ನಿಮ್ಮ ಬ್ಯಾಂಕ್ ನ ಎಟಿಎಂ ನಲ್ಲೇ ಹಣ ತೆಗೆಯುವುದು ಉತ್ತಮ ಮಾರ್ಗ. ಹೀಗೆ ಮಾಡುವುದರಿಂದ ಅನಗತ್ಯ ತಾಪತ್ರಯಗಳನ್ನು ನಿವಾರಿಸಿಕೊಳ್ಳಬಹುದು.

* ನೋಂದಣಿ ಮಾಡಿಸಿಕೊಳ್ಳಲು ಮರೆಯಬೇಡಿ
ಮೊದಲು ನಿಮ್ಮ ಬ್ಯಾಂಕ್ ನಲ್ಲಿ ನೋಂದಣಿ ಮಾಡಿಸಿಕೊಂಡು ಫೋನ್ ಬ್ಯಾಂಕಿಂಗ್ ಮತ್ತು ಇಂಟರ್ ನೆಟ್ ಬ್ಯಾಂಕಿಂಗ್ ಸೌಲಭ್ಯ ಪಡೆದುಕೊಳ್ಳುವುದು ಒಳಿತು. ಎಟಿಎಂ ನಲ್ಲಿ ಹಣ ಡ್ರಾ ಮಾಡಿದ ನಂತರ ಪ್ರಿಂಟ್ ಔಟ್ ತೆಗೆದುಕೊಳ್ಳಲು ಮರೆಯಬೇಡಿ.

* ಒಂದಕ್ಕಿಂತ ಹೆಚ್ಚು ಖಾತೆ
ಒಂದಕ್ಕಿಂತ ಹೆಚ್ಚು ಖಾತೆ ಹೊಂದಿದ್ದರೆ ನೀವು ಅನತ್ಯ ಶುಲ್ಕದಿಂದ ತಪ್ಪಿಸಿಕೊಳ್ಳಬಹುದು. ಒಂದು ಎಟಿಎಂ ನಲ್ಲಿ ಅನಿವಾರ್ಯವಾಗಿ ಮೂರು ಸಾರಿ ಡ್ರಾ ಮಾಡಿದ್ದರೂ ಇನ್ನೊಂದು ಎಟಿಎಂ ಮೂಲಕ ಮತ್ತೆ ಮೂರು ಸಾರಿ ಡ್ರಾ ಮಾಡಲು ಅವಕಾಶವಿರುತ್ತದೆ.

* ಅನಗತ್ಯ ಖಾತೆಗಳು
ಅನಗತ್ಯ ಖಾತೆಗಳಿದ್ದರೆ ಅಥವಾ ಮಿನಿಮಮ್ ಬ್ಯಾಲೆನ್ಸ್ ಇಡಲು ಅಸಾಧ್ಯವಾಗಿದ್ದರೆ ಅವುಗಳನ್ನು ಕ್ಲೋಸ್ ಮಾಡಿಸುವುದು ಒಂದು ಮಾರ್ಗ. ಇಲ್ಲವಾದಲ್ಲಿ ಅದೇ ಖಾತೆ ಮೂಲಕ ಹಣದ ಚಲಾವಣೆ ಮಾಡಲು ಕ್ರಮ ತೆಗೆದುಕೊಳ್ಳಬೇಕು.[ಜನಧನ ಯೋಜನೆಯಡಿ ಯಾಕೆ ಖಾತೆ ತೆರೆಯಬೇಕು?]

* ಬ್ಯಾಂಕ್ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳಿ
ತಂತ್ರಜ್ಞಾನವನ್ನು ವರವಾಗಿ ಬಳಸಿಕೊಂಡಿರುವ ಬ್ಯಾಂಕ್ ಗಳ ಅಪ್ಲಿಕೇಶನ್ ಡೌನ್ ಲೋಡ್ ಮಾಡಿಕೊಳ್ಳುವುದರಿಂದ ಬೆರಳ ತುದಿಯಲ್ಲಿ ಎಲ್ಲ ವ್ಯವಹಾರಗಳನ್ನು ನಿಭಾಯಿಸಬಹುದು.

ಕೊನೆ ಮಾತು; ಇಂಥ ಚಿಕ್ಕ ಚಿಕ್ಕ ಕ್ರಮಗಳೆ ಉಳಿತಾಯಕ್ಕೆ ನೆರವಾಗುತ್ತದೆ. 20 ರೂ ಹೋದರೆ ಹೋಗಲಿ ಎಂದು ಅಸಡ್ಡೆ ಮಾಡಿದರೆ ತಿಂಗಳ ಅಂತ್ಯಕ್ಕೆ ನೂರಾರು ರೂಪಾಯಿಯನ್ನು ಅನಗತ್ಯವಾಗಿ ತೆತ್ತಿರಬೇಕಾಗುತ್ತದೆ.[ಗುಡ್ ರಿಟರ್ನ್ಸ್ . ಇನ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+