ಭಾರತೀಯ ರಿಸರ್ವ್ ಬ್ಯಾಂಕ್ ಬಡ್ಡಿ ದರವನ್ನು ಕಡಿತ ಮಾಡುವುದಕ್ಕೆ ಮುನ್ನ ಲಾಭ ತರುವ ಫಿಕ್ಸೆಡ್ ಡಿಪಾಸಿಟ್ ನಲ್ಲಿ ಹೂಡಿಕೆ ಮಾಡುವುದು ಉತ್ತಮ. ಹಾಗಾದರೆ ಅತಿ ಸುರಕ್ಷಿತ ಮತ್ತು ಹೆಚ್ಚಿನ ಬಡ್ಡಿ ನೀಡುವ ಯೋಜನೆಗಳು ಯಾವವು? ಎಂಬುದನ್ನು ಒಮ್ಮೆ ನೋಡಬೇಕಾಗುತ್ತದೆ.
ಹಣದುಬ್ಬರ ನಿಯಂತ್ರಣ ಮತ್ತು ಆರ್ಥಿಕ ವ್ಯವಸ್ಥೆ ಸುಧಾರಣೆ ಸಂಬಂಧ ಆರ್ ಬಿಐ ಕೆಲ ಕ್ರಮಗಳನ್ನು ತೆಗೆದುಕೊಳ್ಳುವ ನಿರೀಕ್ಷೆ ಇದೆ. ಈ ಬಗ್ಗೆ ಹಿರಿಯ ಅಧಿಕಾರಿಗಳು ಜೂನ್ 2 ರಂದು ಸಭೆ ಸೇರಲಿದ್ದಾರೆ.[ಹಣ ಬಾರದಿದ್ದರೆ, ಕಾರ್ಡ್ ಸಿಕ್ಕಿಕೊಂಡರೆ ಯಾರು ಹೊಣೆ?]

ಒಂದೆ ವೇಳೆ ಬಡ್ಡಿ ದರವನ್ನು ಇಳಿಕೆ ಮಾಡಿದರೆ ಫಿಕ್ಸೆಡ್ ಡಿಪಾಸಿಟ್ ಮೇಲಿನ ಬಡ್ಡಿ ದರವೂ ಇಳಿಕೆಯಾಗುತ್ತದೆ. ವರ್ಷದ ಕೊನೆಗೆ ಈಹ ಸಿಗುತ್ತಿರುವುದಕ್ಕಿಂತ ಶೇ. 0.50 ಕಡಿಮೆ ಬಡ್ಡಿ ಸಿಗುವ ಸಾಧ್ಯತೆ ಇದೆ. ಹಾಗಾಗಿ ಈಗಲೇ ಹೂಡಿಕೆ ಮಾಡಲು ಸಾಧ್ಯವಿರುವ ಎರಡು ಅತ್ಯುತ್ತಮ ಫಿಕ್ಸೆಡ್ ಡಿಪಾಸಿಟ್ ಗಳ ಬಗ್ಗೆ ತಿಳಿದುಕೊಳ್ಳಬೇಕು.[ಡೆಬಿಟ್ ಕಾರ್ಡ್ ಬಳಸಿ ಆದಾಯ ತೆರಿಗೆ ತುಂಬುವುದು ಹೇಗೆ?]
ಕೆಟಿಡಿಎಫ್ ಸಿ
ಸುರಕ್ಷಿತ ತಾಣದಲ್ಲಿ ಹಣ ಹಾಕುವುದು ಉತ್ತಮ. ಕೇರಳ ರಸ್ತೆ ಸಾರಿಗೆ ಹಣಕಾಸು ನಿಗಮವು ಕೇರಳ ರಾಜ್ಯ ಸರ್ಕಾರದ ಅಧೀನ ಸಂಸ್ಥೆಯಾಗಿದೆ. ಹಾಗಾಗಿ ನಿಮ್ಮ ಹಣಕ್ಕೆ ಕೇರಳ ಸರ್ಕಾರವೇ ಖಾತ್ರಿ ನೀಡುತ್ತದೆ.
* ಕೆಟಿಡಿಎಫ್ ಸಿ ನೀಡುವ ಬಡ್ಡಿ ಪ್ರಮಾಣ
1 ವರ್ಷಕ್ಕೆ ಶೇ. 10
2 ವರ್ಷಕ್ಕೆ ಶೇ. 10
3 ವರ್ಷಕ್ಕೆ ಶೆ.10
ನಾಲ್ಕು ವರ್ಷಕ್ಕೆ ಶೇ. 9.75
5 ವರ್ಷಕ್ಕೆ ಶೇ. 9.75[ಸುರಕ್ಷಿತ ಆನ್ ಲೈನ್ ಬ್ಯಾಂಕಿಂಗ್ ಗೆ 7 ಸೂತ್ರ]
ಉಳಿದ ಕಡೆಗೆ ಹೋಲಿಸಿದರೆ ಇಲ್ಲಿ ಹಿರಿಯ ನಾಗರೀಕರು 0.25 ಬಡ್ಡಿ ಹೆಚ್ಚುವರಿಯಾಗಿ ಪಡೆದುಕೊಳ್ಳುತ್ತಾರೆ. 25 ಲಕ್ಷಕ್ಕೂ ಅಧಿಕ ಹೂಡಿಕೆ ಮಾಡಿದರೆ ಶೇ. 50 ಬಡ್ಡಿ ಪಡೆದುಕೊಳ್ಳಲು ಸಾಧ್ಯವಿದೆ. ಅಲ್ಲದೇ ಇಲ್ಲಿ ನಿಮ್ಮ ಹಣಕ್ಕೆ ಪ್ರತಿ ಮೂರು ತಿಂಗಳಿಗೊಮ್ಮೆ ಮೊತ್ತ ಮತ್ತು ಸಿಕ್ಕಿದ ಬಡ್ಡಿಯನ್ನು ಕೂಡಿಸಿ ಅದಕ್ಕೆ ಬಡ್ಡಿ ನೀಡಲಾಗುತ್ತದೆ.
ಎಚ್ ಡಿ ಎಫ್ ಸಿ ಹೂಡಿಕೆ ಲಾಭದಾಯಕ
ಎಚ್ ಡಿ ಎಫ್ ಸಿಯ ಡಿಪಾಸಿಟ್ ಮೇಲೆ ಹಣ ಹೂಡಿಕೆ ಮಾಡುವುದು ಒಂದು ಉತ್ತಮ ಆಯ್ಕೆ.
15 ತಿಂಗಳಿಗೆ ಶೇ. 9.10
22 ತಿಂಗಳಿಗೆ ಶೇ. 9.15
3 ತಿಂಗಳಿಗೆ ಶೇ. 9.10
44 ತಿಂಗಳಿಗೆ ಶೇ. 9.15
ಎಚ್ ಡಿ ಎಫ್ ಸಿನಲ್ಲಿ ಹೂಡಿಕೆ ಮಾಡುವುದು ಬಹಳ ಸುರಕ್ಷಿತ ಎಂದೇ ಪರಿಗಣಿಸಲಾಗುತ್ತಿದೆ. ದೀರ್ಘ ಕಾಲದ ಹೂಡಿಕೆಯಲ್ಲಿ ತೊಡಗುವ ಮುನ್ನ ಇನ್ನೊಮ್ಮೆ ಎಲ್ಲ ವಿಷಯಗಳನ್ನು ಪರಿಗಣಿಸಿ ಹೆಜ್ಜೆ ಇಡಬೇಕು. ಕೇಂದ್ರ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆಗಳಲ್ಲೇ ನಿಮ್ಮ ಚಿತ್ತ ಇದ್ದರೆ ಒಳಿತು(ಗುಡ್ ರಿಟರ್ನ್ಸ್ . ಇನ್)


Click it and Unblock the Notifications