ರಾಷ್ಟ್ರೀಯ ಪಿಂಚಣಿ ಯೋಜನೆ(ಎನ್ ಪಿಎಸ್) ಮತ್ತು ಅಟಲ್ ಪಿಂಚಣಿ ಯೋಜನೆಗಳು ದೇಶದ ನಾಗರಿಕರಿಗೆ ನಿವೃತ್ತಿ ನಂತರದ ಭದ್ರತೆ ಒದಗಿಸುತ್ತಿವೆ. ಎರಡೂ ಯೋಜನೆಗಳು ಪಿಂಚಣಿಗೆ ಸಂಬಂಧಿಸಿದ್ದೇ ಆದರೂ ಅನೇಕ ವ್ಯತ್ಯಾಸಗಳನ್ನು ಒಳಗೊಂಡಿದೆ.
ಕೇಂದ್ರ ಸರ್ಕಾರ ಅಟಲ್ ಪಿಂಚಣಿ ಯೋಜನೆಯನ್ನು ಹೊಸದಾಗಿ ಜಾರಿಮಾಡಿದ್ದರೆ, ಹಳೆಯ ರಾಷ್ಟ್ರೀಯ ಪಿಂಚಣಿ ಯೋಜನೆಗೆ ಮತ್ತಷ್ಟು ಬಲ ತುಂಬಿದೆ. ಈ ಎರಡು ಯೋಜನೆಗಳ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳುವುದು ಅಗತ್ಯ.[ಅಟಲ್ ಪಿಂಚಣಿ ಯೋಜನೆ ಮಾಡಿಸುವುದು ಹೇಗೆ?]
ವ್ಯತ್ಯಾಸ
ಅಟಲ್ ಪಿಂಚಣಿ ಯೋಜನೆ
ರಾಷ್ಟ್ರೀಯ ಪಿಂಚಣಿ ಯೋಜನೆ
ಅವಧಿ
18 ರಿಂ 40 ವರ್ಷ
18 ರಿಂದ 55ವರ್ಷ
ಯಾರು ಮಾಡಿಸಬಹುದು?
ಭಾರತದ ನಾಗರಿಕ
ಭಾರತದ ನಾಗರಿಕ ಮತ್ತು ಎನ್ ಆರ್ ಐ
ಪಿಂಚಣಿ
ನಿವೃತ್ತಿ ನಂತರ ನಿರ್ದಿಷ್ಟ ಮೊತ್ತದ ಹಣ
ನಿವೃತ್ತಿ ನಂತರ ಹಣವಿಲ್ಲ
ತೆರಿಗೆ ವಿನಾಯಿತಿ
ತೆರಿಗೆ ವಿನಾಯಿತಿ ಇಲ್ಲ
2 ಲಕ್ಷ ರು ವರೆಗೆ ತೆರಿಗೆ ವಿನಾಯಿತಿ ಇದೆ
ಎಲ್ಲಿ ಖಾತೆ ತೆರೆಯಬೇಕು?
ನಿಮ್ಮ ಉಳಿತಾಯ ಖಾತೆ ಇದ್ದ್ ಬ್ಯಾಂಕ್ ನಲ್ಲಿ ಸುಲಭವಾಗಿ ತೆರೆಯಬಹುದು
ನಿಮ್ಮ ಹಾಜರಿಯಲ್ಲೇ ಖಾತೆ ತೆಗೆದು ಯೋಜನೆ ಮಾಡಿಸಬೇಕು
ಯಾರಿಗಾಗಿ?
ಅಸಂಘಟಿತ ವಲಯ
ಸಂಘಟಿತ ವಲಯ
ಅವಧಿಗೆ ಮುನ್ನ ವಿಥ್ ಡ್ರಾ
ಇಲ್ಲ(ಸಾವು ಮತ್ತು ಕೆಲ ಗಂಭೀರ ಸಂದರ್ಭ ಹೊರತುಪಡಿಸಿ)
ಟೈರ್ II ಖಾತೆಗೆ ಮಾತ್ರ ಮೊದಲೇ ಹಣ ವಿಥ್ ಡ್ರಾ ಮಾಡಲು ಅವಕಾಶವಿದೆ
ಹೂಡಿಕೆ ಆಯ್ಕೆ
ನಿಮಗೆ ಯಾವುದೇ ಹೂಡಕೆ ಆಯ್ಕೆ ನೀಡಲಾಗುವುದಿಲ್ಲ
ನಿಮ್ಮ ಹಣವನ್ನು ಎಲ್ಲಿ ಹೂಡಿಕೆ ಮಾಡಬಹುದು ಎಂದು ನಿರ್ದೇಶನ ನೀಡಬಹುದು