ಕೇಂದ್ರ ಸರ್ಕಾರದ ನೇರ ತೆರಿಗೆ ಪಾವತಿ ಸಮಿತಿ (ಸಿಬಿಡಿಟಿ) ವಾರ್ಷಿಕವಾಗಿ 5 ಲಕ್ಷಕ್ಕೂ ಅಧಿಕ ಆದಾಯ ಇರುವವರು ಆದಾಯ ತೆರಿಗೆ ಪಾವತಿ ಮಾಡುವುದು ಕಡ್ಡಾಯ ಎಂದು ತಿಳಿಸಿಕೊಂಡೇ ಬಂದಿದೆ.
ಅಂತರ್ಜಾಲ ತಾಣದ ಮುಖೇನ ತೆರಿಗೆ ತುಂಬಬೇಕಾದರೆ ನಿಮಗೆ ಅನೇಕ ಸಮಸ್ಯೆಗಳು ಎದುರಾದಾಗ ಏನು ಮಾಡಬೇಕು ಎಂಬುದು ಒಂದು ಕ್ಷಣ ಗೊತ್ತಾಗುವುದಿಲ್ಲ.[ತೆರಿಗೆ ಮುಕ್ತ ಆದಾಯ ಗಳಿಕೆಗೆ 7 ವಿಧಾನಗಳು]

ತೆರಿಗೆ ಪಾವತಿದಾರರು ತಮಗೆ ಸಂಬಂಧಿಸಿದ ದಾಖಲೆಗಳನ್ನು ಸಮರ್ಪಕವಾಗಿ ನಿರ್ದಿಷ್ಟ ಜಾಗದಲ್ಲಿ ತುಂಬಬೇಕಾಗುತ್ತದೆ. ಮೊಬೈಲ್ ಸಂಖ್ಯೆ, ವಿಳಾಸ ಎಲ್ಲವನ್ನು ಆದಾಯ ತೆರಿಗೆ ಇಲಾಖೆಗೆ ನೀಡಬೇಕಾಗುತ್ತದೆ. ಪಾವತಿದಾರ ಬ್ಯಾಂಕ್ ಖಾತೆ, ಎಂಐಸಿಆರ್ ನಂಬರ್ ತುಂಬಬೇಕಾಗುತ್ತದೆ.
ಮೊದಲು 26AS/NSDL ಅಡಿಯಲ್ಲಿ ಯಾವ ತೆರಿಗೆ ಲಾಭವಿದೆ ಎಂಬುದನ್ನು ನೋಡಿಕೊಳ್ಳಬೇಕಾಗುತ್ತದೆ. ಯಾವ ದಾಖಲೆಗಳು ಮಿಸ್ ಮ್ಯಾಚ್ ಆಗಬಾರದು. ಟಿಡಿಎಸ್ ಮತ್ತು ಬ್ಯಾಂಕ್ ಸಂಬಂಧಿತ ವ್ಯವಹಾರಗಳನ್ನು ನೋಡಿಕೊಳ್ಳಬೇಕಾಗುತ್ತದೆ.[ಆನ್ ಲೈನ್ ನಲ್ಲಿ ಆದಾಯ ತೆರಿಗೆ ಪಾವತಿ ಮಾರ್ಗದರ್ಶಿ]
ವೈಯಕ್ತಿಕ ಮಾಹಿತಿಯನ್ನು ಸರಿಯಾಗಿ ತುಂಬುವುದು ಹೇಗೆ?
* ಹೆಸರು: ಪ್ಯಾನ್ ಕಾರ್ಡ್ ಗೆ ಹೊಂದಾಣಿಕೆಯಾಗುವಂಥೆ ಇರಬೇಕು
* ವಿಳಾಸ: ಮನೆ/ ಫ್ಲಾಟ್ ಸಂಖ್ಯೆ, ನಗರ, ಪಿನ್ ಕೋಡ್ ಕಡ್ಡಾಯವಾಗಿ ತುಂಬಿ. ಇಲ್ಲವಾದಲ್ಲಿ ಟ್ಯಾಕ್ಸ್ ರಿಟರ್ನ್ಸ್ ವೇಳೆ ಸಮಸ್ಯೆಯಾಗಬಹುದು.
* ಇ ಮೇಲ್ ಅಡ್ರೆಸ್: ಇದನ್ನು ಸರಿಯಾಗಿ ತುಂಬಬೇಕು. ಇಲ್ಲಿ ತಪ್ಪಾದರೆ ತೆರಿಗೆ ಪಾವತಿಗೆ ಸಂಬಂಧಿಸಿದ ಎಲ್ಲ ಮಾಹಿತಿಯಿಂದ ನೀವು ವಂಚಿತರಾಗಿತ್ತೀರಿ.
* ಮೊಬೈಲ್ ಸಂಖ್ಯೆ: +91 ಬಳಸದೇ ಮೊಬೈಲ್ ಸಂಖ್ಯೆ ಭರ್ತಿ ಮಾಡಿ. ಎಲ್ಲ ಬಗೆಯ ಎಸ್ ಎಂ ಎಸ್ ಸೇವೆಗಳನ್ನು ಇಲ್ಲಿ ಪಡೆದುಕೊಳ್ಳಬಹುದು.
* ಲಿಂಗ: ಪ್ಯಾನ್ ಕಾರ್ಡ್ ಆಧಾರದಲ್ಲಿಯೇ ಬರೆಯಿರಿ. ಒಂದು ವೇಳೆ ಕಣ್ಣು ತಪ್ಪಿನಿಂದ ಎಲ್ಲಿಯಾದರೂ ವ್ಯತ್ಯಾಸವಾದರೆ ಇಡೀ ದಾಖಲಾತಿಯೇ ಹಿಂದೆ ಮುಂದೆ ಆಗುವುದು.[ವಿಳಂಬವಾಗಿದ್ದಲ್ಲಿ ಆದಾಯ ತೆರಿಗೆ ರಿಟರ್ನ್ಸ್ ಪಾವತಿ ಹೇಗೆ?]
* ಸ್ಟೇಟಸ್: ಇದನ್ನು ಸಹ ಸರಿಯಾಗಿ ಭರ್ತಿ ಮಾಡಬೇಕು
* ರೆಸಿಡೆಂಶ್ಶಿಯಲ್ ಸ್ಟೇಟಸ್: ಎನ್ ಆರ್ ಐ ಮತ್ತು ಎನ್ ಒ ಆರ್ ಗಳಿಗೆ ಇದು ಸಂಬಂಧಿಸಿರುತ್ತದೆ. ಕೆಲ ಸೌಲಭ್ಯಗಳನ್ನು ಪಡೆಯಲು ಇದು ಅನುಕೂಲಕಾರಿಯಾಗಬಹುದು.
ಇಲೆಕ್ಟ್ರಾನಿಕ್ ಫಿಲ್ಲಿಂಗ್ ವ್ಯಾಪಕವಾಗಿ ಬಳಕೆಗೆ ಬಂದಿದ್ದರೂ ಕೆಲ ದೋಷಗಳು ಕಂಡುಬರುತ್ತಿವೆ. ಇವು ಆದಾಯ ಮರುಪಾವತಿ ಸಂದರ್ಭ ಸಮಸ್ಯೆ ತಂದೊಡ್ಡುತ್ತಿವೆ. ಮಾಹಿತಿಯನ್ನು ಎರಡು ಬಾರಿ ಅವಲೋಕಿಸಿ ಭರ್ತಿ ಮಾಡಿದರೆ ನೀವು ಸುರಕ್ಷಿತ. ನಿಮ್ಮ ತೆರಿಗೆ ಹಣಕ್ಕೂ ಮೋಸವಿಲ್ಲ. (ಗುಡ್ ರಿಟರ್ನ್ಸ್. ಇನ್)


Click it and Unblock the Notifications