ಎನ್ ಆರ್ ಐ ಗಳಿಗೆ ದೇಶದ ಒಳಗೆ ವ್ಯವಹಾರ ನಡೆಸಲು ವಿವಿಧ ಖಾತೆಗಳನ್ನು ಕೊಡಮಾಡಲಾಗಿದೆ. ಅದರಲ್ಲಿ ಎನ್ ಆರ್ ಒ ಖಾತೆಯೂ ಒಂದು. ಭಾರತದಿಂದ ಹೊರಗಿರುವ ಎನ್ ಆರ್ ಐ ಗಳು ದೇಶದೊಳಗೆ ವಿಶ್ವಾಸಾರ್ಹ ರೀತಿ ಹಣದ ಟ್ರಾನ್ಸಾಕ್ಷನ್ ನಡೆಸಲು ಈ ಬ್ಯಾಂಕ್ ಖಾತೆ ತೆರೆಯಬಹುದು. ಆದರೆ ರೂಪಾಯಿ ಮೂಲಕ ಮಾತ್ರ ವ್ಯವಹಾರ ನಡೆಸಬಹುದು.
ಉಳಿತಾಯ, ಕರೆಂಟ್, ಫಿಕ್ಸಡ್ ಡಿಪಾಸಿಟ್ ಅಥವಾ ಇನ್ನಿತರ ರೀತಿಯ ಯಾವ ಖಾತೆಯನ್ನು ತೆರೆಯಬಹುದು. ಅಲ್ಲದೇ ದೇಶದಲ್ಲಿ ತಮಗೆ ಸೇರಬೇಕಾದ ಬಡ್ಡಿ ಅಥವಾ ಇನ್ನಿತರ ಮೂಲಗಳ ಹಣ ಸಂದಾಯದ ಬಗೆಗೂ ಈ ಖಾತೆಯನ್ನು ಬಳಸಿಕೊಳ್ಳಬಹುದು.[ಸ್ಯಾಲರಿ ಅಕೌಂಟ್-ಉಳಿತಾಯ ಖಾತೆ ನಡುವಿನ ವ್ಯತ್ಯಾಸವೇನು?]

ಎನ್ ಆರ್ ಒ ಖಾತೆ ಗುಣ ಲಕ್ಷಣಗಳು ಯಾವವು?
1. ಭಾರತೀಯ ರೂಪಾಯಿ ಆಧಾರದಲ್ಲೇ ವ್ಯವಹಾರ ನಡೆಸಬೇಕು.
2. ಎನ್ ಆರ್ ಒ ಖಾತೆಗೆ ಹಣ ರವಾನೆ ಸೌಲಭ್ಯ (ಕೆಲ ನಿರ್ಬಂಧಗಳು)
* ಸಾಮಾನ್ಯ ಬ್ಯಾಂಕಿಂಗ್ ಮೂಲಕ ದೇಶದ ಹೊರಗಿನಿಂದ (ಅನುಮತಿ ಪಡೆದ ಸ್ಥಳಗಳಿಂದ ಮಾತ್ರ) ಹಣ ಸಂದಾಯ ಸಾಧ್ಯ
* ಕಾನೂನು ಬದ್ಧ ಬಾಕಿಗಳನ್ನು ಅಂದರೆ ಆದಾಯ ತೆರಿಗೆ, ಡಿವಿಡೆಂಟ್ಪೆನ್ಶನ್, ಬಡ್ಡಿ ಮುಂತಾದವುಗಳನ್ನು ಈ ಖಾತೆಯ ಆಧಾರದಲ್ಲಿ ಪಡೆಯಬಹುದು.
* ವಂಶಪಾರಂಪರ್ಯವಾಗಿ ಬಂದ ಆಸ್ತಿ ಅಥವಾ ಇನ್ನಿತರ ಚಿರಾಸ್ಥಿಗಳನ್ನು ಮಾರಾಟ ಮಾಡಲು ಈ ಖಾತೆ ಅವಕಾಶ ನೀಡುತ್ತದೆ.
3. ನೀವು ಯಾವುದೇ ರೀತಿಯ ಹಣವನ್ನು ದೇಶದ ಒಳಗಿನಿಂದ ಪಡೆಯಲು ಯೋಗ್ಯರಾಗಿದ್ದರೇ, ಅಂದರೆ ಸ್ಥಳೀಯ ಸಂಸ್ಥೆಗಳಿಂದ ಸಂದಾಯವಾಗಬೇಕಿರುವ ಹಣ, ರಿಸರ್ವ್ ಬ್ಯಾಂಕ್ ಗುರುತು ಮಾಡಿರುವ ಸ್ಥಳಗಳಿಂದ ಹಣ ಸಂದಾಯ, ಬಡ್ಡಿ, ನಿವೃತ್ತಿ ವೇತನ ಎಲ್ಲವನ್ನು ಪಡೆಯಲು ಈ ಖಾತೆ ಅನುವು ಮಾಡುಕೊಡುತ್ತದೆ.
4. ಹಣಕಾಸು ವರ್ಷದಲ್ಲಿ ನಿಮ್ಮ ಟ್ರಾನ್ಸಾಕ್ಷನ್ ಒಂದು ಮಿಲಿಯನ್ ಡಾಲರ್ ಮೀರುವಂತಿಲ್ಲ. ಕೆಲ ಸಂದರ್ಭಗಳಲ್ಲಿ ತೆರಿಗೆ ಸಹ ನೀಡಬೇಕಾಗುತ್ತದೆ.
5. ಒಂದು ಮಿಲಿಯನ್ ಡಾಲರ್ ಮೊತ್ತದಲ್ಲಿ ನಿಮ್ಮ ಪ್ರತಿದಿನದ ವ್ಯವಹಾರದ ಮೊತ್ತ, ಸ್ಥಿರಾಸ್ಥಿ ಮಾರಾಟ ಎಲ್ಲವೂ ಸೇರಿರುತ್ತದೆ.
6. ಜಂಟಿಯಾಗಿಯೂ ಅಂದರೆ ದೇಶವಾಸಿ ಮತ್ತು ಎನ್ ಆರ್ ಐ ಸೇರಿ ಎನ್ ಆರ್ ಒ ಖಾತೆಯನ್ನು ತೆರೆಯಬಹುದು.
7. ಖಾತೆದಾರ ಕಾಲಕಾಲಕ್ಕೆ ತಕ್ಕಂತೆ ಮಾಹಿತಿ ಪಡೆಯುವ ಹಕ್ಕು ಹೊಂದಿರುತ್ತಾನೆ.[ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?]
8. ಈ ಖಾತೆಯ ಅಡಿ ಸಾಲ ಪಡೆಯಬಹುದು. ಆದರೆ ಹಣ ವ್ಯಕ್ತಿಯ ಕೈ ಗೆ ರೂಪಾಯಿ ಮಾದರಿಯಲ್ಲೇ ಸಿಗುತ್ತದೆ.
9. ಫಾರಿನ್ ನ್ಯಾಶನಲ್ ಬ್ಯಾಂಕ್ ಗಳಲ್ಲೂ ಈ ಬಗೆಯ ಖಾತೆ ತೆರೆಯಬಹುದು
10. ಕೆಲ ಸಂದರ್ಭಗಳಲ್ಲಿ ಆರ್ ಬಿಐ ಅನುಮತಿ ಇಲ್ಲದೇ ಎನ್ ಆರ್ ಒ ದ ಖಾತೆಯಲ್ಲಿರುವ ಹಣ ಹಿಂದಕ್ಕೆ ಪಡೆಯಲು ಸಾಧ್ಯವಿಲ್ಲ.(ಗುಡ್ ರಿಟರ್ನ್ಸ್.ಇನ್)
More From GoodReturns

ಚಿನ್ನದ ಬೆಲೆ ಸ್ಥಿರ: ಆರ್ಬಿಐ ನಿರ್ಧಾರದಿಂದ ದರ ಇಳಿಕೆಯಾಗುತ್ತಾ?

ಎಮಿಯಾಕ್ ಟೆಕ್ನಾಲಜೀಸ್ ಐಪಿಒ: ಹೂಡಿಕೆದಾರರ ಮುಗಿಬಿದ್ದ ಭರ್ಜರಿ ಬೇಡಿಕೆ!

ಆರ್ಬಿಐ ನಿರ್ಧಾರದಿಂದ ನಿಮ್ಮ ಇಎಂಐ ಹೊರೆ ಹೆಚ್ಚಾಗಲಿದೆಯೇ? ಎಚ್ಚರ!

ಆರ್ಬಿಐ ರೆಪೋ ದರ ಸ್ಥಿರತೆ: ನಿಮ್ಮ ಇಎಂಐ ಹೊರೆ ಇಳಿಯುತ್ತಾ?

ಆರ್ಬಿಐ ಪಾಲಿಸಿಗೂ ಮುನ್ನ ನಿಮ್ಮ ಬಂಡವಾಳಕ್ಕೆ ಈ ರಕ್ಷಣೆ ಬೇಕೇ?

ಆರ್ಬಿಐ ನಿರ್ಧಾರದ ನಂತರ ನಿಮ್ಮ ಹಣಕ್ಕೆ ಯಾವುದು ಬೆಸ್ಟ್?

ಆರ್ಬಿಐ ಪಾಲಿಸಿ ಅಬ್ಬರ: ನಿಮ್ಮ ಹಣ ಉಳಿಸಲು ಈ ತಂತ್ರ ಬಳಸಿ

ಆರ್ಬಿಐ ಬಡ್ಡಿ ದರ: ನಿಮ್ಮ ಇಎಂಐ ಹೊರೆ ಕಡಿಮೆಯಾಗುತ್ತಾ?

ಆರ್ಬಿಐ ನಿರ್ಧಾರ: ನಿಮ್ಮ ಎಸ್ಐಪಿ ಮತ್ತು ಇಎಂಐ ಬದಲಾಯಿಸಬೇಕೇ?

ಸೇಫ್ಟಿ ಕಂಟ್ರೋಲ್ಸ್ ಐಪಿಒ: ಹೂಡಿಕೆದಾರರೇ ಇಂದೇ ಕೊನೆಯ ಅವಕಾಶ!

ಗೃಹ ಸಾಲದ ಇಎಂಐ ಇಳಿಕೆ: ಆರ್ಬಿಐ ನಿರ್ಧಾರದ ಅಸಲಿ ಸತ್ಯ



Click it and Unblock the Notifications