ಕುಟುಂಬದ ಹಣಕಾಸು ಆರೋಗ್ಯ ಕಾಪಾಡಲು 5 ಐಡಿಯಾ

ನಿಮ್ಮ ಕುಟುಂಬದ ಹಣಕಾಸು ಆರೋಗ್ಯ ಯಾವಾಗಲೂ ಸುಸ್ಥಿತಿಯಲ್ಲಿ ಇರುವುದು ಮುಖ್ಯ. ಈ ಬಗ್ಗೆ ಅನೇಕ ಸಲಹೆ ಸೂಚನೆಗಳನ್ನು ನೀಡಲಾಗುತ್ತಿರುತ್ತದೆ. ಕೆಲವೊಮ್ಮೆ ಯಾವುದನ್ನು ಮಾಡಬೇಕು-ಬಿಡಬೇಕು? ಎಂಬ ಗೊಂದಲಕ್ಕೂ ಒಳಗಾಗುವ ಸಂಭವವಿರುತ್ತದೆ.

ಒಂದಿಷ್ಟು ಹಣ ಉಳಿತಾಯ ಮಾಡಿ ಇಟ್ಟುಕೊಳ್ಳುವುದು ಅಥವಾ ತೊಡಗಿಸುವುದು ಎಲ್ಲ ಬಗೆಯಿಂದಲೂ ಸುರಕ್ಷಿತ ತಂತ್ರ. ಹಾಗಾದರೆ ನಿಜಕ್ಕೂ ನಿಮ್ಮ ಕುಟುಂಬವನ್ನು ಕಾಪಾಡಲು ಯಾವ ಬಗೆಯ ಉಳಿತಾಯ ಉತ್ತಮ? ಅದಕ್ಕೆ ಇಲ್ಲಿದೆ ಉತ್ತರ...

ಆರೋಗ್ಯ ವಿಮೆ ಕಡ್ಡಾಯ

ಆರೋಗ್ಯ ವಿಮೆ ಕಡ್ಡಾಯ

ಅನಿರೀಕ್ಷಿತವಾಗಿ ಕೈ ಕೊಡುವ ಆರೋಗ್ಯ ಸಮಸ್ಯೆ ನಿಮ್ಮ ಹಣಕಾಸು ವ್ಯವಸ್ಥೆಯನ್ನು ಅಲ್ಲೋಲ ಕಲ್ಲೋಲ ಮಾಡಬಹುದು. ಹಾಗಾಗಿ ಕುಟುಂಬಸದ ಹೆಸರಿನಲ್ಲಿ ಆರೋಗ್ಯ ವಿಮೆಯೊಂದನ್ನು ಮಾಡಿಸಿಕೊಳ್ಳುವುದು ಜಾಣತನದ ತಂತ್ರ.

ನಿಮ್ಮ ಆಸ್ತಿಗೆ ನಾಮಿನೇಶನ್ ಮಾಡಿಸಿ

ನಿಮ್ಮ ಆಸ್ತಿಗೆ ನಾಮಿನೇಶನ್ ಮಾಡಿಸಿ

ನಿಮ್ಮ ಪ್ರತಿಯೊಂದು ಆಸ್ತಿ, ದಾಖಲೆಗಳಿಗೆ ನಾಮಿನೇಶನ್ ಮಾಡಿಸಿ. ಅವು ಷೇರು, ಮನೆ, ನಿವೇಶನ ಯಾವುದೇ ಆಗಿರಬಹುದು. ಸಮಸ್ಯೆಗಳು ಎದುರಾದರೆ ನಿಮ್ಮ ನಾಮಿನಿ ಎಲ್ಲ ವ್ಯವಹಾರಗಳನ್ನು ನಿಭಾಯಿಸಿಕೊಂಡು ಹೋಗಬಹುದು.

ವಿಲ್ ಮಾಡಿಸುವುದು ಅಗತ್ಯ

ವಿಲ್ ಮಾಡಿಸುವುದು ಅಗತ್ಯ

ಈಗ ವಿಲ್ ಮಾಡಿಸುವುದು ನಿಮಗೆ ಅನಗತ್ಯ ಎಂದು ಅಂದುಕೊಳ್ಳಬಹುದು. ಆದರೆ ಒಂದು ನೂರಾರು ಸಮಸ್ಯೆಗಳಿಗೆ ಉತ್ತರವಾಗಿ ನಿಲ್ಲಬಹುದು. ನಿಮ್ಮ ಆಸ್ತಿ ಹಂಚಿಕೆ ವೇಳೆ ಉಂಟಾಗುವ ಗೊಂದಲವನ್ನು ನಿವಾರಿಸಸಬಹುದು. ಇಲ್ಲವೇ ಗೊಂದಲಕ್ಕೆ ಆಸ್ಪದವನ್ನೇ ನೀಡದಿರಬಹುದು.

ನಿಮ್ಮ ಎಲ್ಲ ಸಂಪರ್ಕಗಳ ದಾಖಲೀಕರಣ

ನಿಮ್ಮ ಎಲ್ಲ ಸಂಪರ್ಕಗಳ ದಾಖಲೀಕರಣ

ನಿಮ್ಮ ವಿಮಾ ಏಜೆಂಟರು, ಬ್ಯಾಂಕರ್ಸ್, ಮ್ಯೂಚುವಲ್ ಫಂಡ್ ಗೆ ಸಂಬಂಧಿತ ಮಾಹಿತಿಗಳನ್ನು ಒಂದೆಡೆ ದಾಖಲೀಕರಣ ಮಾಡಿ ಇರಿಸಿಕೊಳ್ಳಿ. ಅಲ್ಲದೇ ಇದನ್ನು ನಿಮ್ಮ ನಾಮಿನಿಗೆ ತಿಳಿಸುವುದು ಉತ್ತಮ ಅಥವಾ ವಿಲ್ ನಲ್ಲಿ ಈ ಬಗ್ಗೆ ವಿವರ ದಾಖಲು ಮಾಡಿ ಇಟ್ಟುಕೊಳ್ಳಿ.

ವಿಮೆ ಆಯ್ಕೆಯಲ್ಲಿ ಎಚ್ಚರಿಕೆ

ವಿಮೆ ಆಯ್ಕೆಯಲ್ಲಿ ಎಚ್ಚರಿಕೆ

ಟರ್ಮ್ಸ್ ಇನ್ಶೂರೆನ್ಸ್ ಮಾಡಿಸುವುದೋ ಅಥವಾ ಎಂಡೊವ್ ಮೆಂಟ್ ಪಾಲಿಸಿ ಮಾಡಿಸುವುದೋ ಎಂಬ ಗೊಂದಲ ಎದುರಾಗುವುದು ಸಹಜ. ಯಾವುದು ಹೆಚ್ಚಿನ ಲಾಭ ಮತ್ತು ರಿಟರ್ನ್ಸ್ ತಂದುಕೊಡುತ್ತದೆ ಎಂಬುದನ್ನು ಲೆಕ್ಕ ಹಾಕಿ ಮುಂದುವರಿಯಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+