For Quick Alerts
ALLOW NOTIFICATIONS  
For Daily Alerts

ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ 5 ಯೋಜನೆ

|

ಮಕ್ಕಳ ಲಾಲನೆ, ಪಾಲನೆ, ಪೋ‌ಷಣೆ ಪ್ರತಿಯೊಬ್ಬ ಪಾಲಕರ ಜವಾಬ್ದಾರಿ. ಆದರೆ ಇದನ್ನು ನಿಭಾಯಿಸುವುದು ಹೇಗೆ? ಎಂಬುದಕ್ಕೆ ಕೆಲವೊಮ್ಮೆ ಸೂಕ್ತ ಮಾರ್ಗದರ್ಶನಗಳು ದೊರೆಯುವುದಿಲ್ಲ.

 

ವಿವಿಧ ಕಂಪನಿಗಳು ಮಕ್ಕಳ ಸುರಕ್ಷತೆಗೆ ಸಂಬಂಧಿಸಿ ಅನೇಕ ಯೋಜನೆಗಳನ್ನು ಕೊಡಮಾಡಿವೆ. ಮಕ್ಕಳ ಆರೋಗ್ಯ ರಕ್ಷಣೆಯೂ ಆಧುನಿಕ ಸಮಾಜದ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ.

 
ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿ ಹಾಕುವ 5 ಯೋಜನೆ

ಶಿಕ್ಷಣಕ್ಕೆ ತಗಲುವ ವೆಚ್ಚ, ಹಣದುಬ್ಬರ ಎಲ್ಲವನ್ನು ಲೆಕ್ಕ ಹಾಕಿ ಯೋಜನೆಯನ್ನು ಖರೀದಿ ಮಾಡಬೇಕಾಗುತ್ತದೆ. ನೀವು ಯಾವುದೇ ಪಾಲಿಸಿಯನ್ನು ಖರೀದಿ ಮಾಡುವ ಮುನ್ನ ಹಲವಾರು ಅಂಶಗಳನ್ನು ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ.

ಉತ್ತಮ ಲಾಭ ಮತ್ತು ರಿಟರ್ನ್ಸ್ ತಂದು ಕೊಡುವ ಕೆಲ ಯೋಜನೆಗಳನ್ನು ಇಲ್ಲಿ ಪಟ್ಟಿ ಮಾಡಿ ನೀಡಲಾಗಿದೆ.
1. ಎಸ್ ಬಿಐ ಲೈಫ್: ಸ್ಮಾರ್ಟ್ ಸ್ಕಾಲರ್
ನಿಮ್ಮ ಮಕ್ಕಳ ಭವಿಷ್ಯವನ್ನು ಸುಂದರ ಮಾಡಲು ಈ ಯೋಜನೆ ಉತ್ತಮವಾದದ್ದು ಎಂದು ಗುರುತಿಸಿಕೊಂಡಿದೆ. ಇದು ವಿಮಾ ಸುರಕ್ಷತೆಯೊಂದಿಗೆ ಹಲವಾರು ಲಾಭಗಳನ್ನು ತಂದುಕೊಡುತ್ತದೆ.

ಗಮನಿಸಬೇಕಾದ ಸಂಗತಿ
* ವಿಮೆಯ ಮೂಲ ಹಣದ ಮೊತ್ತದ ಮೇಲೆ ನಿಮಗೆ ಲಾಭ ದೊರೆಯುತ್ತಾ ಹೋಗುತ್ತದೆ.
* ಅಪಘಾತ ವಿಮೆ, ಅಂಗವೈಕಲ್ಯ ವಿಮೆಯನ್ನು ಸಹ ಯೋಜನೆ ಒಳಗೊಂಡಿರುತ್ತದೆ.
* ನಿಮ್ಮ ಹಣವನ್ನು ಎಸ್ ಬಿಐ ವಿವಿಧ ಫಂಡ್ ಗಳಲ್ಲಿ ಹೂಡಿಕೆ ಮಾಡುವುದರಿಂದ ಅಧಿಕ ಲಾಭ ದೊರೆಯುತ್ತದೆ.
* ಮಾರುಕಟ್ಟೆ ಏರಿಕೆ ಲಾಭ ಮತ್ತು ವಿಮೆ ಲಾಭ ಒಟ್ಟು ಎರಡು ಲಾಭ ಏಕ ಕಾಲಕ್ಕೆ ಲಭ್ಯವಾಗುತ್ತದೆ.

ಸಾವು ಸಂಭವಿಸಿದರೆ
ಒಂದು ವೇಳೆ ಆಕಸ್ಮಿಕ ಸಾವು ಸಂಭವಿಸಿದರೆ ಕಟ್ಟಿದ ಪ್ರೀಮಿಯಂ ಮೊತ್ತಕ್ಕೆ ಶೇ.105 ಹಣ ನೀಡಲಾಗುತ್ತದೆ. ವಿಮಾ ಅವಧಿ ಪೂರ್ಣ ಗೊಂಡಿದ್ದರೆ ಮೊತ್ತಕ್ಕಿಂತ ಅಧಿಕ ಲಾಭ ಪಡೆಯಲು ಯೋಜನೆ ಅವಕಾಶ ಕಲ್ಪಿಸಿದೆ.

2. ಎಚ್ ಡಿಎಫ್ ಸಿ ಎಸ್ ಎಲ್ ಯಂಗ್ ಸ್ಟಾರ್ ಸೂಪರ್ ಪ್ರೀಮಿಯಂ
ನಿಮ್ಮ ಮಕ್ಕಳ ಶಿಕ್ಷಣ, ಮದುವೆ, ,ಮನೆ, ಕಾರು ಮುಂತಾದ ವಿಚಾರಗಳನ್ನು ಗಮನದಲ್ಲಿ ಇಟ್ಟುಕೊಂಡು ಈ ಯೋಜನೆಯನ್ನು ಕೊಡಮಾಡಲಾಗುತ್ತಿದೆ. ಇಲ್ಲಿ ನಿಮಗೆ ನಾಲ್ಕು ವಿಭಿನ್ನ ಫಂಡ್ ಗಳನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ.

*ಇನ್ ಕಮ್ ಫಂಡ್: ಇದು ಹೆಚ್ಚಿನ ಮರುಪಾವತಿಯನ್ನು ತಂದು ಕೊಡುತ್ತದೆ.
* ಬ್ಯಾಲೆನ್ಸಡ್ ಫಂಡ್: ಇದು ಮರುಪಾವತಿ ಮತ್ತು ಲಾಭವನ್ನು ಸರಿದೂಗಿಸಿಕೊಂಡು ಹೋಗುತ್ತದೆ
* ಬ್ಲ್ಯೂ ಚಿಪ್ ಫಂಡ್: ಲಾರ್ಜ್ ಕ್ಯಾಪ್ ಈಕ್ಚಿಟಿಯಲ್ಲಿ ಹೂಡಿಕೆ
* ಆಪರ್ಚುನಟಿ ಫಂಡ್: ಮಿಡ್ ಕ್ಯಾಪ್ ಈಕ್ಚಿಟಿಯಲ್ಲಿ ಹೂಡಿಕೆ

ಸಾವು ಸಂಭವಿಸಿದರೆ
ಸಾವಾದರೆ ಹಣ ಯಾವುದೇ ಗೊಂದಲವಿಲ್ಲದೇ ಫಲಾನುಭವಿ(ಮಕ್ಕಳ) ಕೈ ಸೇರುತ್ತದೆ. ಶೇ.50 ಕ್ಕಿಂತ ಅಧಿಕ ಪ್ರೀಮಿಯಂ ಮೊತ್ತ ಪಾವತಿ ಮಾಡಿದ್ದರೆ ಉಳಿದ ಹಣವನ್ನು ಫಲಾನುಭವಿ ಪಾವತಿ ಮಾಡಲು ಅವಕಾಶವಿದೆ.

3. ಐಸಿಐಸಿಐ ಪ್ರೊ ಸ್ಮಾರ್ಟ್ ಕಿಡ್ ರೆಗ್ಯೂಲರ್ ಪ್ರೀಮಿಯಂ
ಇದೊಂದು ಎಂಡೊವ್ ಮೆಂಟ್ ಪಾಲಿಸಿ ಎಂದು ಗುರುತಿಸಿಕೊಳ್ಳುತ್ತದೆ. ಇಲ್ಲಿ ನಿಮೆಗೆ ಎರಡು ಬಗೆಯ ಯೋಜನೆಗಳ ಆಯ್ಕೆಯನ್ನು ನೀಡಲಾಗುತ್ತದೆ. ಶಿಕ್ಷಣಕ್ಕೆ ಸಂಬಂಧಿಸಿದ ವಿಶೇಷ ಕೊಡುಗೆಗಳು ಇಲ್ಲಿ ಲಭ್ಯವಿದೆ.

ಸಾವು ಸಂಭವಿಸಿದರೆ
* ವಿಮಾ ಮೊತ್ತ ಕೂಡಲೇ ಕೈ ಸೇರುತ್ತದೆ
* ಪ್ರಿಮಿಯಂ ಪಾವತಿದಾರನ ಸಾವು ಸಂಭವಿಸಿದರೂ ಮಕ್ಕಳು ಪಾಲಿಸಿಯನ್ನು ಮುಂದುವರಿಸಿಕೊಂಡು ಹೋಗಬಹುದು.

4. ಎಲ್ ಐಸಿ ಚೈಲ್ಡ್ ಪ್ಲಾನ್
ಲೈಫ್ ಇನ್ಶುರೆನ್ಸ್ ಮಾಡಿಸಿಕೊಂಡವರಿಗೆ ಇದು ಹೇಳಿ ಮಾಡಿಸಿದ ಯೋಜನೆಯಾಗಿದೆ. 18 ವರ್ಷದ ನಂತರ ಅತೀ ಹೆಚ್ಚಿನ ಮೊತ್ತ ಒಂದೇ ಸಾರಿ ಕೈ ಸೇರುವುದು. ನಿಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ವಿದೇಶದಲ್ಲಿ ಶಿಕ್ಷಣ ನೀಡಲು ಬಯಸಿದ್ದರೆ ಈ ಯೋಜನೆಯನ್ನು ಧಾರಾಳವಾಗಿ ಮಾಡಿಸಬಹುದು.

5. ಎಲ್ ಐಸಿ ಚಿಲ್ಡ್ರನ್ ಮನಿ ಬ್ಯಾಕ್ ಪ್ಲಾನ್
ಇದು ಸಹ ಮದುವೆ, ಶಿಕ್ಷಣ ಮುಂತಾದ ಅಗತ್ಯ ಸಂದರ್ಭದಲ್ಲಿ ದೊಡ್ಡ ಮೊತ್ತವನ್ನು ಒದಗಿಸಿಕೊಡುತ್ತದೆ. ಎಲ್ ಐಸಿ ನೀಡುವ ಅನೇಕ ಲಾಭಗಳನ್ನು ಈ ಯೋಜನೆ ಒಳಗೊಂಡಿರುತ್ತದೆ.

ಕೊನೆ ಮಾತು
ಮಕ್ಕಳ ಶಿಕ್ಷಣ ಮತ್ತು ಮದುವೆ ಜವಾಬ್ದಾರಿ ಭಾರತದಲ್ಲಿ ಪೋಷಕರದ್ದೇ ಆಗಿದೆ. ಒಮ್ಮೆಲೆ ಬಹಳಷ್ಟು ಹಣ ಬೇಕು ಎಂದು ದಿಗಿಲು ಬೀಳುವುದಕ್ಕಿಂತ ಇಂಥ ಯೋಜನೆಗಳನ್ನು ಮಾಡಿಸಿದರೆ ಮಕ್ಕಳಿಗೆ ಉತ್ತಮ ಭವಿಷ್ಯ ಕಟ್ಟಿಕೊಡಲು ಸಾಧ್ಯವಾಗುತ್ತದೆ.(ಗುಡ್ ರಿಟರ್ನ್ಸ್.ಇನ್)

Read in English: 5 Best Child Plans For 2015
English summary

5 Best Child Plans For 2015 in India

After being a parent, one should start planning for one's financial responsibilities so that they fall in place in due course of time. Health and education play a vital part, without fail it should be considered before buying any plan for child.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X