ಯಾವ ಒಬ್ಬ ಹೂಡಿಕೆದಾರ ತನ್ನ ಬಂಡವಾಳಕ್ಕೆ ಹೆಚ್ಚಿನ ಲಾಭ ಮತ್ತು ರಿಟರ್ನ್ಸ್ ದೊರೆಯಬೇಕು ಎಂದೇ ಆಶಿಸುತ್ತಾನೆ. ಅಲ್ಲದೇ ಹಣ ಸುರಕ್ಷಿತವಾಗಿರಲಿ ಎಂಬ ಉದ್ದೇಶವೂ ಇರುತ್ತದೆ,
ಮಾರುಕಟ್ಟೆಯ ನೀತಿಯೇ ಹಾಗೆ ರಿಸ್ಕ್ ಜಾಸ್ತಿ ಇದ್ದಲ್ಲಿ ಲಾಭವೂ ಜಾಸ್ತಿ, ರಿಸ್ಕ್ ಕಡಿಮೆ ಇದ್ದಲ್ಲಿ ಲಾಭವೂ ಕಡಿಮೆ. ಯಾವುದೇ ಒಂದು ಹೂಡಿಕೆ ಮಾಡುವ ಮುನ್ನ ಹಲವಾರು ಸಂಗತಿಗಳನ್ನು ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ.[ಮೊಬೈಲಿನಲ್ಲೇ ಇಪಿಎಫ್ ಬ್ಯಾಲೆನ್ಸ್ ಚೆಕ್ ಮಾಡಿ]
ಬಂಡವಾಳ ಹೂಡಿಕೆ ಕಾಲಾವಧಿ
ಬಂಡವಾಳ ಹಾಕುವ ಮೊದಲು ಅದರ ಕಾಲಾವಧಿ ಮತ್ತು ಪದರಗಳನ್ನು ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ. ಹಲವಾರು ಸಂದರ್ಭಗಳಲ್ಲಿ ರಿಟರ್ನ್ಸ್ ಕಾಲಾವಧಿಯ ಮೇಲೆ ನಿರ್ಧರಿತವಾಗಿರುತ್ತದೆ.
ಲಿಕ್ಚಿಡಿಟಿ
ಇದು ಸಹ ಅಷ್ಟೇ ಮುಖ್ಯವಾಗಿದ್ದು ಹೂಡಿಕೆ ಮುನ್ನ ಯೋಚನೆ ಮಾಡಬೇಕಾಗುತ್ತದೆ. ಅಲ್ಲದೇ ಹಣದ ಹರಿವನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕಾಗುತ್ತದೆ.[ನಾಲ್ಕು ಅತ್ಯುತ್ತಮ ಚಿನ್ನ ಉಳಿತಾಯ ಯೋಜನೆಗಳು]
ತೆರಿಗೆ ಲೆಕ್ಕ
ಇದನ್ನು ಹಣ ಹೂಡಿಕೆ ಮುನ್ನ ಗಮನಕ್ಕೆ ತಂದುಕೊಳ್ಳಬೇಕಾಗುತ್ತದೆ. ಯಾವ ಯೋಜನೆಯಲ್ಲಿ ಹಣ ಹೂಡಿಕೆ ಮಾಡಿದರೆ ಆದಾಯ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಾಗುವುದು. ಈ ಎಲ್ಲ ಅಂಶಗಳನ್ನು ಆಧರಿಸಿ ಅತ್ಯುತ್ತಮವಾದ 8 ಯೋಜನೆಗಳನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.(ಗುಡ್ ರಿಟರ್ನ್ಸ್.ಇನ್)
ಬ್ಯಾಂಕ್ ಫಿಕ್ಸೆಡ್ ಡಿಫಾಸಿಟ್
ಇದೊಂದು ಪ್ರಸಿದ್ಧ ಮತ್ತು ಜನರಿಗೆ ಪ್ರೀತಿ ಪಾತ್ರವಾದ ಹೂಡಿಕೆ ತಂತ್ರವಾಗಿದ್ದು ನಿಮಗೆ ಶೇ. 7 ರಿಂದ 9 ರವರೆಗೆ ಬಡ್ಡಿ ದರ ಸಿಗಬಹುದು. ಸಾಮಾನ್ಯವಾಗಿ 10 ಸಾವಿರಕ್ಕೂ ಅಧಿಕ ಮೊತ್ತದ ಹೂಡಿಕೆ ಮಾಡಿದರೆ ತೆರಿಗೆ ನೀಡಬೇಕಾಗುತ್ತದೆ.
ರಿಕರಿಂಗ್ ಡಿಫಾಸಿಟ್
ಆರ್ ಡಿ ಎಂದು ಕರೆಯಲ್ಪಡುವ ಇದು ಚಿಕ್ಕ ಪ್ರಮಾಣದ ಹೂಡಿಕೆಗೆ ಹೇಳಿ ಮಾಡಿಸಿದ್ದು. ಪ್ರತಿ ತಿಂಗಳು ನಿರ್ದಿಷ್ಟ ಮೊತ್ತದ ಹಣವನ್ನು ತುಂಬಬೇಕಾಗುತ್ತದೆ. ಇಲ್ಲಿ ದೊರೆಯುವ ಬಡ್ಡಿಗೆ ಟಿಡಿಎಸ್ ಅನ್ವಯವಾಗುತ್ತದೆ
ಪಬ್ಲಿಕ್ ಪ್ರೊವಿಟೆಂಟ್ ಫಂಡ್
ವೇತನ ಪಡೆಯುತ್ತಿರುವ ವ್ಯಕ್ತಿಗೆ ಪಿಪಿಎಫ್ ಹೂಡಿಕೆ ಮಾಡಲು ಒಳ್ಳೆಯ ಜಾಗ. 80 ಸಿ ಅನ್ವಯ ಇಲ್ಲಿ ನಿಮಗೆ ತೆರಿಗೆ ವಿನಾಯಿತಿ ಲಾಭವೂ ಸಿಗುತ್ತದೆ.
ತಿಂಗಳ ಯೋಜನೆ
ಭಾರತೀಯ ಅಂಚೆ ಇಲಾಖೆ ನೀಡಿರುವ ತಿಂಗಳ ಆದಾಯ ಯೋಜನೆ ಸಹ ಉತ್ತಮ ತಾಣ. ಸರ್ಕಾರದ ಅಭಯ ಹಸ್ತ ಇರುವ ಯೋಜನೆ ಹಿರಿಯ ನಾಗರಿಕರು ಮತ್ತು ನಿವೃತ್ತಿ ಪಡೆದವರಿಗೆ ಹೇಳಿ ಮಾಡಿಸಿದ್ದು.
ಹಿರಿಯ ನಾಗರಿಕರ ಉಳಿತಾಯ ಯೋಜನೆ
ಭಾರತ ಸರ್ಕಾರವೇ ವಿಶೇಷವಾಗಿ ಈ ಯೋಜನೆಯನ್ನು ಬಿಡುಗಡೆ ಮಾಡಿದೆ. ಪ್ರತಿ ವರ್ಷ ಇಲ್ಲಿ ನೀಡುತ್ತಿರುವ ಬಡ್ಡಿ ಪ್ರಮಾಣದಲ್ಲಿ ಬದಲಾವಣೆ ಮಾಡಲಾಗುತ್ತಿದೆ.
ಸುಕನ್ಯ ಸಮೃದ್ಧಿ ಯೋಜನೆ
ಹೆಣ್ಣು ಮಕ್ಕಳ ಶಿಕ್ಷಣವನ್ನು ಗಮನದಲ್ಲಿ ಇರಿಸಿಕೊಂಡು ಕೇಂದ್ರ ಸರ್ಕಾರ ಜಾರಿ ಮಾಡಿದ ಯೋಜನೆ ಉತ್ತಮ ಹೂಡಿಕೆ ತಾಣವಾಗಿ ಗುರುತಿಸಿಕೊಂಡಿದೆ.
ಡೆಟ್ ಮ್ಯೂಚುವಲ್ ಫಂಡ್ಸ್
ಡೆಟ್ ಮ್ಯೂಚುವಲ್ ಫಂಡ್ಸ್ ಗಳು ಬ್ಯಾಂಕ್ ಡಿಪೊಸಿಟ್ ಗಳಿಗಿಂತ ಹೆಚ್ಚಿನ ರಿಟರ್ನ್ಸ್ ಒದಗಿಸುತ್ತವೆ. ಷೇರು ಮಾರುಕಟ್ಟೆ ಬಗ್ಗೆ ಸ್ಚಲ್ಪ ಜ್ಞಾನ ಪಡೆದುಕೊಂಡು ಇಲ್ಲಿಗೆ ಕಾಲಿಡುವುದು ಉತ್ತಮ.
ತೆರಿಗೆ ಉಳಿಸುವ ಫಿಕ್ಸೆಡ್ ಡಿಪೊಸಿಟ್
ತೆರಿಗೆ ಉಳಿಸುವ ಫಿಕ್ಸೆಡ್ ಡಿಪೊಸಿಟ್ ಸಹ ಒಳ್ಳೆಯ ತಾಣವಾಗಿದೆ. ಎಲ್ಲ ಯೊಜನೆಗಳು ಮುಗಿದು ಮತ್ತೆ ನೀವು ತೆರಿಗೆ ನೀಡಬೇಕು ಎಂದು ಅನಿಸುತ್ತಿದ್ದಲ್ಲಿ ಇಲ್ಲಿ ಹೂಡಿಕೆ ಮಾಡಿ ವಿನಾಯಿತಿ ಲಾಭ ಪಡೆದುಕೊಳ್ಳಬಹುದು.


Click it and Unblock the Notifications