ಉಚಿತವಾಗಿ ಡಿಜಿಟಲ್ ಲಾಕರ್ ತೆರೆಯುವುದು ಹೇಗೆ?

ಡಿಜಿಟಲ್ ಲಾಕರ್ ಎಂದರೆ ನಿಮ್ಮ ಎಲ್ಲ ಎಲೆಕ್ಟ್ರಾನಿಕ್ ದಾಖಲೆಗಳನ್ನು ಸುರಕ್ಷಿತವಾಗಿ ಕಾಪಿಡುವ ಸ್ಥಳ. ಆಧಾರ್ ಕಾರ್ಡ್ ಅಂಕೆಯೊಂದಿಗೆ ಇದನ್ನು ಲಿಂಕ್ ಮಾಡಲಾಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಕನಸಿನ ಡಿಜಿಟಲ್ ಇಂಡಿಯಾ ಅಭಿಯಾನ ನಿಮಗೆ ಈ ಅವಕಾಶವನ್ನು ಕಲ್ಪಿಸಿಕೊಡುತ್ತಿದೆ.

ನಿಮ್ಮ ಪ್ಯಾನ್ ಕಾರ್ಡ್, ಮತದಾನ ಗುರುತಿನ ಪತ್ರ, ಸರ್ಕಾರಗಳು ಕೊಡಮಾಡಿದ ದಾಖಲೆಗಳು, ಪಾಸ್ ಪೋರ್ಟ್, ಜನ್ಮ ದಾಖಲೆ, ಮದುವೆ ದಾಖಲೆ ಎಲ್ಲವನ್ನು ಇಲ್ಲಿ ಸಂರಕ್ಷಿಸಿ ಇಡಲು ಸಾಧ್ಯವಿದೆ.[ಡಿಜಿಟಲ್ ಇಂಡಿಯಾ ಎಂದರೇನು?]

ಉಚಿತವಾಗಿ ಡಿಜಿಟಲ್ ಲಾಕರ್ ತೆರೆಯುವುದು ಹೇಗೆ?

ಡಿಜಿ ಲಾಕರ್ ನಲ್ಲಿ ದಾಖಲೆ ಇಟ್ಟರೆ ಏನು ಲಾಭ?
* ನಿಮ್ಮ ದಾಖಲೆಗಳ ಅನವಶ್ಯಕ ಉಪಯೋಗ ತಡೆದು ಸವಕಳಿ ಆಗದಂತೆ ಮಾಡುತ್ತದೆ.
* ನಿಮ್ಮ ದಾಖಲೆಗಳ ನಕಲಿ ಬಳಕೆ ಮಾಡಲು ಅವಕಾಶ ಇರುವುದಿಲ್ಲ.
* ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ದಾಖಲೆಗಳನ್ನು ಪಡೆದುಕೊಳ್ಳಬಹುದು
* 10 ಎಂಬಿ ಡಾಟಾ ಅವಕಾಶ ನಿಮ್ಮ ಬಳಿ ಇರುತ್ತದೆ
* ದಾಖಲೆಗಳನ್ನು ಸುರಕ್ಷಿತ ಮಾರ್ಗದಲ್ಲಿ ಹಂಚಿಕೆ ಮಾಡಬಹುದು

ಡಿಜಿ ಲಾಕರ್ ತೆರೆಯುವುದು ಹೇಗೆ?
ಆಧಾರ್ ಕಾರ್ಡ್ ಹೊಂದಿರುವ ವ್ಯಕ್ತಿ ಡಿಜಿಟಲ್ ಲಾಕರ್ ಗೆ ಲಾಗ್ ಇನ್ ಆಗಬಹುದು. ಲಾಗ್ ಇನ್ ಆಗುವ ಮೊದಲು ನಿಮ್ಮ ಮೊಬೈಲ್ ಸಂಖ್ಯೆ ಆಧಾರ್ ಸಂಖ್ಯೆಯೊಂದಿಗೆ ಲಾಗ್ ಇನ್ ಆಗಿರಬೇಕು.[ಎಟಿಎಂ ಕಾರ್ಡ್ ಸಿಕ್ಕಿಹಾಕಿಕೊಂಡ್ರೆ ಏನು ಮಾಡೋದು?]
ಹಂತ 1
* ಡಿಜಿಟಲ್ ಲಾಕರ್ ತಾಣಕ್ಕೆ ಭೇಟಿ ನೀಡಿ
* ನಿಮ್ಮ 12 ಡಿಜಿಟ್ ನ ಆಧಾರ್ ಸಂಖ್ಯೆ ನಮೂದಿಸಿ
* ಒಟಿಪಿ ಅತವಾ ಫಿಂಗರ್ ಪ್ರಿಂಟ್ ಬಳಸಿ ಮುಂದಕ್ಕೆ ಸಾಗಬಹುದು

ಒಟಿಪಿ ಆಯ್ಕೆ
* ನೀವು ಆಧಾರ್ ಕಾರ್ಡ್ ನೊಂದಿಗೆ ಲಿಂಕ್ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿ ಬಂದಿರುತ್ತದೆ.
* ಒಟಿಪಿ ಬಟನ್ ಕ್ಲಿಕ್ ಮಾಡಿ
* ಯುಸರ್ ನೇಮ್ ಮತ್ತು ಪಾಸ್ ವರ್ಡ್ ಕ್ರಿಯೆಟ್ ಮಾಡಿಕೊಳ್ಳಿ

ಫಿಂಗರ್ ಪ್ರಿಂಟ್ ಆಯ್ಕೆ
ಇದು ಸ್ಕ್ಯಾನ್ ಮಾಡಿರುವ ಫಿಂಗರ್ ಪ್ರಿಂಟ್ ನ್ನು ಕೇಳುತ್ತದೆ. ಫಿಂಗರ್ ಪ್ರಿಂಟ್ ಬಟನ್ ಮೇಲೆ ಕ್ಲಿಕ್ ಮಾಡಿದಾಗ ಮೊಬೈಲ್ ಅಂಕೆ ಬದಲು ಆಧಾರ್ ಸಂಖ್ಯೆಯನ್ನು ನಮೂದು ಮಾಡಬೇಕಾಗುತ್ತದೆ. ಆಧಾರ್ ನೊಂದಿಗೆ ಮೊಬೈಲ್ ಸಂಖ್ಯೆ ಲಿಂಕ್ ಆಗದಿದ್ದ ಸಂದರ್ಭದಲ್ಲಿ ಇದು ನೆರವಿಗೆ ಬರುತ್ತದೆ.

ಫಿಂಗರ್ ಪ್ರಿಂಟ್ ಸ್ಕ್ಯಾನರ್ ನ ಮೂಲಕ ದಾಖಲೆ ಮಾಡಿ ಸಲ್ಲಿಸಬೇಕಾಗುತ್ತದೆ. ಒಮ್ಮೆ ಹೊಂದಾಣಿಕೆ ಆದ ನಂತರದಲ್ಲಿ ನಿಮ್ಮ ಖಾತೆ ತೆರೆದುಕೊಳ್ಳಬಹುದು.

ಹಂತ 2: ಯುಸರ್ ಐಡಿ
* ಯುಸರ್ ನೇಮ್ ಮತ್ತು ಪಾಸ್ ವರ್ಡ್ ಕ್ರಿಯೆಟ್ ಮಾಡಿಕೊಳ್ಳಿ
* ನಿಮ್ಮ ಪಾಸ್ ವರ್ಡ್ ಮತ್ತು ಯುಸರ್ ನೇಮ್ ದಾಖಲು ಮಾಡಿ
* ಸಬ್ ಮಿಟ್ ಬಟನ್ ಆಯ್ಕೆ ಒತ್ತಿ
* ಮೈ ಸರ್ಟಿಫಿಕೇಟ್ ಆಯ್ಕೆ ತೆರೆದುಕೊಳ್ಳುತ್ತದೆ

ಹಂತ 3: ಸೈನ್ ಇನ್
* ಸೈನ್ ಇನ್ ಮೇಲೆ ಕ್ಲಿಕ್ ಮಾಡಿ
* https://digitallocker.gov.in ಗೆ ತೆರಳಿ
* ವಿಂಡೋದ ಮೇಲೆ ಕಂಡುಬರುವ ಸೈನ್ ಇನ್ ಆಯ್ಕೆ ಬಳಸಿಕೊಳ್ಳಿ
* ಇಲ್ಲಿ ಮೂರು ವಿಧಾನದ ಮೂಲಕ ಲಾಗ್ ಇನ್ ಆಗಬಹುದು
* ಆಧಾರ್ ನಂಬರ್ ಮತ್ತು ಒಟಿಪಿ
* ಯುಸರ್ ನೇಮ್ ಮತ್ತು ಪಾಸ್ ವರ್ಡ್(ಖಾತೆ ತೆರೆಯುವಾಗ ನೀಡಿದ್ದು)
* ಗೂಗಲ್ ಅಥವಾ ಫೇಸ್ ಬುಕ್ ಐಡಿ ಮೂಲಕ ಲಾಗ್ ಇನ್

ದಾಖಲೆಗಳನ್ನು ಡಿಜಿ ಲಾಕರ್ ಗೆ ಅಪ್ ಲೋಡ್ ಮಾಡುವುದು ಹೇಗೆ?
ಮೈ ಸರ್ಟಿಫಿಕೇಟ್ ಆಯ್ಕೆ ಮೇಲೆ ಕ್ಲಿಕ್ ಮಾಡಿದ ನಂತರ ಅಪ್ ಲೋಡ್ ಡಾಕ್ಯೂಮೆಂಟ್ಸ್ ಆಯ್ಕೆ ದೊರೆಯುತ್ತದೆ. ಒಂದು ಸಮಯಕ್ಕೆ ಒಂದು ದಾಖಲೆ ಅಪ್ ಲೋಡ್ ಮಾಡಲು ಮಾತ್ರ ಸಾಧ್ಯವಿದೆ.
* ನೀವು ಸಲ್ಲಿಸುತ್ತಿರುವ ಡಾಕ್ಯೂಮೆಂಟ್ ನ ಬಗೆಯನ್ನು ಆಯ್ಕೆ ಮಾಡಿಕೊಳ್ಳಿ
* ಲೊಕೇಶನ್ ಮತ್ತ ಫೈಲ್ ಸೆಲೆಕ್ಟ್ ಮಾಡಿ
* ದಾಖಲಾತಿಗೆ ಸಂಬಂಧಿಸಿದ ಚಿಕ್ಕ ಮಾಹಿತಿಯನ್ನು ದಾಖಲು ಮಾಡಿ
* ಎಲ್ಲ ದಾಖಲೆಗಳ ಸಲ್ಲಿಕೆಯಾದ ನಂತರ ಅಪಲೋಡ್ ಬಟನ್ ಕ್ಲಿಕ್ ಮಾಡಿ

ಕೊನೆ ಮಾತು
ಹೊಸ ವಿಧಾನ ಬಹುಪಯೋಗಿಯಾಗಿದ್ದು ಇ ಆಡಳಿತ ಮತ್ತು ಸುಲಭ ದಾಖಲೆ ವೀಕ್ಷಣೆಗೆ ಸಹಾಯಕಾರಿಯಾಗಿದೆ. (ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+