For Quick Alerts
ALLOW NOTIFICATIONS  
For Daily Alerts

ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿ ಏಕೆ?

|

ಆಧುನಿಕತೆ ಬೆಳೆದಂತೆ ಬ್ಯಾಂಕ್ ಗಳು ಅದನ್ನುಅಳವಡಿಸಿಕೊಂಡೆ ಮುಂದೆ ಸಾಗುತ್ತಿವೆ. ಅದರಲ್ಲಿ ಖಾತೆಯೊಂದಿಗೆ ಮೊಬೈಲಪ್ ಸಂಖ್ಯೆ ನೋಂದಣಿಯೂ ಒಂದು. ಮೊಬೈಲ್ ನಂಬರ್ ನ್ನು ಬ್ಯಾಂಕ್ ಖಾತೆಯೊಂದಿಗೆ ನೋಂದಣಿ ಮಾಡಿಕೊಂಡಿದ್ದರೆ ಪ್ರತಿಯೊಂದು ಟ್ರಾನ್ಸಾಕ್ಷನ್ ನಂತರ ಮಾಹಿತಿ ಪಡೆಯುತ್ತಲಿರಬಹುದು.

 

ನಿಮ್ಮ ಹಣಕಾಸು ವ್ಯವಹಾರ ದಿಕ್ಕು ತಪ್ಪದಂತೆ ನೋಡಿಕೊಳ್ಳಲು, ಅನಗತ್ಯ ಖರ್ಚು ವೆಚ್ಚಗಳಿಗೆ ತಡೆ ಹಾಕಲು ಈ ಮೊಬೈಲ್ ಸಂಖ್ಯೆ ನೋಂದಣಿ ಕಾರಣವಾಗಬಲ್ಲದು.[ಬದಲಾದ ಕಾಲದಲ್ಲಿ ಪ್ಯಾನ್ ಕಾರ್ಡ್ ಎಲ್ಲೆಲ್ಲಿ ಅಗತ್ಯ?]

 

ಬ್ಯಾಂಕ್ ಖಾತೆಯೊಂದಿಗೆ ಮೊಬೈಲ್ ಸಂಖ್ಯೆ ನೋಂದಣಿ ಏಕೆ?

ನಿಮ್ಮ ಮೊಬೈಲ್ ಸಂಖ್ಯೆ ಯಾಕೆ ನೋಂದಣಿ ಮಾಡಬೇಕು?

* ಎಲ್ಲ ಟ್ರಾನ್ಸಾಕ್ಷನ್ ಮಾಹಿತಿ
ನಿಮ್ಮ ಬ್ಯಾಂಕ್ ಖಾತೆಯ ಹಣ ರವಾನೆಯ ಎಲ್ಲ ಮಾಹಿತಿಯನ್ನು ಪಡೆದುಕೊಳ್ಳಬಹುದು. ರಿಟೈಲ್ ಅಂಗಡಿಯನಲ್ಲಿ ವಸ್ತು ಖರೀದಿಸಿದ್ದರೆ, ಶಾಪಿಂಗ್ ಮಾಡಿದ್ದರೆ ಅಥವಾ ಎಟಿಎಂ ಮೂಲಕ ಹಣ ಡ್ರಾ ಮಾಡಿದರೆ ಎಲ್ಲ ಮೆಸೇಜ್ ಗಳು ಮೊಬೈಲ್ ಗೆ ಬರುತ್ತದೆ.

ಆನ್ ಲೈನ್ ಹಣ ರವಾನೆ
ಆದಾಯ ತೆರಿಗೆ ಇಲಾಖೆ ಅಥವಾ ಆಧಾರ್ ನಿಮ್ಮ ಖಾತೆಗೆ ಸಂಬಂಧಿಸಿದ ಬದಲಾವಣೆ ಮಾಡಿಕೊಳ್ಳಬೇಕಾದರೆ ಮೊಬೈಲ್ ನಂಬರ್ ಮೂಲಕವೇ ನೋಟಿಫಿಕೇಶನ್ ಗಳನ್ನು ಕಳಿಸುತ್ತದೆ. ಕೆಲವೊಮ್ಮೆ ಒನ್ ಟೈಮ್ ಪಾಸ್ ವರ್ಡ್ ಗಳನ್ನು (ಒಟಿಪಿ)ಯನ್ನು ಪಡೆದುಕೊಳ್ಳಲು ಮೊಬೈಲ್ ಸಂಖ್ಯೆಯೇ ಆಧಾರವಾಗಿರುತ್ತದೆ.[ಪಿಎಫ್ ವಿಥ್ ಡ್ರಾ ಮಾಡುವ ಮುನ್ನ ಆರು ಅಂಶ ತಲೆಯಲ್ಲಿರಲಿ]

* ಡೆಬಿಟ್ ಕಾರ್ಡ್ ಕಳೆದುಕೊಂಡರೆ
ಆಕಸ್ಮಿಕವಾಗಿ ನಿಮ್ಮ ಡೆಬಿಟ್ ಕಾರ್ಡ್ ಕಳೆದುಕೊಂಡರೆ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ. ಮೊಬೈಲ್ ಸಂಖ್ಯೆ ಬ್ಯಾಂಕ್ ಖಾತೆಯೊಂದಿಗೆ ಲಿಂಕ್ ಆಗಿದ್ದರೆ ನಿಮ್ಮ ನೆರವಿಗೆ ಬರುತ್ತದೆ.

ಯಾರಾದರೂ ನೀವು ಕಳೆದುಕೊಂಡ ಕಾರ್ಡ್ ನ್ನು ದುರುಪಯೋಗ ಮಾಡಿಕೊಳ್ಳಲು ಬಯಸಿದರೆನಿಮ್ಮ ಮೊಬೈಲ್ ಗೆ ಸಂದೇಶ ಬರುತ್ತದೆ. ತಕ್ಷಣ ನಿಮ್ಮ ಬ್ಯಾಂಕ್ ನ್ನು ಸಂಪರ್ಕ ಮಾಡಿ ಖಾತೆಯನ್ನು ಬ್ಲಾಕ್ ಮಾಡುವಂತೆ ತಿಳಿಸಬಹುದು.

* ಎಸ್ ಎಂಎಎಸ್ ಸೇವೆ
ನಿಮ್ಮ ಬ್ಯಾಂಕ್ ನ ಕರೆಂಟ್ ಬ್ಯಾಲೆನ್ಸ್ ಮತ್ತು ಇತರ ಯೋಜನೆಗಳ ಕುರಿತು ಬ್ಯಾಂಕ್ ಆಗಾಗ ನಿಮಗೆ ಸಂದೇಶಗಳನ್ನು ರವಾನೆ ಮಾಡುತ್ತಲಿರುತ್ತದೆ.

* ಸಾಲ ಮರುಪಾವತಿ ನೆನಪು
ನಿಮ್ಮ ಅಕೌಂಟ್ ನ ಕ್ರೆಡಿಡ್ ಹಿಸ್ಟರಿಯನ್ನು ಕಾಪಾಡಲು ಮೊಬೈಲ್ ಸಂಖ್ಯೆ ನೆರವು ನೀಡುತ್ತದೆ. ಸಾಲ ಮರುಪಾವತಿ ಮಾಡುವುದಿದ್ದರೆ ಅದನ್ನು ಸಂದೇಶ ಕಳಿಸುವ ಮೂಲಕ ನೆನಪಿಸಲಾಗುತ್ತದೆ.

* ಉಳಿದ ಹಣಕಾಸು ವ್ಯವಹಾರಗಳು
ಎಚ್ ಡಿಎಫ್ ಸಿಯಂತಹ ಬ್ಯಾಂಕ್ ಗಳು ಟೋಲ್ ಫ್ರೀ ನಂಬರ್ ಗಳನ್ನು ನೀಡಿರುತ್ತವೆ. ನೀವು ಕರೆ ಮಾಡುವ ಮೂಲಕ ಮಿಸಿ ಸ್ಟೇಟ್ ಮೆಂಟ್, ಖಾತೆ ವಿವರಗಳನ್ನು ಪಡೆದುಕೊಳ್ಳಬಹದುದು.

* ಮೊಬೈಲ್ ಸಂಖ್ಯೆ ಬದಲಾವಣೆ
ನಿಮ್ಮ ಮೊಬೈಲ್ ಸಂಖ್ಯೆಯನ್ನು ಬದಲಾವಣೆ ಮಾಡಿದರೆ ಬ್ಯಾಂಕ್ ಗೆ ತಿಳಿಸುವುದು ಮೊದಲ ಕರ್ತವ್ಯವಾಗುತ್ತದೆ. ಒಂದು ವೇಳೆ ದಾಖಲು ಮಾಡಿಕೊಳ್ಳದಿದ್ದರೆ ಬ್ಯಾಂಕ್ ಕಳಿಸಿಕೊಡುವ ಸಂದೇಶಗಳು ಹಿಂದಿನ ಸಂಖ್ಯೆಗೆ ಹೋಗಿ ನಿಮ್ಮ ವ್ಯವಹಾರಕ್ಕೆ ತೊಂದರೆಯಾಗಿ ಪರಿಣಮಿಸಬಹುದು.

ಕೊನೆ ಮಾತು
ಕೆಲ ಬ್ಯಾಂಕ್ ಗಳು ಮೊಬೈಲ್ ಸಂದೇಶ ರವಾನೆ ಮಾಡುವುದಕ್ಕೆ ನಿರ್ದಿಷ್ಟ ಮೊತ್ತದ ಶುಲ್ಕವನ್ನು ಮುರಿದುಕೊಳ್ಳುತ್ತವೆ. ಶುಲ್ಕ ಮುರಿದುಕೊಂಡರೂ ಸಹ ಈ ಸೇವೆಯನ್ನು ಬಳಸಿಕೊಳ್ಳುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು(ಗುಡ್ ರಿಟರ್ನ್ಸ್.ಇನ್).

English summary

7 Reasons To Register Your Mobile Number With Your Bank

With each banking transaction, we come across things like SMS notice, a One Time Password (OTP) or verification code on our mobile. It thus becomes imperative to register your mobile number with all of your bank accounts so that your financial transaction are done smoothly.Here are 7 reasons to register your mobile number.
Company Search
COVID-19
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X