ಆಧಾರ್ ನಂಬರ್ ಹೊಂದಿರುವವರು ಇ ಕೆವೈಸಿ(ನೌ ಯುವರ್ ಕಸ್ಟಮರ್) ಬಗ್ಗೆ ತಿಳಿದುಕೊಂಡಿರಬೇಕಾಗುತ್ತದೆ. ಆಧಾರ್ ಕಾರ್ಡ್ ನಂಬರ್ ಹೊಂದಿರುವವರಿಗೆ ಈ ಸಂಖ್ಯೆಯನ್ನು ನೀಡಲಾಗಿರುತ್ತದೆ.
ಹಾಗಾದರೆ ಎಲ್ಲಿ ಇದನ್ನು ಬಳಕೆ ಮಾಡಿಕೊಳ್ಳಬಹುದು? ಲಾಭಗಳೇನು? ಇದಕ್ಕಿಂತ ಸರಳ ಮಾರ್ಗ ಮತ್ತೊಂದು ಇಲ್ಲವೆ? ಎಂಬುದನ್ನು ನೋಡಿಕೊಂಡು ಬರೋಣ. ನಿಮ್ಮ ಅಡ್ರೆಸ್ ಪ್ರೂಪ್, ಐಡಿ ಗಳನ್ನು ಬ್ಯಾಂಕ್ ಖಾತೆ ತೆರೆಯುವಾಗ ಇಲ್ಲವೇ ಮ್ಯೂಚುವಲ್ ಫಂಡ್ ಖಾತೆ ತೆರೆಯುವಾಗ ನೀಡಬೇಕಾಗುತ್ತದೆ. ಯುಐಡಿಎಐ ಆಧಾರದಲ್ಲಿ ಇದನ್ನು ನೀಡಲಾಗಿರುತ್ತದೆ.

ಹೇಗೆ ಕೆಲಸ ಮಾಡುತ್ತದೆ?
ಯಾವುದೇ ಸಂಸ್ಥೆಯ ಸೌಲಭ್ಯ ಪಡೆದುಕೊಳ್ಳಲು ಯುನಿಕ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾ(ಯುಐಎಡಿಐ)ದ ಮಾನ್ಯತೆಯನ್ನು ಕಾರ್ಡ್ ಹೊಂದಿರಬೇಕಾಗುತ್ತದೆ.
ಬಯೋಮೆಟ್ರಿಕ್ ಆಧಾರದಲ್ಲಿ ಇದು ಕೆಲಸ ಮಾಡುತ್ತದೆ. ಆಧಾರ್ ಕಾರ್ಡ್ ಮತ್ತು ವಿಳಾಸ ದೃಢೀಕರಣದಲ್ಲಿ ಲಿಂಗ, ವಿಳಾಸ, ವಯಸ್ಸು ಎಲ್ಲವೂ ಹೊಂದಾಣಿಕೆಯಾಗಬೇಕಾಗುತ್ತದೆ.
ನೀವು ನೋಂದಣಿ ಮಾಡಿರುವ ಮೊಬೈಲ್ ಸಂಖ್ಯೆಗೆ ಒಟಿಪಿಯೊಂದನ್ನು ಕಳುಹಿಸಿಕೊಡಲಾಗುತ್ತದೆ. ಅದರ ಮೂಲಕವೇ ದೃಢೀಕರಣ ಮಾಡಿಕೊಳ್ಳಬೇಕಾಗುತ್ತದೆ. ಆನ್ ಲೈನ್ ಮುಖಾಂತರ ಡೌನ್ ಲೋಡ್ ಮಾಡಿಕೊಂಡ ಆಧಾರ್ ಕಾರ್ಡ್ ಗಳನ್ನು ಸಹ ಬ್ಯಾಂಕ್ ಗಳು ಸ್ವೀಕಾರ ಮಾಡುತ್ತವೆ.
ಆಧಾರ್ ಇ ಕೆವೈಸಿಯನ್ನು ಎಲ್ಲಿ ಬಳಸಬಹುದು
* ಮಾನ್ಯತೆ ಪಡೆದ ಷೇರು ವ್ಯವಹಾರದ ಸಂಸ್ಥೆಗಳು
* ಬ್ಯಾಂಕ್ ಗಳು
* ಷೇರು ದಲ್ಲಾಳಿಗಳಲ್ಲಿ
* ಮ್ಯೂಚುವಲ್ ಫಂಡ್ ಸಂಸ್ಥೆಗಳು
* ಎಎಮ್ ಎಫ್ ಐ ಮೂಲಕ ದೊರೆಯುವ ಮ್ಯೂಚುವಲ್ ಫಂಡ್
* ಕೆವೈಸಿ ನೋಂದಣಿ ಏಜೆನ್ಸಿಗಳು(ಗುಡ್ ರಿಟರ್ನ್ಸ್.ಇನ್)


Click it and Unblock the Notifications