ದೀಪಾವಳಿ ಸಂಭ್ರಮ ಎದುರಾಗಿದೆ. ಈ ಬಾರಿ ಸಿಗುವ ಬೋನಸ್ ನ್ನು ಹೇಗೆಗೆ ಖರ್ಚು ಮಾಡಬಹುದು ಎಂಬುದನ್ನು ಈಗಾಗಲೇ ಲೆಕ್ಕ ಹಾಕಿಕೊಂಡವರು ಇರಬಹುದು. ಆದರೆ ದುಂದುವೆಚ್ಚ ಮಾಡುವ ಬದಲು ಇದೇ ಹಣವನ್ನು ಉಳಿತಾಯಕ್ಕೆ ಬಳಸಿಕೊಂಡರೆ ಹೇಗೆ?
ಬೋನಸ್ ಹಣವನ್ನು ನಿಮ್ಮ ಸಂತೋಷಕ್ಕೆ ಖರ್ಚು ಮಾಡುವುದರಲ್ಲಿ ಯಾವ ತಪ್ಪಿಲ್ಲ. ಆದರೆ ಅದರಲ್ಲಿಯೇ ಸ್ವಲ್ಪ ಹಣವನ್ನಾದರೂ ಲಾಭದಾಯಕ ಕೆಲಸಕ್ಕೆ ಬಳಸಿಕೊಂಡರೆ ಉತ್ತಮ. ಈ ಹಣ ಖರ್ಚು ಮಾಡುವುದಕ್ಕೂ ಒಂದು ಬಜೆಟ್ ಹಾಕಿಕೊಂಡರೆ ಒಳ್ಳೆಯದು.
ಹಾಗಾದರೆ ದೀಪಾವಳಿ ಬೋನಸ್ ಹಣದಲ್ಲಿಯೂ ಕೊಂಚ ರಿಟರ್ನ್ಸ್ ಅಥವಾ ಲಾಭ ಪಡೆದುಕೊಳ್ಳಬಹುದಾದ ಕೆಲ ಸಂಗತಿಗಳನ್ನು ನೋಡಿಕೊಂಡು ಬರೋಣ...(ಗುಡ್ ರಿಟರ್ನ್ಸ್.ಇನ್)
ಸಾಲ ತೀರಿಸಿ
ಪರ್ಸನಲ್ ಲೋನ್ ಅಥವಾ ವಾಹನ ಸಾಲ ಹೊಂದಿದ್ದರೆ ಅದರ ಇಎಮ್ ಐ ತುಂಬುವುದು ಒಳ್ಳೆಯದು. ಆಸ್ತಿ ನಿರ್ಮಾಣ ಮಾಡಿಕೊಡುವ ಸಾಲವಾಗಿದ್ದರೂ ಕಂತಿಗಿಂತ ಹೆಚ್ಚಿನ ಹಣ ಪಾವತಿ ಮಾಡುವುದರಲ್ಲಿ ತಪ್ಪಿಲ್ಲ.
ತುರ್ತು ನಿಧಿ
ತುರ್ತು ನಿಧಿ ಹೆಸರಲ್ಲಿ ಸ್ವಲ್ಪ ಹಣ ಸಂಗ್ರಹಣೆ ಮಾಡಿ ಇಟ್ಟುಕೊಳ್ಳುವುದು ಆಧುನಿಕ ಸಮಾಜದ ಅಗತ್ಯದಲ್ಲಿ ಒಂದಾಗಿದೆ. ಆ ನಿಧಿಗೆ ನಿಮ್ಮ ದೀಪಾವಳಿ ಬೋನಸ್ ನ ಕೆಲ ಪ್ರಮಾಣವನ್ನು ಸೇರಿಸಬಹುದು.
ತೆರಿಗೆ ಉಳಿತಾಯ
ಬೋನಸ್ ಪಡೆದುಕೊಂಡಿದ್ದು ತೆರಿಗೆ ಪಾವತಿ ಲೆಕ್ಕಕ್ಕೆ ಸೇರುತ್ತದೆ. ಹಾಗಾಗಿ ತೆರಿಗೆ ವಿನಾಯಿತಿ ತಂತ್ರಗಳ ಮೇಲೆ ಅಥವಾ ಯೋಜನೆಗಳ ಮೇಲೆ ಹಣ ಹೂಡಿಕೆ ಮಾಡುವುದು ಒಳಿತು.
ನಿವೃತ್ತಿ ಹಣ
ನಿವೃತ್ತಿ ನಂತರ ನಿರ್ದಿಷ್ಟ ಮೊತ್ತದ ಹಣ ಪ್ರತಿ ತಿಂಗಳು ಕೈ ಸೇರುವಂತೆ ಮಾಡಿಕೊಳ್ಳುವುದು ಒಳ್ಳೆಯದು. ಮಕ್ಕಳ ಶಿಕ್ಷಣ, ಮನೆ ನಿರ್ಮಾಣ ಎಲ್ಲದನ್ನು ಗಮನದಲ್ಲಿಟ್ಟುಕೊಂಡು ಉಳಿತಾಯ ಯೋಜನೆಯಲ್ಲಿ ತೊಡಗಿಸಬಹುದು.
ದೀಪಾವಳಿ ಸಂಭ್ರಮ
ಯೋಜನೆಗಳ ಮೇಲೆ ಹಣ ಹೂಡಿಕೆ ಮಾಡಲು ಹೋಗಿ ದೀಪಾವಳಿ ಸಂಭ್ರವವನ್ನು ಕಳೆದುಕೊಂಡು ನಂತರ ಪರಿತಪಿಸಬಾರದು. ನಿರ್ದಿಷ್ಟ ಬಜೆಟ್ ಹೊಂದಾಣಿಕೆ ಮಾಡಿಕೊಂಡು, ಆಫರ್ ಗಳನ್ನು ಗಮನದಲ್ಲಿ ಇರಿಸಿಕೊಂಡು ಶಾಪಿಂಗ್ ಮಾಡುವುದು ಒಳ್ಳೆಯದು.