ಒಳ್ಳೆ ಸಾಲ-ಕೆಟ್ಟ ಸಾಲ: ನಡುವಿನ ವ್ಯತ್ಯಾಸ ತಿಳ್ಕೊಳ್ಳಿ

ಸಾಲ ಪಡೆದುಕೊಳ್ಳುವುದು ಇಂದು ಕಷ್ಟದ ಕೆಲಸವಾಗಿ ಉಳಿದಿಲ್ಲ. ಕೆಲವೊಂದು ಬ್ಯಾಂಕ್ ಗಳು ಮನೆ ಬಾಗಿಲಿಗೇ ಆಗಮಿಸಿ ಸಾಲ ನೀಡುತ್ತಿವೆ. ಅಂತೇಯೇ ಸಾಲವಿಲ್ಲದ ಜೀವನ ಮಾಡಲೂ ಸಾಧ್ಯವುಲ್ಲ. ಒಂದೆಲ್ಲಾ ಒಂದು ಸಂದರ್ಭದಲ್ಲಿ ನಾವು ಸಾಲ ತೆಗೆದುಕೊಳ್ಳಲೇಬೇಕಾಗುತ್ತದೆ.

ನಮ್ಮ ಆಸ್ತಿ, ನೀಡುತ್ತಿರುವ ದಾಖಲೆ, ಯಾವ ಕಾರಣಕ್ಕೆ ಸಾಲ ಪಡೆದುಕೊಳ್ಳುತ್ತಿದ್ದೀರಿ, ಕಂತು ಎಷ್ಟು ವರ್ಷದ್ದು? ಈ ಬಗೆಯ ಹಲವಾರು ಸಂಗತಿಗಳನ್ನು ಲೆಕ್ಕ ಹಾಕಬೇಕಾಗುತ್ತದೆ. ಹಾಗಾಗಿ ಸಾಲದಲ್ಲೂ ನಾವು ಎರಡು ಬಗೆಯ ವಿಂಗಡನೆ ಮಾಡಬೇಕು. ಸುಲಭವಾಗಿ ಕೆಟ್ಟ ಸಾಲ ಮತ್ತು ಒಳ್ಳೆಯ ಸಾಲ ಎಂದು ಕರೆದುಕೊಳ್ಳಬಹುದು. [ಗೃಹಸಾಲ ಮತ್ತು ಪ್ರಾಪರ್ಟಿ ಸಾಲದ ನಡುವಿನ ವ್ಯತ್ಯಾಸಗಳೇನು?]

ಒಳ್ಳೆಯ ಸಾಲ: ಶಿಕ್ಷಣಕ್ಕೆ ಪಡೆದುಕೊಳ್ಳುವ ಸಾಲ, ವಾಣಿಜ್ಯ ವ್ಯವಹಾರಕ್ಕೆ ಪಡೆದುಕೊಳ್ಳುವ ಸಾಲ, ಗೃಹ ಸಾಲವನ್ನು ಈ ಕೆಟಗೆರಿ ಅಡಿಯಲ್ಲಿ ಸೇರಿಸಬಹುದು. ಕೆಟ್ಟಸಾಲ: ಕ್ರೆಡಿಟ್ ಕಾರ್ಡ್, ವಾಹನ ಸಾಲ, ವೈಯಕ್ತಿಕ ಸಾಲವನ್ನು ಈ ವಿಭಾಗದಲ್ಲಿ ಹೆಸರಿಸಬಹುದು.

ಒಳ್ಳೆ ಸಾಲ-ಕೆಟ್ಟ ಸಾಲ: ನಡುವಿನ ವ್ಯತ್ಯಾಸ ತಿಳ್ಕೊಳ್ಳಿ

ಒಳ್ಳೆಯ ಸಾಲ
* ಶಿಕ್ಷಣದ ಉದ್ದೇಶಕ್ಕೆ ಸಾಲ

ಉತ್ತಮ ಶಿಕ್ಷಣ ಪಡೆದುಕೊಂಡರೆ ನಂತರ ಉತ್ತಮ ಉದ್ಯೋಗ ಹುಡುಕಿಕೊಂಡು ಆರ್ಥಿಕವಾಗಿ ಸದೃಢರಾಗಬಹುದು. ಈ ಕಾರಣಕ್ಕೆ ಶಿಕ್ಷಣದ ಉದ್ದೇಶಕ್ಕೆ ಸಾಲ ಮಾಡಿದರೇ ಅದು ಯಾವ ಕಾರಣಕ್ಕೂ ತಪ್ಪಾಗುವುದಿಲ್ಲ.

* ಗೃಹ ಸಾಲ:
ಸಾಲ ಪಡೆದು ಮನೆಕಟ್ಟಿದರೆ ಅದು ಸಹ ಒಂದು ಆಸ್ತಿಯಾಗಿಯೇ ಪರಿವರ್ತನೆಗೊಳ್ಳುತ್ತದೆ. ಹಾಗಾಗಿ ಹಾಕಿದ ಹಣ ಎಲ್ಲಿಯೂ ಹೋಗುವುದಿಲ್ಲ. ಮತ್ತೊಂದು ಹೊಸ ಮನೆ ನಿರ್ನಾಣಕ್ಕೆ ಸಾಲ ಮಾಡಿದರೂ ನಷ್ಟವಿಲ್ಲ. ಅದನ್ನು ಬಾಡಿಗೆಗೆ ನೀಡಿದರೆ ಅಲ್ಲಿಂದ ಆದಾಯ ಪಡೆದುಕೊಳ್ಳಬಹುದು.

* ವಾಣಿಜ್ಯ ಸಾಲ
ಸಾಲ ಪಡೆದು ಯಾವುದಾದರೂ ವಾಣಿಜ್ಯ ಕಾರ್ಯಚಟುವಟಿಕೆ ಆರಂಭ ಮಾಡುವುದರಲ್ಲಿ ತಪ್ಪಿಲ್ಲ. ಸಲಹೆ ಮತ್ತು ಸಹಕಾರ ಪಡೆದು ಸಣ್ಣ ಪ್ರಮಾಣದ ಉದ್ದಿಮೆಯನ್ನು ಆರಂಭ ಮಾಡಬಹುದು.[ಅತಿ ಹೆಚ್ಚು ಗೃಹ ಸಾಲ ಪಡೆಯಲು ಏನು ಮಾಡಬೇಕು?]

ಕೆಟ್ಟ ಸಾಲ
ಜೀವನಾವಶ್ಯಕ ಸ್ಥಿತಿಯನ್ನು ಮೀರಿ ಐಷಾರಾಮಿ ಸ್ಥಿತಿಗೆ ಅಗತ್ಯ ಎಂದು ಪಡೆದುಕೊಳ್ಳುವ ಸಾಲಗಳೆಲ್ಲ ಕಟ್ಟ ಸಾಲ ಎಂದೇ ಪರಿಗಣಿತವಾಗುತ್ತದೆ.

* ಕ್ರೆಡಿಟ್ ಕಾರ್ಡ್
ಕ್ರೆಡಿಟ್ ಕಾರ್ಡ್ ಬಳಸಿ ವಸ್ತುಗಳನ್ನು ಖರೀದಿಸಿದರೆ ನಂತರ ಬಡ್ಡಿಯನ್ನು ಕಟ್ಟಬೇಕಾಗುತ್ತದೆ. ಇವು ನಿಮ್ಮ ಆರ್ಥಿಕ ವ್ಯವಸ್ಥೆಯನ್ನೇ ಕೆಲವು ಸಾರಿ ಬುಡಮೇಲು ಮಾಡಬಲ್ಲವು.

* ವೈಯಕ್ತಿಕ ಸಾಲ
ಸಾಮಾನ್ಯವಾಗಿ ವೈಯಕ್ತಿಕ ಸಾಲದ ಮೇಲಿನ ಬಡ್ಡಿದರವೂ ಅಧಿಕವಾಗಿರುತ್ತದೆ.ಅತ್ಯಂತ ಅಗತ್ಯ ಎಂಬ ಸಂದರ್ಭದಲ್ಲಿ ಮಾತ್ರ ಇದರ ಮೊರೆ ಹೋಗಬೇಕು. ಇಲ್ಲವಾದರೆ ಮೂರು-ನಾಲ್ಕು ವರ್ಷ ಇಎಂಐ ತುಂಬುವುದರಲ್ಲಿ ನಾವು ಹೈರಾಣವಾಗಿ ಹೋಗುತ್ತೇವೆ.

* ವಾಹನ ಸಾಲ
ವಾಹನಗಳ ಮೇಲಿನ ಸಾಲ ಸಹ ಕೆಟ್ಟದ್ದೆಂದೇ ವಾಣಿಜ್ಯ ಭಾಷೆಯಲ್ಲಿ ಹೇಳಬಹುದು. ನೀವು ಯಾವ ಕಾರಣಕ್ಕೆ ವಾಹನ ಖರೀದಿಸುತ್ತಿದ್ದೀರಿ, ಅದರಿಂದ ಯಾವುದಾದರೂ ರಿಟರ್ನ್ಸ್ ಇದೇಯಾ ಎಂಬುದು ಸಹ ಅಷ್ಟೇ ಮುಖ್ಯವಾಗುತ್ತದೆ.

ಕೊನೆ ಮಾತು:
ನಾಗರಿಕ ಸಮಾಜದಲ್ಲಿ ಒಂದು ಗೌರವಯುತ ಜೀವನ ನಡೆಸಲು ಸಾಲ ಪಡೆದುಕೊಳ್ಳುವ ಸಂದರ್ಭ ಹಲವಾರು ವೇಳೆ ಎದುರಾಗಬಹುದು. ಆದರೆ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬಂತೆ ಅನಗತ್ಯ ಸಾಲದೆಡೆ ಯಾವ ಕಾರಣಕ್ಕೂ ಹೆಜ್ಜೆ ಹಾಕಬಾರದು(ಗುಡ್ ರಿಟರ್ನ್ಸ್,ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+