ದೇಶಾದ್ಯಂತ ಲಕ್ಷಾಂತರ ಕಪಲ್ ಗಳು ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಅವರಿಗೂ ಸಹ ಆದಾಯ ತೆರಿಗೆ ಉಳಿತಾಯದ ಬಗ್ಗೆ ಕೆಲವೊಂದು ಸಲಹೆಗಳು ಅಗತ್ಯವಾಗಿದೆ. ಇಬ್ಬರ ವರಮಾನವನ್ನು ಬೇರೆ ಬೇರೆಯಾಗಿ ಲೆಕ್ಕ ಹಾಕಿ ಅಧಿಕ ತೆರಿಗೆ ತುಂಬುವ ಬದಲು ಹಣ ಉಳಿತಾಯ ಮಾಡುವ ಕ್ರಮವನ್ನು ಇಲ್ಲಿ ನೋಡಬಹುದಾಗಿದೆ.
ತೆರಿಗೆ ವಿನಾಯಿತಿಗೆ ಹಲವಾರು ತಂತ್ರಗಳಿವೆ. ನೂರಾರು ಮಾಧ್ಯಮಗಳು ಸಲಹೆ ನೀಡುತ್ತವೆ. ಅವುಗಳಲ್ಲಿ ಅಳವಡಿಕೆಗೆ ಯೋಗ್ಯವಾದವನ್ನು ರೂಢಿಸಿಕೊಂಡರೆ ಲಾಭ ಪಡೆಯಲು ಸಾಧ್ಯ.[ಹಣ ಉಳಿಬೇಕು ಅಂದ್ರೆ ಕಪಲ್ ಗಳು ಇದನ್ನು ಓದ್ಬೇಕು]

ಹಣ ಬದಲಾವಣೆ
ಹೆಚ್ಚು ವಾರ್ಷಿಕ ವರಮಾನ ಬರಯತ್ತಿರುವವರು ಕಡಿಮೆ ವರಮಾನ ಬರುತ್ತಿರುವವರ ಹಣದೊಂದಿಗೆ ಕ್ಲಬ್ ಮಾಡಿದರೆ ಆದಾಯ ತೆರಿಗೆ ಕಟ್ಟುವ ಶೇಕಡಾವಾರು ಪ್ರಮಾಣದಿಂದ ಮುಕ್ತಿ ಹೊಂದಬಹುದು.
ಒಬ್ಬರು ಆರು ಲಕ್ಷ ರೂ. ವರಮಾನ ಪಡೆದುಕೊಳ್ಳಯತ್ತಿದ್ದಾರೆ ಎಂದು ಇಟ್ಟುಕೊಳ್ಳೋಣ. ಫಿಕ್ಸೆಟ್ ಡಿಫಾಸಿಟ್ ಸೇರಿದಂತೆ ಇನ್ನಿತರ ಮೂಲಗಳಿಂದ 25 ಸಾವಿರ ರೂ. ಬರುತ್ತಿದೆ. ಅಂದರೆ ಒಟ್ಟು 6.25 ಲಕ್ಷ ರು. ಆಯಿತು. ಇಲ್ಲಿ ಮೊದಲ 5 ಲಕ್ಷ ರು ಗೆ ಶೇ.10 ಆದಾಯ ತೆರಿಗೆ ನೀಡಿದರೆ ಉಳಿದ 1.25 ಲಕ್ಷ ರು ಗೆ ಶೇ. 20 ತೆರಿಗೆ ನೀಡಬೇಕಾಗುತ್ತದೆ.[ತೆರಿಗೆ ಮುಕ್ತ ಆದಾಯ ಗಳಿಕೆಗೆ 7 ವಿಧಾನಗಳು]
ನಿಮ್ಮ ಜತೆಗಾರ ಅಥವಾ ಜತೆಗಾರ್ತಿ 4.75 ಲಕ್ಷ ರು ವರಮಾಣ ಪಡೆಯುತ್ತಿದ್ದರೆ 5 ಲಕ್ಷದ ಮೇಲಿನ ಹಣವನ್ನು ಮತ್ತೊಬ್ಬರ ಖಾತೆಗೆ ಸೇರಿಸಿ ಶೇ. 10 ಬಡ್ಡಿ ದರದಲ್ಲಿ ಆದಾಯ ತೆರಿಗೆ ಪಾವತಿ ಮಾಡಿ ಮುಗಿಸಬಹುದು.
ಜಂಟಿಯಾಗಿ ಗೃಹ ಸಾಲ ಪಡೆದುಕೊಳ್ಳಿ
ಜಂಟಿಯಾಗಿ ಗೃಹ ಸಾಲ ಪಡೆದುಕೊಳ್ಳುವುದರಿಂದ ಆದಾಯ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಬಹುದು. ಒಂದು ಲಕ್ಷ ರು. ವರೆಗಿನ ಗೃಹ ಸಾಲಕ್ಕೆ 80 ಸಿ ಅನ್ವಯ ತೆರಿಗೆ ವಿನಾಯಿತಿ ಸಾಧ್ಯವಿದೆ. ನಿಮಗೆ 5 ಲಕ್ಷ ರು, ಗೃಹ ಸಾಲ ಬೇಕಯ ಅಂಥಾದರೆ ಜಾಯಿಂಟ್ ಖಾತೆ ಮೂಲಕ ಇಬ್ಬರೂ 2.5 ಲಕ್ಷ ರು. ಪಡೆದುಕೊಳ್ಳಬಹುದು.
ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದರೆ
ಬಾಡಿಗೆಯನ್ನು ಇಬ್ಬರು ಹಂಚಿಕೊಂಡು ತುಂಬಬೇಕು. ಇದರಿಂದ ಇಬ್ಬರೂ ಮನೆ ಬಾಡಿಗೆ ಸಂಬಂಧಿತ ಆದಾಯ ತೆರಿಗೆ ಕಾನೂನು 80 ಸಿ ಅನ್ವಯ ತೆರಿಗೆ ವಿನಾಯಿತಿ ಲಾಭ ಪಡೆದುಕೊಳ್ಳಬಹುದು .
ಪ್ರವಾಸ ಭತ್ಯೆ
ಪ್ರವಾಶ ಭತ್ಯೆ ಸಹ ತೆರಿಗೆ ವಿನಾಯಿತಿಯನ್ನು ನೀಡುತ್ತದೆ. ಆದರೆ ಇದಕ್ಕೆ ಕೆಲ ನಿಯಮಗಳಿದ್ದು ನಾಲ್ಕು ವರ್ಷದಲ್ಲಿ ಕನಿಷ್ಠ ಎರಡು ಪ್ರವಾಸವನ್ನಾದರೂ ಕೈಗೊಳ್ಳಬೇಕು ಎಂದು ಹೇಳಲಾಗಿದೆ. ಇಲ್ಲಿ ಪ್ರಾಮಾಣಿಕತೆ ಬಹಳ ಮುಖ್ಯ ಸುಳ್ಳು ಲೆಕ್ಕ ನೀಡಲು ಹೋದರೆ ಸಿಕ್ಕಿಹಾಕಿಕೊಳ್ಳಬೇಕಾದೀತು. ನೀವು ಮತ್ತು ನಿಮ್ಮ ಸಂಗಾತಿ ಇಬ್ಬರೂ ಒಂದೇ ದಿನಾಂಕದಲ್ಲಿ ಪ್ರವಾಸ ಮಾಡಿರಬೇಕು.
ಕೊನೆ ಮಾತು
ವಿವಿಧ ಬಗೆಯ ಹೂಡಕೆ, ವಿಮಾ ಪಾಲಿಸಗಳು ಸೇರಿದಂತೆ ಅನೇಕ ವಿಧಾನಗಳ ಮೂಲಕ ತೆರಿಗೆ ವಿನಾಯಿತಿ ಪಡೆದುಕೊಳ್ಳಬಹುದು. ಈ ಬಗೆಯ ಹಂಚಿಕೆಯಿಂದಲೂ ಹಣ ಉಳಿತಾಯ ಮಾಡಿಕೊಳ್ಳಬಹುದು. ಮಾರ್ಗ ಸರಿ ದಾರಿಯಲ್ಲಿ ಇರುವುದು ಮುಖ್ಯ.(ಗುಡ್ ರಿಟರ್ನ್ಸ್ .ಇನ್)


Click it and Unblock the Notifications