ಉಳಿತಾಯದ ಹಣಕ್ಕೆ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳು ಯಾವುವು?

ಭವಿಷ್ಯದಲ್ಲಿ ಉತ್ತಮ ಜೀವನ ನಡೆಸುವ ಕನಸು ಹೊತ್ತ ನಮಗೆ ಮೊದಲು ಎದುರಾಗುವ ಸವಾಲೆಂದರೆ ಹಣ ಸಂಗ್ರಹಣೆ. ಹಣ ಇಂದಿನ ಜಾಯಮಾನಕ್ಕೆ ಬೇಕೆ ಬೇಕು. ಹಾಗಾಗಿ ಪ್ರತಿಯೊಬ್ಬರು ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಳ ಮಾಡಿಕೊಳ್ಳುವ ಕಡೆಗೆ ಆಲೋಚಿಸುತ್ತಿರುತ್ತಾರೆ. ಆಗ ಯಾವ ಬ್ಯಾಂಕಿನಲ್ಲಿ ಹೆಚ್ಚು ಬಡ್ಡಿ ನೀಡಲಾಗುತ್ತದೆ ಎಂದು ಹುಡುಕಿ ಆ ಬ್ಯಾಂಕಿನಲ್ಲಿ ಸೇವಿಂಗ್ಸ್ ಅಕೌಂಟ್ ಇಲ್ಲದಿದ್ದರೂ ಹೊಸದಾಗಿ ಅಕೌಂಟ್ ತೆರೆದು ಹಣ ಉಳಿತಾಯ ಮಾಡುತ್ತೇವೆ.

ಆದರೆ ಇತ್ತೀಚಿನ ದಿನಗಳಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚಳವಾಗುತ್ತಿರುವ ಖಾಸಗಿ ಮತ್ತು ಸರ್ಕಾರಿ ಬ್ಯಾಂಕ್ ಗಳು 4% ಗಿಂತ ಹೆಚ್ಚು ಬಡ್ಡಿ ನೀಡುವುದಿಲ್ಲ. ರಾಷ್ಟ್ರಾದ್ಯಂತ ಕೆಲವೊಂದು ಬ್ಯಾಂಕ್ ಗಳು ಉತ್ತಮ ಬಡ್ಡಿ ದರ ನೀಡಲು ಮುಂದಡಿ ಇಟ್ಟಿದೆ. 4% ಕ್ಕಿಂತ ಅಧಿಕ ಬಡ್ಡಿ ನೀಡುತ್ತಿವೆ.

ಉಳಿತಾಯದ ಹಣಕ್ಕೆ ಅಧಿಕ ಬಡ್ಡಿ ನೀಡುವ ಬ್ಯಾಂಕ್‌ಗಳು ಯಾವುವು?

ಯೆಸ್ ಬ್ಯಾಂಕ್ [Yes Bank]

ಯೆಸ್ ಬ್ಯಾಂಕ್ ತನ್ನ ಗ್ರಾಹಕರಿಗೆ ವಾರ್ಷಿಕವಾಗಿ 7% ಬಡ್ಡಿ ನೀಡುತ್ತಿದೆ. ಈ ಬಡ್ಡಿ ದರವು ಬೇರೆ ಬ್ಯಾಂಕ್ ಗಳಲ್ಲಿ ಕಾಯ್ದಿರಿಸಿದ ಹಣದ (Fixed Deposite) ಬಡ್ಡಿಗೆ ಸಮಾನವಾಗಲಿದೆ. ಆದರೆ ಬಡ್ಡಿ ದರ ಹೆಚ್ಚಳವು ಆರ್ಥಿಕತೆಯ ಏರಿಕೆ ಮತ್ತು ಇಳಿಕೆಯನ್ನು ಅವಲಂಬಿಸಿರುತ್ತದೆ. ಅಂದರೆ ದೇಶದ ಆರ್ಥಿಕ ಮಟ್ಟ ಏರಿಕೆ ಕಂಡಲ್ಲಿ ಬಡ್ಡಿದರ ಇನ್ನಷ್ಟು ಹೆಚ್ಚಳವಾಗುವ ಸಂಭವವಿರುತ್ತದೆ

ಕೊಟಕ್ ಮಹೀಂದ್ರ ಬ್ಯಾಂಕ್ [Kotak Mahindra Bank]

ಮಹೀಂದ್ರ ಬ್ಯಾಂಕ್ ಕೂಡ ಗ್ರಾಹಕರ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ವಾರ್ಷಿಕವಾಗಿ 6% ಬಡ್ಡಿ ನೀಡಲು ನಿರ್ಧರಿಸಿದೆ. ಯೆಸ್ ಬ್ಯಾಂಕ್ ಗೆ ಹೋಲಿಸಿದರೆ ಕಡಿಮೆ ಎನಿಸಿದರೂ ಬಡ್ಡಿಯ ದರ ಏರಿಕೆಯೂ ಗ್ರಾಹಕರ ಉಳಿತಾಯ ಹಣದ ಮೇಲೆ ನಿಗದಿಯಾಗುತ್ತದೆ.

ಇಂಡಸ್ಯಾಂಡ್ ಬ್ಯಾಂಕ್ [IndusInd Bank]

ಇಂಡಸ್ಯಾಂಡ್ ಬ್ಯಾಂಕ್ ವಾರ್ಷಿಕವಾಗಿ 6% ಬಡ್ಡಿ ನೀಡುತ್ತಿದ್ದು, ಗ್ರಾಹಕನು ತನ್ನ ಖಾತೆಯಲ್ಲಿ 10ಲಕ್ಷಕ್ಕಿಂತ ಹೆಚ್ಚು ಹಣವನ್ನು ಉಳಿತಾಯ ಮಾಡಿರಬೇಕು. ಅದಕ್ಕಿಂತ ಕಡಿಮೆ ಇದ್ದಲ್ಲಿ ಒಂದು ಲಕ್ಷ ರು.ಗೆ 5% ಬಡ್ಡಿದರ ನೀಡಲಾಗುತ್ತದೆ. ನಂತರ ಮಾಮೂಲಿಯಾಗಿ ಬೇರೆ ಬ್ಯಾಂಕ್ ಗಳಲ್ಲಿ ದೊರೆಯುವ 4% ಬಡ್ಡಿಯನ್ನೇ ನೀವು ನೆಚ್ಚಿಕೊಳ್ಳಬೇಕಾಗುತ್ತದೆ.

ಆರ್ ಬಿಎಲ್ ಬ್ಯಾಂಕ್ [ Ratnakar Bank Limited]

ಗ್ರಾಹಕನು ತನ್ನ ಉಳಿತಾಯ ಖಾತೆಯಲ್ಲಿ 10ಲಕ್ಷ ಹಣವನ್ನು ನಿರಂತರವಾಗಿ ಕಾಯ್ದಿರಿಸಿದ್ದಲ್ಲಿ ವಾರ್ಷಿಕವಾಗಿ 7.1% ಬಡ್ಡಿ ಪಡೆಯುವ ಅವಕಾಶ ಆರ್ ಬಿಎಲ್ ಬ್ಯಾಂಕ್ ನಿಂದ ದೊರೆಯಲಿದೆ. ಆಕಸ್ಮಿಕವಾಗಿ ಉಳಿತಾಯ 10 ಲಕ್ಷಕ್ಕಿಂತ ಕಡಿಮೆಯಾದಲ್ಲಿ ಬಡ್ಡಿ ದರವು ಒಂದು ಲಕ್ಷಕ್ಕೆ 6.1% ಮತ್ತು 5.1% ಹೀಗೆ ನಿರಂತರವಾಗಿ ಬಡ್ಡಿ ಇಳಿಕೆಯಾಗುತ್ತಾ ಹೋಗುತ್ತದೆ.

ಉಳಿತಾಯ ಖಾತೆಗಳಲ್ಲಿ 10,000ಕ್ಕಿಂತ ಮೇಲ್ಪಟ್ಟು ಹಣ ಇದ್ದಲ್ಲಿ ಬ್ಯಾಂಕಿನಲ್ಲಿ ಟಿಡಿಎಸ್ (Tax deducted at Source)ಕೂಡ ಕಡಿತಗೊಳ್ಳುತ್ತದೆ. ಒಟ್ಟಿನಲ್ಲಿ ಉತ್ತಮ ಬಡ್ಡಿಯು ತೆರಿಗೆ ವಿನಾಯಿತಿಯ ಮೇಲೆ ಅವಲಂಬಿತವಾಗಿರುತ್ತದೆ ಎಂಬುದನ್ನು ಮಾತ್ರ ಮರೆಯುವಂತಿಲ್ಲ.(ಗುಡ್ ರಿಟರ್ನ್ಸ್.ಇನ್)

More From GoodReturns

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+