ಕೆಲ ಬದಲಾವಣೆಗಳನ್ನು ಮಾಡುವ ಮೂಲಕ ಕಿಸಾನ್ ವಿಕಾಸ ಪತ್ರವನ್ನು ಹೊಸ ರೀತಿಯಲ್ಲಿ ಬಿಡುಗಡೆ ಮಾಡಲಾಗಿದೆ. ಆದರೆ ಒಮ್ಮೆಲೆ ಇದರ ಮೇಲೆ ಹಣ ಹೂಡಿಕೆ ಮಾಡುವುದಕ್ಕಿಂತ ಗುಣ ಮತ್ತು ಅವಗುಣಗಳನ್ನು ತಿಳಿದುಕೊಳ್ಳುವುದು ಉತ್ತಮ.
ನೀವು ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹಣ ಹೂಡಿಕೆ ಮಾಡಲು ಮುಂದಾಗುವುದಾದರೆ ಅನೇಕ ಆಯ್ಕೆಗಳನ್ನು ಪಡೆದುಕೊಳ್ಳಬೇಕಾಗುತ್ತದೆ. ಬ್ಯಾಂಕ್ ನಲ್ಲಿ ಹಣ ಹೂಡಿಕೆ ಮಾಡುವುದು ಉತ್ತಮವೋ? ಅಥವಾ ಕಿಸಾನ್ ವಿಕಾಸ ಪತ್ರವೋ? ಎಂಬುದನ್ನು ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ. ಕಿಸಾನ್ ವಿಕಾಸ ಪತ್ರಕ್ಕೆ ಹೋಲಿಸಿದರೆ ಬ್ಯಾಂಕ್ ನಲ್ಲಿ ಹೂಡಿಕೆ ಮಾಡುವುದೇ ಲಾಭ. ಅದಕ್ಕೆ ಕಾರಣಗಳು ಇಲ್ಲಿವೆ.[ಯಾವ ಬ್ಯಾಂಕ್ ನಿಂದ ಕಿಸಾನ್ ವಿಕಾಸ್ ಪತ್ರ ಪಡೆಯಬಹುದು?]

* ಕಡಿಮೆ ಬಡ್ಡಿ ದರ
ಬ್ಯಾಂಕ್ ನೀಡುವ ಬಡ್ಡಿ ದರಕ್ಕೆ ಹೋಲಿಸಿದರೆ ಕಿಸಾನ್ ವಿಕಾಸ ಪತ್ರದ ರಿಟರ್ನ್ಸ್ ಕಡಿಮೆ. ಅಲ್ಲದೇ ಕಿಸಾನ್ ವಿಕಾಸ ಪತ್ರದ ಅವಧಿ ಬಹಳ ದೀರ್ಘ(8 ವರ್ಷ 4 ತಿಂಗಳು) ಕಿಸಾನ್ ವಿಕಾಸ ಪತ್ರದಲ್ಲಿ ಶೇ. 8.68 ಬಡ್ಡಿ ಸಿಕ್ಕರೆ, ಬ್ಯಾಂಕ್ ಗಳಲ್ಲಿ ಶೇ. 8.9 ಬಡ್ಡಿ ಪಡೆದುಕೊಳ್ಳಬಹುದು.
ಇಲ್ಲಿ ಹಿರಿಯ ನಾಗರೀಕರಿಗೆ ವಿಶೇಷ ಸವಲತ್ತುಗಳು ಸಿಗುತ್ತವೆ. ಬ್ಯಾಂಕ್ ಗಳು ಪ್ರತಿಯಿಂದು ತ್ರೈಮಾಸಿಕಕ್ಕೂ ನಿಮ್ಮ ಬಡ್ಡಿ ಪರಿಷ್ಕರಣೆ ಮಾಡಿ ಹೊಸದಾಗಿ ಅಂದರೆ ಬಡ್ಡಿಯನ್ನು ಸೇರಿಸಿ ಲೆಕ್ಕ ಹಾಕುತ್ತದೆ.[ಹೆಚ್ಚು ರಿಟರ್ನ್ಸ್ ನೀಡುವ 7 ಹೂಡಿಕೆ ಟಿಪ್ಸ್]
* ಬೇಕಾದಾಗ ಹಣ ತೆಗೆದುಕೊಳ್ಳಲು ಆಗಲ್ಲ
ಕೆವಿಪಿಯಲ್ಲಿ ನೀವು ತೊಡಗಿಸಿರುವ ಹಣ ಒಂದು ನಿರ್ದಿಷ್ಟ ಅವಧಿಗೆ ಲಾಕ್ ಆಗಿರುತ್ತದೆ. ಬ್ಯಾಂಕ್ ಗಳಲ್ಲಾದರೆ ಹಣ ಹಿಂದಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಇಟ್ಟ ಹಣ ಹಿಂದಕ್ಕೆ ಪಡೆಯಲು ಸಾಧ್ಯವಾಗದಿದ್ದರೆ ಅಗತ್ಯ ಸಮಯದಲ್ಲಿ ಹಣ ಕೈಯಲ್ಲಿದ್ದರೂ ಕೊರಗಬೇಕಾದೀತು.
* ಹಿರಿಯ ನಾಗರೀಕರಿಗೆ ಹೆಚ್ಚುವರಿ ಬಡ್ಡಿ ಇಲ್ಲ
ಕಿಸಾನ್ ವಿಕಾಸ ಪತ್ರದಲ್ಲಿ ಹಿರಿಯ ನಾಗರೀಕರಿಗೆ ಹೆಚ್ಚಿನ ಬಡ್ಡಿ ಸಿಗುವುದಿಲ್ಲ. ಬ್ಯಾಂಕ್ ಡಿಪಾಸಿಟ್ ಆದರೆ ಹೆಚ್ಚುವರಿ ಶೇ. ೦.50 ಬಡ್ಡಿ ಪಡೆಯಲು ಸಾಧ್ಯವಿದೆ. ಅಲ್ಲದೆ ನಿಮ್ಮ ಆಯ್ಕೆಯ ಅವಧಿಗೆ ಹಣ ಇಡಬಹುದು.[ಬ್ಯಾಂಕ್ ಡಿಪಾಸಿಟ್ ಬಿಟ್ಟು ಹೂಡಿಕೆ ಮಾಡಲು ಜಾಗವಿದೆ]
* ತೆರಿಗೆ ವಿನಾಯಿತಿ ಲಾಭ ಇಲ್ಲ
80C ಅಡಿಯಲ್ಲಿ ಕೆಲ ತೆರಿಗೆ ವಿನಾಯಿತಿ ಲಾಭ ಪಡೆಯಲು ಬ್ಯಾಂಕ್ ಡಿಪಾಸಿಟ್ ನೆರವಾಗುತ್ತದೆ. ಕೆವಿಪಿಯಲ್ಲಿ ಈ ಬಗೆಯ ಯಾವ ಲಾಭಗಳು ಸಿಗುವುದಿಲ್ಲ.
* ತೆರಿಗೆ ಉಳಿತಾಯ ಸಾಧ್ಯತೆ
ಕಿಸಾನ್ ವಿಕಾಸ ಪತ್ರದ ಬಡ್ಡಿ ತೆರಿಗೆ ವ್ಯಾಪ್ತಿಗೆ ಒಳಪಡುತ್ತದೆ. ಪಿಪಿಎಫ್ ನಂಥ ಕೆಲ ಯೋಜನೆಗಳನ್ನು ಹೊರತುಪಡಿಸಿದರೆ ಉಳಿದವು ಕಡಿಮೆ ಪ್ರಮಾಣದ ಲಾಭ ತಂದುಕೊಡುತ್ತವೆ ಎಂದೇ ಹೇಳಬಹುದು.[ಫಿಕ್ಸೆಡ್ ಡಿಪಾಸಿಟ್ ಕಾಲಾವಧಿ ಬಗ್ಗೆ ನಿಮಗೆಷ್ಟು ಗೊತ್ತು?]
ಕೊನೆ ಮಾತು:
ಕೆವಿಪಿಯಲ್ಲಿ ಹಣ ಹೂಡಿಕೆ ಮಾಡಿದರೆ ದುಡ್ಡು ಲಾಕ್ ಆದಂತೆಯೇ. ಬ್ಯಾಂಕ್ ಗಳು ನೀಡುವ ವಿವಿಧ ಅವಧಿಯ ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡುವುದು ಒಳಿತು. ಇಲ್ಲಿ ಲಾಭದ ಜತೆಗೆ ಅಗತ್ಯಕ್ಕೆ ತಕ್ಕಂತೆ ಹಣ ಬಳಕೆ ಮಾಡಿಕೊಳ್ಳುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ.


Click it and Unblock the Notifications