ಕ್ರೆಡಿಟ್ ಕಾರ್ಡ್ ಇದೆ ಅಂತ ಮಾಲ್‌ಗೆ ಲಗ್ಗೆ ಇಡೋದಲ್ಲ!

ಶರ್ಮಾ ದಂಪತಿಗೆ ತಮ್ಮ ಮದುವೆಯ 10ನೇ ವಾರ್ಷಿಕೋತ್ಸವ ಸಂಭ್ರಮ. ಹೋಟೆಲ್ ವೊಂದರಲ್ಲಿ ಭೋಜನ ಕೂಟವನ್ನು ಏರ್ಪಡಿಸಿ ಸಡಗರದಲ್ಲಿ ಮಿಂದೆದ್ದಿರುತ್ತಾರೆ. ಕೊನೆಯಲ್ಲಿ ಬಿಲ್ ಪೇ ಮಾಡಲು ಕ್ರೆಡಿಟ್ ಕಾರ್ಟ್ ನೀಡುತ್ತಾರೆ.

ಆದರೆ ಇದ್ದಕ್ಕಿದಂತೆ ಶರ್ಮಾ ದಂಪತಿ ಬಳಿ ಆಗಮಿಸುವ ರೆಸ್ಟೊರೆಂಟ್ ಸಿಬ್ಬಂದಿ 'ನಿಮ್ಮ ಕ್ರೆಡಿಟ್ ಕಾರ್ಡ್ ಕೆಲಸ ಮಾಡುತ್ತಿಲ್ಲ. ಪರ್ಯಾಯ ವ್ಯವಸ್ಥೆ ಮಾಡಿ ಎಂದು ಕೇಳಿಕೊಳ್ಳುತ್ತಾರೆ.

ಈಗ ದಿಗಿಲಿಗೆ ಬೀಳುವ ಸರದಿ ಶರ್ಮಾ ಅವರದ್ದಾಗಿರುತ್ತದೆ. ಅದೃಷ್ಟವಶಾತ್ ಅವರ ಬಳಿ ಮತ್ತೊಂದು ಕ್ರೆಡಿಟ್ ಕಾರ್ಡ್ ಇರುವುದರಿಂದ ಮುಜುಗರಕ್ಕೆ ಸಿಕ್ಕಿಹಾಕಿಕೊಳ್ಳುವುದಿಲ್ಲ.["ಡೆಬಿಟ್, ಕ್ರೆಡಿಟ್ ಕಾರ್ಡ್ ಬಳಸಿ, ತೆರಿಗೆ ಉಳಿಸಿ"]

ಕ್ರೆಡಿಟ್ ಕಾರ್ಡ್ ಇದೆ ಅಂತ ಮಾಲ್‌ಗೆ ಲಗ್ಗೆ ಇಡೋದಲ್ಲ!

ಹೌದು.. ನಾವು ಕ್ರೆಡಿಟ್ ಕಾರ್ಡ್ ಗಳ ಮೇಲೆ ಭಾರೀ ನಂಬಿಕೆ ಇರಿಸಿಕೊಂಡು ಶಾಪಿಂಗ್ ಮಾಲ್ ಗೊ ಅಥವಾ ರೆಸ್ಟೊರೆಂಟ್ ಗೊ ಲಗ್ಗೆ ಇಡುತ್ತೇವೆ. ಆದರೆ ಕೆಲವೊಮ್ಮೆ ಅದು ಕೆಲಸ ಮಾಡದೇ ಕೈ ಕೊಡುತ್ತದೆ. ಯಾಕೆ ಹೀಗಾಗುತ್ತದೆ ಎಂಬುದಕ್ಕೆ ಇಲ್ಲಿದೆ ಉತ್ತರ.

1. ಕ್ರೆಡಿಟ್ ಲಿಮಿಟ್
ಬಹಳಷ್ಟು ಸಂದರ್ಭದಲ್ಲಿ ಕ್ರೆಡಿಟ್ ಕಾರ್ಡ್ ಕಪಲ್ ಗಳ ನಡುವೆ, ಸ್ನೇಹಿತರ ನಡುವೆ ಹಂಚಿಕೆಯಾಗಿರುತ್ತದೆ. ಕ್ಯಾಶ್ ಬ್ಯಾಕ್ ಮತ್ತು ಪಾಯಿಂಟ್ಸ್ ಗೋಸ್ಕರ ಕಂಡಕಂಡಲ್ಲಿ ಬಳಸಿಯೂ ಆಗಿರುತ್ತದೆ.ನಿಮ್ಮ ಬ್ಯಾಲೆನ್ಸ್ ಎಷ್ಟಿದೆ ಎಂಬ ಮಾಹಿತಿ ಗೊತ್ತಿಲ್ಲದೇ ಮಿತಿ ಮೀರಿ ಖರ್ಚು ಮಾಡಿದಾಗ ಸಮಸ್ಯೆಗೆ ಸಿಕ್ಕಿಹಾಕಿಕೊಳ್ಳಬೇಕಾಗುತ್ತದೆ.

2. ತಪ್ಪು ಪಿನ್ ನಮೂದನೆ
ಇದು ಎಲ್ಲರಿಗೂ ಗೊತ್ತಿರುವ ಸಂಗತಿ. ತಪ್ಪು ಪಿನ್ ನಮೂದನೆ ಮಾಡಿದರೆ ನಿಮ್ಮ ಕಾರ್ಡ್ ಕೆಲಸ ಮಾಡುವುದಿಲ್ಲ. ಕಾರ್ಡ್ ಬಳಕೆ ಮಾಡದೇ ತಿಂಗಳುಗಳು ಕಳೆದಿದ್ದರೆ, ಅಥವಾ ನಿಮ್ಮ ಬಳಿ ಒಂದಕ್ಕಿಂದ ಅಧಿಕ ಕಾರ್ಡ್ ಗಳಿದ್ದರೂ ಸಮಸ್ಯೆ ಉದ್ಭವವಾಗಬಹುದು.[ಎಸ್ ಬಿಐನಿಂದ ಆನ್ ಲೈನ್ ಕ್ರೆಡಿಟ್ ಕಾರ್ಡ್ ಬಿಡುಗಡೆ]

3. ಅವಧಿ ಮುಗಿದ ಕಾರ್ಡ್
ನೀವು ಹೊಂದಿರುವ ಕ್ರೆಡಿಟ್ ಕಾರ್ಡ್ ಅವಧಿ ಮುಗಿದು ಹೋಗಿದ್ದು ತಿಳಿಯದೇ ಕಾರ್ಡ್ ಜೇಬಿಗೆ ಹಾಕಿಕೊಂಡು ಹೋದರೂ ಇಂಥ ಸಮಸ್ಯೆ ಉಂಟಾಗಬಹುದು. ಅವಧಿ ಮುಗಿದಿದ್ದರೆ ಸಂಬಂಧಿಸಿದ ಬ್ಯಾಂಕ್ ನಿಂದ ಇನ್ನೊಂದು ಕಾರ್ಡ್ ಪಡೆದುಕೊಳ್ಳಬೇಕು. ಬ್ಯಾಂಕ್ ಈ ಸಂಬಂಧ ನಿಮ್ಮ ಮೊಬೈಲ್ ಗೆ ಸಂದೇಶ ಸಹ ಬಂದಿರುತ್ತದೆ.

4. ಸುರಕ್ಷತಾ ತಂತ್ರಗಳು
ನಿಮ್ಮ ಸಿವಿವಿ ಅಂಕೆ ಸರಿಯಾದ ಕ್ರಮದಲ್ಲಿ ಇಲ್ಲದಿದ್ದರೆ ಅಥವಾ ಡ್ಯಾಮೇಜ್ ಆಗಿದ್ದರೆ ಸಹ ಕಾರ್ಡ್ ತಿರಸ್ಕಾರಕ್ಕೆ ಒಳಪಡಬಹುದು.

5. ಸರ್ವರ್ ಸಮಸ್ಯೆ
ನಿಮ್ಮ ಕಾರ್ಡ್ ಸರಿಯಾಗಿದ್ದೂ ಸರ್ವರ್ ನಲ್ಲಿ ಸಮಸ್ಯೆ ಇದ್ದರೆ ಕಾರ್ಡ್ ಉಪಯೋಗಕ್ಕೆ ಬರುವುದಿಲ್ಲ. ನಿಮ್ಮ ಕಾರ್ಡ್ ನೀಡುವುದಕ್ಕೆ ಮುನ್ನ ವೆಂಡರ್ ಮಶಿನ್ ಅನ್ನು ಮೇಲ್ನೋಟಕ್ಕಾದರೂ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ(ಗುಡ್ ರಿಟರ್ನ್ಸ್.ಇನ್)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+