ಚಿನ್ನಕ್ಕೆ ಯಾವಾಗಲೂ ಬೆಲೆಯಿದೆ. ಚಿನ್ನವನ್ನು ಕೇವಲ ಆಭರಣದ ಅಂಗಡಿಯಲ್ಲಿ ಮಾತ್ರ ಕೊಳ್ಳಬೇಕು ಅಂಥ ಏನಿಲ್ಲ. ಪ್ಯೂಚರ್ ಮಾರರ್ಕೆಟ್ ನಲ್ಲೂ ಬಂಗಾರ ಖರೀದಿ ಈಗ ಸಾಧ್ಯವಿದೆ.
ಕಡಿಮೆ ಅವಧಿ ಅಥವಾ ಮಧ್ಯಮಾವಧಿ ಬಂಡವಾಳ ಹೂಡಿಕೆ ಆಲೋಚನೆ ನಿಮಗಿದ್ದರೆ ಈ ಬಗೆಯಲ್ಲಿ ಚಿನ್ನ ಖರೀದಿ ಮಾಡುವುದು ಉತ್ತಮ. ನಾವು ಹೇಳಹೊರಟಿರುವುದು ಚಿನ್ನದ ಪತ್ರಗಳ ಬಗ್ಗೆ ಎಂಬುದು ನಿಮ್ಮ ಗಮನದಲ್ಲಿ ಇರಲಿ.
ಆಭರಣ ಅಥವಾ ಶುದ್ಧ ಚಿನ್ನ ಖರೀದಿ ಮಾಡುವುದಕ್ಕಿಂತ ಈ ಬಗೆಯ ಹೂಡಿಕೆ ಮಾಡುವುದು ಒಳ್ಳೆಯದು ಎಂಬುದಕ್ಕೆ ಉತ್ತರ ಇಲ್ಲಿದೆ. ಇಲ್ಲಿ ಕಳ್ಳತನವಾಗುತ್ತದೆ ಎಂಬ ಆತಂಕವೂ ನಿಮಗಿರಲ್ಲ.[ಭಾರತದ ಚಿನ್ನದ ದರ ಬದಲಾವಣೆ ಹಿಂದಿನ ರಹಸ್ಯವೇನು?]

ಪ್ಯೂಚರ್ ಮಾರ್ಕೆಟ್ ನಿಂದ ಚಿನ್ನ ಖರೀದಿ ಹೇಗೆ?
ಇದು ಮಾರುಕಟ್ಟೆಯಿಂದ ಷೇರು ಖರೀದಿ ಮಾಡಿದಂತೆಯೇ. ನೀವು ಬ್ರೋಕರ್ ಒಬ್ಬರ ಮೂಲಕ ಖಾತೆ ತೆರೆಯಬೇಕಾಗುತ್ತದೆ. ನಂತರ ಕಮೊಡಿಟಿ ಮಾರುಕಟ್ಟೆಯಲ್ಲಿ ವಹಿವಾಟು ಆರಂಭ ಮಾಡಬೇಕಾಗುತ್ತದೆ.
ಒಮ್ಮೆ ನಿಮ್ಮ ಖಾತೆ ತೆರೆದರೆ ನಂತರ ನೀವು ವಿವಿಧ ಬಗೆಯ ಚಿನ್ನದ ಪತ್ರಗಳನ್ನು ಖರೀದಿ ಮಾಡಬಹುದು. ಗೋಲ್ಡ್ ಪೆಟಲ್ ಸೇರಿದಂತೆ ವಿವಿಧ ನಮೂನೆಯನ್ನು ಖರೀದಿ ಮಾಡಲು ಸಾಧ್ಯವಿದೆ. ಎಂಸಿಎಕ್ಸ್ ಮೂಲಕ ನೀವು ಖರೀದಿ ಮಾಡಬೇಕಾಗುತ್ತದೆ. ಬಹಳಷ್ಟು ಚಿನ್ನದ ಪತ್ರಗಳಿಗೆ ಮೂರು ತಿಂಗಳ ಅವಧಿ ಇರುತ್ತದೆ. ದಿನಾಂಕ ಮುಗಿಯುವುದರ ಒಳಗೆ ನೀವೊಂದು ಸ್ಪಷ್ಟ ತೀರ್ಮಾನ ಕೈಗೊಂಡಿರಬೇಕಾಗುತ್ತದೆ.[ಚಿನ್ನದ ಮೇಲಿನ ಹೂಡಿಕೆ ನಿಜಕ್ಕೂ ಲಾಭದಾಯಕವೇ?]
ವಿವಿಧ ನಗರಗಳ ಚಿನ್ನದ ದರ ಪರಿಶೀಲಿಸಿ
ಪ್ಯೂಚರ್ ಮಾರುಕಟ್ಟೆಯಲ್ಲಿ ಚಿನ್ನ ಖರೀದಿ ಲಾಭಗಳು
* ಕಳ್ಳತನದ ಅಪಾಯವಿಲ್ಲ
* ಇದನ್ನು ಎಲೆಕ್ಟ್ರಾನಿಕ್ ತಂತ್ರಜ್ಞಾನದ ಮೂಲಕ ಸುರಕ್ಷಾ ತಂತ್ರ ಅಳವಡಿಸಿ ಕಾಪಾಡಲಾಗಿರುತ್ತದೆ.
* ಚಿನ್ನದ ದರ ಏರಿಕೆಯಾದಂತೆ ಇದರ ಬೆಲೆಯೂ ಹೆಚ್ಚಳವಾಗುವುದು.
* ಲಾಕರ್ ಚಾರ್ಜ್ ನೀಡಬೇಕು ಎಂಬ ತಾಪತ್ರಯವಿಲ್ಲ.
* ದರದಲ್ಲಿ ಪಾರದರ್ಶಕತೆ ಇದ್ದು ಚಿನ್ನದ ಮಾರುಕಟ್ಟೆಗೆ ಅನುಗುಣವಾಗಿ ಸಾಗುವುದು.
* ಬೇರೆ ಬೇರೆ ಚಿನ್ನದ ಅಂಗಡಿಗಳಲ್ಲಿ ಇರುವ ದರದ ವ್ಯತ್ಯಾಸದ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾದ ಅಗತ್ಯ ಬೀಳುವುದಿಲ್ಲ.
ಕೊನೆ ಮಾತು:
ಪ್ಯೂಚರ ಮಾರ್ಕೆಟ್ ನಲ್ಲಿ ಚಿನ್ನ ಖರೀದಿ ಕೆಲವೊಂದು ಅವಗುಣವನ್ನು ಹೊಂದಿದೆ. ನೀವು ಮೂರು ತಿಂಗಳ ಅವಧಿಗೆ ಹೂಡಿಕೆ ಮಾಡಲು ಸಿದ್ಧರಿರಬೇಕಾಗುತ್ತದೆ. ದೀರ್ಘಕಾಲದ ಹೂಡಿಕೆ ಇಲ್ಲಿ ಸಾಧ್ಯವಿಲ್ಲದ ಮಾತು.(ಗುಡ್ ರಿಟರ್ನ್ಸ್.ಇನ್)


Click it and Unblock the Notifications